Asianet Suvarna News Asianet Suvarna News

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ರು ರಾಜ್ಯದ ಕ್ರೀಡಾಪಟುಗಳಿಗೆ ಸಿಗ್ತಿಲ್ವಾ ಬೆಂಬಲ ?

ಕ್ರೀಡೆಗೆ ರಾಜ್ಯದಲ್ಲಿ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ವ..? ಕ್ರೀಡಾಪಟುಗಳನ್ನು ಗುರುತಿಸುವ ಕೆಲಸ ನಡೆಯುತ್ತಿಲ್ವಾ..?, ನೇಮಕಾತಿ ಅಧಿಸೂಚನೆ ಬರೀ ಪತ್ರಕಷ್ಟೇ ಸೀಮಿತಾನಾ?..ಹೀಗೊಂದು ಅನುಮಾನ ರಾಜ್ಯಾದ್ಯಂತ ಮೂಡಿದೆ. 
 

ಕರುನಾಡು ಸಾಕಷ್ಟು ಕ್ರೀಡಾಪಟುಗಳ ತವರೂರು. ರಾಜ್ಯದ ಹಲವು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ತಂದುಕೊಟ್ಟು ಕೀರ್ತಿ ಮೆರೆದಿದ್ದಾರೆ. ಇಂತಹದರ ನಡುವೆಯೇ ಪದಕ ಗೆದ್ದ ಕ್ರೀಡಾಪಟುಗಳನ್ನು(Sportspersons) ರಾಜ್ಯದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ವ ಎಂಬ ಅನುಮಾನ ಮೂಡಿದೆ. ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಹಲವರು ಉದ್ಯೋಗ(Job) ಪಡೆದಿದ್ದಾರೆ. ಆದರೆ ಕಳೆದ ಒಂದಿಷ್ಟು ವರ್ಷಗಳಿಂದ ಪದಕ ಗೆದ್ದ ಕ್ರೀಡಾ ಪಟುಗಳಿಗೆ ಉದ್ಯೋಗ ಕೊಡುವಲ್ಲಿ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಅದರಲ್ಲೂ ಪ್ಯಾರಾ ಒಲಂಪಿಕ್ಗಳಲ್ಲಿ ಭಾಗವಹಿಸಿ ಪದಕ ಗೆದ್ದ ಅನೇಕ ವಿಶೇಷಚೇತನ ಕ್ರೀಡಾಪಟುಗಳಿದ್ದಾರೆ. ಇವರಲ್ಲಿ ಕೆಲವರಿಗೆ ಕ್ರೀಡಾ ಕೋಟಾದಡಿ ಉದ್ಯೋಗ ದೊರೆತರೂ ಮುಂಬಡ್ತಿ ಸಿಗುತ್ತಿಲ್ಲ ಅನ್ನೋ ಆರೋಪ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕ್ರೀಡಾಕೋಟದಡಿ ನಮ್ಮ ರಾಜ್ಯದಲ್ಲಿ ಉದ್ಯೋಗ ಕೊಡುವ ವಿಚಾರದಲ್ಲಿ ತುಂಬಾ ವಿಳಂಬವಾಗುತ್ತಿದೆ. ಹೀಗಾದ್ರೆ ಕೆಲವು ಕ್ರೀಡಾಪಟುಗಳ ವಯಸ್ಸಿನ ಮಿತಿ ಮೀರುವುದರಿಂದ ಮುಂದೆ ಉದ್ಯೋಗ ಪಡೆಯುವುದು ಕಷ್ಟವಾಗಲಿದೆ ಎನ್ನುತ್ತಿದ್ದಾರೆ ಪದ್ಮಶ್ರೀ ವಿಜೇತ ಪ್ಯಾರ ಒಲಂಪಿಕ್ ಕ್ರಿಡಾಪಟು ಕೆ.ವೈ ವೆಂಕಟೇಶ್. ಕರ್ನಾಟಕದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಕುರಿತಂತೆ ಸಚಿವಾಲಯದಿಂದ ಕಳೆದ ಮಾರ್ಚ್ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದ್ರೆ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಹೊಸ ಸರ್ಕಾರ ಆಸ್ತಿತ್ವಕ್ಕೆ ಬಂದ ಬಳಿಕ ಬರೀ ಗ್ಯಾರಂಟಿ ಕಡೆಗೇ ನೋಡದೆ ನಮ್ಮತ್ತವೂ ಸ್ವಲ್ಪ ನೋಡಿ ಅನ್ನುತ್ತಿದ್ದಾರೆ ಕ್ರೀಡಾ ಸಾಧಕರು.

ಇದನ್ನೂ ವೀಕ್ಷಿಸಿ:  ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಸಂಘರ್ಷ: ಕರಾವಳಿಗೂ ಹಬ್ಬಿದ ಮಹಿಷ ದಸರಾ ನಂಟು..!

Video Top Stories