userpic
user icon

ಡಾರ್ಲಿಂಗ್ ಕೃಷ್ಣನ 'ಶುಗರ್ ಫ್ಯಾಕ್ಟರಿ' ಓಪನ್: ಸಿಕ್ಕಾಪಟ್ಟೆ ಸ್ವೀಟ್ ಕನ್ನಡದ ಈ ಹಾಟ್ ಕೇಕ್..!

Bindushree N  | Published: Oct 1, 2023, 9:38 AM IST

ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕೃಷ್ಣನ ಅವತಾರಗಳನ್ನ ತೆರೆ ಮೇಲೆ ತಂದ ಸ್ಟಾರ್. ಕನ್ನಡದಲ್ಲಿ ಈಗಿನ ಲವ್ ಸಿನಿಮಾಗಳ ಸರದಾರ ಈ ಕೃಷ್ಣ. ಮೊನ್ನೆ ಮೊನ್ನೆಯಷ್ಟೆ ಕೌಸಲ್ಯಾ ಸುಪ್ರಜಾ ರಾಮ(Kousalya Supraja Rama) ಅಂತ ಕೃಷ್ಣನ ಜಪ ಮಾಡಿದ್ದ ನೀವೆಲ್ಲಾ ಈಗ ಡಾರ್ಲಿಂಗ್ ಕೃಷ್ಣ ಓಪನ್ ಮಾಡಿರೋ ಶುಗರ್ ಫ್ಯಾಕ್ಟರಿಗೆ(sugar factory movie) ಭೇಟಿ ಕೊಡೋ ಟೈಂ ಬಂದಿದೆ. ಈ ಶುಗರ್ ಫ್ಯಾಕ್ಟರಿ ಸಿಕ್ಕಾಪಟ್ಟೆ  ಸ್ವೀಟ್ ಜೊತೆ ಹಾಟ್ ಕೇಕ್ ಕೂಡ ಆಗಿದೆ. ಡಾರ್ಲಿಂಗ್ ಕೃಷ್ಣನ(Darling Krishna) 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. 'ಲವ್‌ ಮಾಕ್ಟೇಲ್ 2' ಬಳಿಕ ಕೃಷ್ಣಗೆ ಮತ್ತೊಂದು ಬಿಗ್ ಸಕ್ಸಸ್ ಸಿಕ್ಕಿದೆ. ಇದೇ ಖುಷಿಯ ಅಲೆಯ್ಲಿರೋ ಕೃಷ್ಣ ಈಗ ಶುಗರ್ ಫ್ಯಾಕ್ಟರಿ ಟ್ರೈಲರ್ ಕೊಟ್ಟಿದ್ದಾರೆ. ಶುಗರ್ ಫ್ಯಾಕ್ಟರಿ ಸಿಹಿಯ ಕಾರ್ಖಾನೆ. ಅಫ್ ಕೋರ್ಸ್ ಈ ಸಿನಿಮಾ ಕೂಡ ಸಿಹಿಯಾದ ಪ್ರೀತಿಯ ಮಾಧೂರ್ಯ ತುಂಬಿದೆ. ಯುತ್ಸ್ಗೆ ಅದ್ಯಾವಾಗ ಯಾರ್ ಮೇಲೆ ಹೇಗೆ ಲವ್ ಆಗುತ್ತೋ ಗುತ್ತಾಗಲ್ಲ. ಅಟ್ ದಿ ಸೇಮ್ ಟೈಂ ಹೇಗೆ ಬ್ರೇಕಪ್ ಆಗಿತ್ತೆ ಅಂತಲೂ ಹೇಳೋಕಾಗಲ್ಲ. ರೀಸನ್ ಅಲ್ಲದ ರೀಸನ್ಗೆ ಲವ್ ಆಗುತ್ತೆ ಬ್ರೇಕಪ್ ಆಗುತ್ತೆ. ಇಂತಹ ಹ್ಯಾಪನಿಂಗ್ ಕತೆ ಇಟ್ಕೊಂಡು ಅದ್ಭುತ ಸಿನಿಮಾ ಮಾಡಿದ್ದಾರೆ ನಿರ್ದೇಶಕ ದೀಪಕ್ ಅರಸ್. ಈಗಿನ ಟ್ರೆಂಡ್, ಜಮಾನದ ಯೂತ್ಸ್ಫುಲ್ ಸಿನಿಮಾ ಶುಗರ್ ಫ್ಯಾಕ್ಟರಿಯಲ್ಲಿ ಮೂರು ಜನ ಹೀರೋಯಿನ್ಸ್. ಬನಾರಸ್ ಚೆಲುವೆ ಸೋನಲ್ ಮಂಥೋರ, ರುಹಾನಿ ಶೆಟ್ಟಿ, ಅಧ್ವಿತಿ ಶೆಟ್ಟಿ ಶುಗರ್ ಫ್ಯಾಕ್ಟರಿ ಶುಗರ್ ಹೆಚ್ಚಿಸಿದ್ದಾರೆ. ಎಮೋಷನಲ್ ಜತೆ ನಕ್ಕು ನಗಿಸಲು ರಂಗಾಯಣರಘು ಜೊತೆಯಾಗಿದ್ದಾರೆ. ಈ ಬ್ಯಟಿಫುಲ್ ಸಿನಿಮಾವನ್ನ ಗಿರೀಶ್ ಅದ್ಧೂರಿಯಾಗಿ ನಿರ್ಮಿಸಿದ್ದು, ಅದ್ಧೂರಿ ತಾರಗರಣ ಶುಗರ್ ಫ್ಯಾಕ್ಟರಿ ನವೆಂಬರ್ 24ಕ್ಕೆ ರಿಲೀಸ್ ಆಗ್ತಿದೆ.

ಇದನ್ನೂ ವೀಕ್ಷಿಸಿ:  ಒರಿಜಿನಲ್ ಗ್ಯಾಂಗ್‌ಸ್ಟರ್ ಅಬ್ಬರಕ್ಕೆ ಬೆಚ್ಚಿದ ಮೌಳಿ ! 'ಘೋಸ್ಟ್' ಟ್ರೈಲರ್ ರಿಲೀಸ್ ಮಾಡ್ತಾರೆ ಜಕ್ಕಣ್ಣ..!

Must See