Asianet Suvarna News Asianet Suvarna News

ABP-CVoter Survey: ಮತದಾನಕ್ಕೂ ಮುನ್ನ ಮತ್ತೊಂದು ಮೆಗಾ ಸರ್ವೆ: ಕರುನಾಡಲ್ಲಿ 'ಕೈ' ಗ್ಯಾರಂಟಿನಾ? ಮೋದಿ ಮ್ಯಾಜಿಕ್ಕಾ?

2024ರ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಎಬಿಪಿ-ಸಿವೋಟರ್‌ ಹೈವೋಲ್ಟೇಜ್‌ ಸರ್ವೆಯನ್ನು ನಡೆಸಿದೆ. ಮೋದಿ, ರಾಹುಲ್‌ ಗಾಂಧಿ ಬಗ್ಗೆ ಇಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ.

ಮೊದಲ ಹಂತದ ಮತದಾನಕ್ಕೂ ಮುನ್ನ ಮಹಾ ಸಮೀಕ್ಷೆಯೊಂದು ಹೊರಬಂದಿದೆ. 2024ರ ಲೋಕಸಭಾ ಚುನಾವಣೆಯ(Loksabha Eection 2024) ಹೈವೋಲ್ಟೇಜ್‌ ಸಮೀಕ್ಷೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಕಾರ್ಯನಿರ್ವಹಣೆಗೆ ಈ ಸಮೀಕ್ಷೆಯಲ್ಲಿ ಮಾರ್ಕ್ಸ್‌ನನ್ನೂ ನೀಡಲಾಗಿದೆ. ರಾಹುಲ್‌ ಗಾಂಧಿ(Rahul Ghandhi), ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿ ಸಮರ್ಥರಾ ಎಂದು ಸಹ ಪ್ರಶ್ನೆಯನ್ನು ಕೇಳಲಾಗಿದೆ. ಪ್ರಧಾನಿ ಸ್ಥಾನಕ್ಕೆ ಮೋದಿ ಬಿಟ್ಟರೇ ಇನ್ಯಾರು ಸೂಕ್ತ ? ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ ಎಬಿಪಿ-ಸಿವೋಟರ್‌ ಸರ್ವೆಯನ್ನು(ABP-CVoter survey) ನಡೆಸಲಾಗಿದೆ. ಕೇಂದ್ರ ಸರ್ಕಾರದ ಕಾರ್ಯ ನಿರ್ವಹಣೆ ಬಗ್ಗೆ ತುಂಬಾ ಸಂತೃಪ್ತಿ ಇದೆ ಎಂದು ಶೇ.40, ಸಂತೃಪ್ತಿ ಇದೆ-ಶೇ.30, ಸಂತೃಪ್ತಿ ಇಲ್ಲ- ಶೇ.28, ಗೊತ್ತಿಲ್ಲ ಎಂದು ಶೇ.2ರಷ್ಟು ಜನ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಅಶೋಕ ಅಷ್ಟಮಿ ಏಕೆ ಆಚರಿಸಬೇಕು ? ಇದರ ಮಹತ್ವವೇನು ?

Video Top Stories