Asianet Suvarna News Asianet Suvarna News

ಸಿಬ್ಬಂದಿ ಯಡವಟ್ಟಿನಿಂದ ಮೃತಪಟ್ಟನಾ ಅರ್ಜುನ? ಕಾಡಾನೆ ಎದುರು ಬಲ ಕಳೆದುಕೊಂಡು ಬಲಿ?

ಕಾಡಾನೆ ಎದುರು ಬಲ ಕಳೆದುಕೊಂಡು ಬಲಿಯಾದ ಅರ್ಜನ
ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಹೆಚ್ಚಿದ ಒತ್ತಾಯ
ಕಾರ್ಯಾಚರಣೆ ವೇಳೆ ಯಡವಟ್ಟು,ಸೂಕ್ತ ತನಿಖೆಗೆ ಆಗ್ರಹ

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆಗೆ ಬೀಳಬೇಕಿದ್ದ ಅರವಳಿಕೆ ಮದ್ದು ಅರ್ಜುನನಿಗೆ ಬಿದ್ದಿದೆ ಎನ್ನಲಾಗ್ತಿದೆ. ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಬಲ ಕಳೆದುಕೊಂಡ ಅರ್ಜುನ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗ್ತಿದೆ. ಕಾಡಾನೆ ಜತೆ ಕಾದಾಡಲಾಗದೆ ಅರ್ಜನ(Arjuna)ಸೋಲಪ್ಪಿದ್ದು, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಯಡವಟ್ಟು ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮದದಲ್ಲಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ(forest department) ಮುಂದಾಗಿತ್ತು. ಸೆರೆಗೆ ತೆರಳಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದು, ತಪ್ಪಾಗಿ ಅರ್ಜುನನ ಕಾಲಿಗೆ ತಗುಲಿದೆ ಎಂದು ಹೇಳಲಾಗ್ತಿದೆ.ಈ ಬಗ್ಗೆ ಆನೆ(Elephant) ಮಾವುತರೊಬ್ಬರ ಹೇಳಿಕೆ ನೀಡಿದ್ದಾರೆ. ಕಾಲಿಗೆ ಗುಂಡು ಬೀಳುತ್ತಲೇ ಅರ್ಜುನ ಕುಗ್ಗಿದ್ದಾನೆ. ಹಠಾತ್ ಆಗಿ ಕಾಡಾನೆ ದಾಳಿ ಮಾಡಿದೆ. ಹಾಗಾಗಿ ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ವೇಳೆ ಮತ್ತೊಂದು ಅರಣ್ಯ ಇಲಾಖೆ ಕಾರ್ಯಾಚರಣೆ ಸಿಬ್ಬಂದಿ ಯಿಂದ ಮತ್ತೊಂದು  ಯಡವಟ್ಟು ಆಗಿದೆ ಎಂದು ತಿಳಿದುಬಂದಿದೆ. ಕಾಡಾನೆಗೆ ಅರವಳಿಗೆ ಮದ್ದು ನೀಡೋ ವೇಳೆ ಗುರಿ ತಪ್ಪಿ ಮತ್ತೊಂದು ಸಾಕಾನೆಗೆ ಅರವಳಿಕೆಯನ್ನು ಸಿಬ್ಬಂದಿ ನೀಡಿದ್ದಾರೆ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲಕಳೆದುಕೊಂಡು ಸಮಸ್ಯೆ ಆಗಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಒಂಟಿಯಾಗಿ ಹೋರಾಡಿ ಜೀವತೆತ್ತ ಅರ್ಜುನ: ಕಾಡಾನೆ ಕಾರ್ಯಾಚರಣೆ ವೇಳೆ ಹಂಟರ್ ಸ್ಪೆಷಲಿಸ್ಟ್ ಸಾವು !

Video Top Stories