Asianet Suvarna News Asianet Suvarna News

Gyanvapi 'Shivaling' Case: ಕಾರ್ಬನ್‌ ಪರೀಕ್ಷೆ ಕೋರಿದ್ದ ಅರ್ಜಿ ಸ್ವೀಕಾರ: ಹೊರ ಬೀಳುತ್ತಾ ಬಚ್ಚಿಟ್ಟ ರಹಸ್ಯ?

Gyanvapi 'Shivling' Case: ಗ್ಯಾನವಾಪಿ ಮಸೀದಿಯಲ್ಲಿ ದೊರೆತಿದೆ ಎನ್ನಲಾಗಿರುವ ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಸಮ್ಮತಿಸಿದೆ 

ನವದೆಹಲಿ (ಸೆ. 26): ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣ (Gyanvapi Mosque Row) ನಿಮಗೆಲ್ಲ ಗೊತ್ತೇ ಇದೆ. ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವರ ಮೂರ್ತಿಗಳಿಗೆ ಪ್ರತಿನಿತ್ಯ ಪೂಜೆಗೆ ಅವಕಾಶ ಕೊಡಿ ಎಂದು ಐವರು ಹಿಂದೂ ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಹಿಂದೂ ಮಹಿಳೆಯರ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಈ ಕುರಿತು ಈಗ ಮತ್ತೊಂದು ಇಂಟ್ರಸ್ಟಿಂಗ್ ಅರ್ಜಿಯೊಂದು ಕೋರ್ಟ್ ಮೆಟ್ಟಿಲೇರಿದೆ. 

ಗ್ಯಾನವಾಪಿ ಮಸೀದಿಯಲ್ಲಿ ದೊರೆತಿದೆ ಎನ್ನಲಾಗಿರುವ ಶಿವಲಿಂಗದ ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಮಾಡಬೇಕು ಎಂದು ಕೋರಿ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಸಮ್ಮತಿಸಿದೆ. ಜೊತೆಗೆ ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಮುಂದಿನ ವಿಚಾರಣೆಯೊಳಗೆ ಸಲ್ಲಿಸುವಂತೆ ಮಸೀದಿ ಆಡಳಿತಕ್ಕೆ ಕೋರ್ಚ್‌ ಸೂಚಿಸಿದೆ. ಈ ಕಾರ್ಬನ್ ಡೇಟಿಂಗ್ ಟೆಸ್ಟ್ನಿಂದ ಎಷ್ಟು ಸಾವಿರ ವರ್ಷಗಳವರೆಗಿನ ವಸ್ತುಗಳನ್ನ ನಾವು ಪತ್ತೆ ಮಾಡಬಹುದು? ಕಾರ್ಬನ್ ಡೇಟಿಂಗ್ ಟೆಸ್ಟ್‌ಗೆ ಕೋರ್ಟ್ ಕೊಟ್ಟಿರೋ ಒಪ್ಪಿಗೆ ಕುರಿತು ಮಸೀದಿ ಆಡಳಿತ ಮಂಡಳಿ ಅಭಿಪ್ರಾಯವೇನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌ 

ಅಯೋಧ್ಯೆ ರೀತಿ ಕೋರ್ಟ್‌ನಲ್ಲಿಯೇ ಇತ್ಯರ್ಥವಾಗಲಿದ್ದಾನೆ ಕಾಶಿ ವಿಶ್ವನಾಥ!