Asianet Suvarna News Asianet Suvarna News

ಭಾರತ ನಾಗರಿಕ ಹಕ್ಕುಗಳ ಕುರಿತು ಅನುಮಾನ ಪಟ್ಟಿತಾ ವಿಶ್ವಸಂಸ್ಥೆ..? ಕೇಜ್ರಿವಾಲ್ ಬಂಧನ ರಾಜಕೀಯ ಪ್ರೇರಿತ ಎಂದು ಹೇಳಿದ್ಯಾರು..?

ಕೇಜ್ರಿವಾಲ್ ಬಂಧನದಿಂದ ದೇಶದಲ್ಲಿ ಕಾನೂನು ಹಾಳಾಯ್ತಾ? 
ಬಂಧನದಿಂದ ದೇಶದಲ್ಲಿ ನಾಗರಿಕ ಹಕ್ಕು ಉಲ್ಲಂಘನೆ ಆಯ್ತಾ..? 
ಅರವಿಂದ್ ಕೇಜ್ರಿವಾಲ್ ಬಂಧನ ಕುರಿತು ವಿಶ್ವ ಸಂಸ್ಥೆ ಪ್ರತಿಕ್ರಿಯೆ

ಅಮೆರಿಕಾ, ಜರ್ಮನಿ ನಂತರ ವಿಶ್ವಸಂಸ್ಥೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಬೆನ್ನಿಗೆ ನಿಂತಿದೆ. ಕೇಜ್ರಿವಾಲ್ ಬಂಧನದಿಂದ(Arrest) ದೇಶದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ ಕುರಿತು ವಿಶ್ವ ಸಂಸ್ಥೆ(UNO) ಪ್ರಶ್ನೆ ಮಾಡಿದೆ. ಜಾರಿ ನಿರ್ದೇಶನಾಲಯ ಮೊನ್ನೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಅಬಕಾರಿ ನೀತಿ ಹರಣದಲ್ಲಿ ಆದ ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ದೆಹಲಿ(Delhi) ಕೋರ್ಟ್ ಏಪ್ರಿಲ್ 2ರವರೆಗೂ ಇಡಿ ವಶಕ್ಕೆ ಕೊಟ್ಟಿದೆ. ಹೀಗಾಗಿ ಬಂಧನದಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಏಪ್ರಿಲ್2ರ ವರೆಗೆ ವಿಚಾರಣೆಗೆ ಒಳ ಪಡಿಸುತ್ತೆ. ಅರವಿಂದ್ ಕೇಜ್ರಿವಾಲ್ ಬಂಧನ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜಗತ್ತಿನ ಪ್ರಮುಖ ದೇಶದಗಳು ದೆಹಲಿ ಸಿಎಂ ಬಂಧನ ಕುರಿತು ಮಾತ್ನಾಡುತ್ತಿವೆ. ಕೆಲ ದೇಶಗಳು ಕೇಜ್ರಿವಾಲ್ರನ್ನು ಬಂಧನ ಮುಕ್ತಗೊಳಿಸಿ ಎಂದು ಭಾರತಕ್ಕೆ ಬುದ್ದಿ ಹೇಳುತ್ತಿವೆ. ಇನ್ನು ಕೆಲ ದೇಶಗಳು ಎಲೆಕ್ಷನ್ ಸಂದರ್ಭದಲ್ಲಿ ಕೇಜ್ರಿವಾಲ್ ಬಂಧನ ಸರಿ ಅಲ್ಲವೆಂದು ಕೂಗಿಕೊಳ್ಳುತ್ತಿವೆ. ಹಾಗಿದ್ರೆ, ಭಾರತದಲ್ಲಿ ಈ ಹಿಂದೆ ಯಾವ ರಾಜ್ಯದ ಸಿಎಂ ಬಂಧನ ಆಗಿರ್ಲಿಲ್ವಾ? ಅಧಿಕಾರದಲ್ಲಿದ್ದಾಗಲೇ ಈ ಹಿಂದೆ ಅನೇಕ ಸಿಎಂಗಳ ಬಂಧನವಾಗಿದೆ. ಈ ಹಿಂದೆ ಅಮೆರಿಕಾ ಮತ್ತು ಜರ್ಮನ್ ದೇಶಗಳು ಕೇಜ್ರಿವಾಲ್ ಬಂಧನ ಪ್ರಶ್ನಿಸಿದ್ದವು. ಭಾರತವನ್ನು ಪ್ರಶ್ನಿಸಿದ ಈ ದೇಶಗಳಿಗೆ ಭಾರತ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟಿದೆ. 

ಇದನ್ನೂ ವೀಕ್ಷಿಸಿ:  ಅತ್ತ 4 ಗೋಡೆಗಳ ಮಧ್ಯೆ ಅಧ್ಯಕ್ಷ..ಇತ್ತ ಸೋನಿಯಾ ಪಟ್ಟಾಭಿಷೇಕ..! ಹಿಂಗ್ಯಾಕ್ ಮಾಡಿದ್ರೀ ಮೇಡಂ..?