Asianet Suvarna News Asianet Suvarna News

Belagavi: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಪುಂಡರ ಖ್ಯಾತೆ: ಯುವಕರ ಮೇಲೆ ಮತ್ತೊಂದು ಗುಂಪಿನಿಂದ ಕಲ್ಲು ತೂರಾಟ

ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಗಾವಿಯ ಪಾಟೀಲ ಗಲ್ಲಿಯಲ್ಲಿ ನಡೆದಿದೆ.
 

ಬೆಳಗಾವಿ: ಜಿಲ್ಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಪರಸ್ಪರ ಕಲ್ಲು ತೂರಾಟ(Stone pelting) ನಡೆದಿದೆ. ಜೈ ಶ್ರೀರಾಮ್‌ (Jai Shri Ram) ಎಂದು ಘೋಷಣೆ ಕೂಗಿದ್ದಕ್ಕೆ ಮತ್ತೊಂದು ಗುಂಪಿನವರು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಿಂದ ಕೆಲಹೊತ್ತು ಆತಂಕ ಉಂಟಾಗಿತ್ತು. ಬೆಳಗಾವಿಯ(Belagavi) ಪಾಟೀಲ ಗಲ್ಲಿಯಲ್ಲಿ ಘಟನೆ ನಡೆದಿದೆ. ಜೈಶ್ರೀರಾಮ ಎಂದು ಘೋಷಣೆ ಕೂಗುತ್ತಾ ಒಂದು  ಯುವಕರ ಗುಂಪು ಹೊರಟಿತ್ತು. ಈ ಯುವಕರ ಗುಂಪಿನ ಮೇಲೆ ಮತ್ತೊಂದು ಗುಂಪಿನ ಯುವಕರಿಂದ ಕಲ್ಲು ತೂರಾಟ ನಡೆಸಲಾಗಿದೆ. ಆಗ ಪ್ರತಿಯಾಗಿ ಕಲ್ಲು ತೂರಿದ ಯುವಕರು. ತಕ್ಷಣವೇ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರಿಂದ(Police) ಲಘು ಲಾಠಿ ಚಾರ್ಜ್ ಮಾಡಲಾಗಿದೆ. ಬಳಿಕ ತಕ್ಷಣವೇ ‌ಸ್ಥಳದಿಂದ ಕಾಲ್ಕಿತ್ತು ಎರಡು ಗುಂಪಿನ ಯುವಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ‌ಠಾಣೆ ಪೊಲೀಸರ‌ ಭೇಟಿ ನೀಡಿ, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿ‌ ನಿಯೋಜನೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಪ್ರದೋಷ ಪೂಜೆ ಮಾಡಿ..ಇದರಿಂದ ದೊರೆಯುವ ಫಲಗಳೇನು ಗೊತ್ತಾ ?

Video Top Stories