ಆಸ್ಕರ್ ಗೆದ್ದ ರಾಮ್‌ಚರಣ್‌ಗೆ ಹೈದ್ರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ..!
ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್ ಸಿನಿಮಾಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿದೆ. ಭಾರತೀಯ ಸಿನಿ ಅಭಿಮಾನಿಗಳು ಸೇರಿದಂತೆ ನಟ, ನಟಿಯರು, ತಂಡಕ್ಕೆ ಶುಭ ಕೋರುತ್ತಿದ್ದಾರೆ. ದೇಶದಲ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ನಾಟು ನಾಟು ಸಖತ್ ಹಿಟ್ ಆಗಿತ್ತು. ನಂತರ ಪ್ರಂಪಂಚದಾದ್ಯಂತ ರಾಮ್ ಚರಣ್ ಮತ್ತು ಎನ್ಟಿಆರ್ ಡ್ಯಾನ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇನ್ನು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿ ಹೈದ್ರಾಬಾದ್‌ಗೆ ಆಗಮಿಸಿದ ರಾಮ್ ಚರಣ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.