userpic
user icon

ರಾಕಿಂಗ್ ಸ್ಟಾರ್ ಹೊಗಳಿದ ಟಾಲಿವುಡ್‌ ಸ್ಟಾರ್‌...ಯಶ್‌ ಬಗ್ಗೆ ರಾಮ್ ಚರಣ್ ಹೇಳಿದ್ದೇನು ?

Sushma Hegde  | Published: Mar 20, 2023, 1:01 PM IST

ರಾಮ್ ಚರಣ್ ಸಂದರ್ಶನದಲ್ಲಿ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ನಿಲ್ಲಬೇಕೆಂದರೆ ಏನು ಮುಖ್ಯ ಎಂಬ ವಿಷಯದ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್‌ನ್ನು ಉದಾಹರಣೆಗೆ ತೆಗೆದುಕೊಂಡ ನಿರೂಪಕರು ಓರ್ವ ಬಸ್ ಡ್ರೈವರ್ ಮಗ ಇಂದು ಸ್ಟಾರ್ ಆಗಿದ್ದಾರೆ, ನೀವೂ ಸಹ ಸ್ಟಾರ್ ಆಗಿದ್ದೀರ ಎಂದು ಹೋಲಿಕೆ ಮಾಡಿ ರಾಮ್ ಚರಣ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಇದಕ್ಕೆ ರಾಮ್ ಚರಣ್ ನೀಡಿದ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯಶ್‌ಗೆ ಪ್ರತಿಭೆ ಇದ್ದ ಕಾರಣ ಇಂದು ಯಶಸ್ಸು ಸಾಧಿಸಿದ್ದಾರೆ. ಯಶ್ ಮಾತ್ರವಲ್ಲ ಯಾವ ನಟನಾದರೂ ಸಹ ಪ್ರತಿಭೆ ಇದ್ದರೆ ಮಾತ್ರ ಸೂಪರ್ ಸ್ಟಾರ್ ಆಗಲು ಸಾಧ್ಯ' ಎಂದು ಹೇಳಿಕೆ ನೀಡಿದ್ದಾರೆ.ಹಾಗೆ  ಟ್ಯಾಲೆಂಟ್ ಇದ್ದರೆ ಮಾತ್ರ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ನಿಲ್ಲಬಹುದು, ಸ್ಟಾರ್ ನಟನ ಮಗನಾಗಿ ಚಿತ್ರರಂಗ ಪ್ರವೇಶಿಸಿದರೂ ಸಹ ಪ್ರತಿಭೆ ಇದ್ದರೆ ಮಾತ್ರ ಆ ನಟ ಸ್ಟಾರ್ ಆಗಲು ಸಾಧ್ಯ ಎಂದು  ರಾಮ್ ಚರಣ್ ಹೇಳಿದ್ದಾರೆ.

Must See