userpic
user icon

Orry ಹಿಂದೆ ಬಿದ್ದ ಬಾಲಿವುಡ್ ಊರ ಮಂದಿ: ಈತನ ಬಗ್ಗೆ ತಿಳಿದು ತಬ್ಬಿಬ್ಬಾದ ಸಲ್ಮಾನ್ ಖಾನ್!

Govindaraj S  | Updated: Nov 29, 2023, 1:09 PM IST

ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಾಗ್ತಿರೋ ವ್ಯಕ್ತಿ ಓರಿ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು, ಸ್ಟಾರ್ ಕಿಡ್ಸ್, ಜನಸಾಮಾನ್ಯರಿಗೂ ಇವನೆಂದರೆ ಇಷ್ಟ. ಅಷ್ಟಕ್ಕೂ ಯಾರೀ ಓರಿ? ಈತನ ಸಿಗ್ನೇಚರ್ ಪೋಸ್ ಹಿಂದಿನ ಗುಟ್ಟೇನು? ಓರಿ ಎಂದರೆ ಈತನ ಹೆಸರು ಓರ್ಹಾನ್ ಅವತ್ರವಮಣಿ. ಓರಿ ಇತ್ತೀಚೆಗೆ ಬಿಗ್​ಬಾಸ್ ಮನೆಯಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಜೊತೆ ಮಾತನಾಡುವಾಗ ಶಾಕಿಂಗ್ ವಿಚಾರವೊಂದನ್ನು ಓರಿ ರಿವೀಲ್ ಮಾಡಿದರು. ನೀವು ಜೀವನಕ್ಕಾಗಿ ಏನು ಮಾಡುತ್ತೀರಿ ಎಂದು ಸಲ್ಮಾನ್ ಖಾನ್ ಹೇಳಿದಾಗ ಓದಿ ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾ? ಓರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ. ಇದಲ್ಲದೆ ಓರಿ ಹಲವಾರು ಆಡ್ ಜಾಬ್​ಗಳನ್ನು ಮಾಡಿದ್ದಾಗಿ ಬಿಗ್​ಬಾಸ್ ವೇದಿಕೆಯಲ್ಲಿ ರಿವೀಲ್ ಮಾಡಿದ್ದಾರೆ. ಅಂದ ಹಾಗೆ ಓರಿಗೆ 5 ಜನರು ಮ್ಯಾನೇಜರ್ಸ್ ಇದ್ದಾರಂತೆ. ಮದುವೆ, ಪಾರ್ಟಿಗಳಿಗೆ ಜನರು ಬನ್ನಿ ಎಂದು ಒತ್ತಾಯಿಸಿ ಕರೆಸುತ್ತಾರಂತೆ. ಪಾರ್ಟಿಗೆ ಬನ್ನಿ. ನಮ್ಮ ಜೊತೆಗೂ ಅದೇ ರೀತಿ ಪೋಸ್ ಕೊಡಿ ಎಂದು ಜನರೇ ಬೇಡಿಕೆ ಇಟ್ಟು ನನ್ನನ್ನು ಕರೆಸಿಕೊಳ್ಳುತ್ತಾರೆ ಎಂದಿದ್ದಾರೆ ಓರಿ. ಈ ಮೂಲಕ ಓರಿ ಒಂದು ದಿನದಲ್ಲಿ 20-30 ಲಕ್ಷದ ತನಕ ದುಡಿಯುತ್ತಾರಂತೆ.

Must See