ಆ ಕೆಟ್ಟ ಮಹಿಳೆ ನಯನತಾರಾ ಕಂಡ್ರೆ ಪಕ್ಕಾ ಒದೆಯುತ್ತೇನೆ; ಕಿಡಿಕಾರಿದ್ದ ಪ್ರಭುದೇವ ಮಾಜಿ ಪತ್ನಿ ರಾಮಲತಾ

Synopsis
ನಟಿ ನಯನತಾರಾ ಈಗ ಇಬ್ಬರು ಮಕ್ಕಳು, ಪತಿ ಜೊತೆಗೆ ಸುಂದರ ಸಂಬಂಧ ಹೊಂದಿರಬಹುದು. ಆದರೆ ಈ ಹಿಂದೆ ಮದುವೆಯಾಗಿರೋ ಪುರುಷನ ಜೊತೆ ಸಂಬಂಧ ಹೊಂದಿದ್ದಕ್ಕೆ ನಯನತಾರಾ ದೊಡ್ಡ ವಿವಾದದ ಕೇಂದ್ರಬಿಂದು ಆಗಿದ್ದರು. ಇನ್ನು ಪ್ರಭುದೇವ ಪತ್ನಿ ಲತಾ ಅವರು ಒದೆಯುತ್ತೇನೆ ಎಂದು ಹೇಳಿದ್ದರು.
‘ಲೇಡಿ ಸೂಪರ್‌ಸ್ಟಾರ್’ ನಯನತಾರಾ ಈಗ ಮದುವೆಯಾಗಿ, ಇಬ್ಬರು ಗಂಡು ಮಕ್ಕಳ ಜೊತೆ ಜೀವನ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಅವರು ಕಾಂಟ್ರವರ್ಸಿಯ ಕೇಂದ್ರಬಿಂದು ಆಗಿದ್ದರು.
ಪಬ್ಲಿಕ್‌ನಲ್ಲಿ ಹೇಳಿದ್ರಾ ಪ್ರಭುದೇವ?
ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ, ನಯನತಾರಾ ರಿಲೇಶನ್‌ಶಿಪ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಈ ಸಂಬಂಧವು ಹಲವಾರು ವಿವಾದಗಳನ್ನು ಸೃಷ್ಟಿ ಮಾಡಿತ್ತು. ಲತಾ ಜೊತೆಗೆ ಸಂಸಾರ ಮಾಡುತ್ತಿದ್ದ ಪ್ರಭುದೇವ ಅವರು ನಯನತಾರಾ ಜೊತೆಗೆ ಇದ್ದಿದ್ದೇ ದೊಡ್ಡ ಸಮಸ್ಯೆ ಆಗಿತ್ತು. 2010 ರ ಸೆಪ್ಟೆಂಬರ್‌ನಲ್ಲಿ, ಪ್ರಭುದೇವ ಅವರು ಸಾರ್ವಜನಿಕವಾಗಿ ನಯನತಾರಾ ಅಂದ್ರೆ ಇಷ್ಟ, ಮದುವೆ ಆಗ್ತೀನಿ ಎಂದು ಘೋಷಿಸಿದಾಗ ಎಲ್ಲರಿಗೂ ಆಘಾತವಾಯಿತು. ಗಂಡ ನನಗೆ ಡಿವೋರ್ಸ್ ಕೊಡ್ತಾನೆ, ಇನ್ನೊಂದು ಮದುವೆ ಆಗ್ತಾನೆ ಅಂತ ಗೊತ್ತಾದಾಗ ಲತಾಗೆ ನಿಜಕ್ಕೂ ಜಗತ್ತೇ ತಲೆಕೆಳಗಡೆ ಆದ ಹಾಗೆ ಆಗಿತ್ತು.
1000 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ಯಾಕೆ ಸಮಂತಾ?
ಪ್ರಭುದೇವ ಒಳ್ಳೆಯ ಗಂಡ!
ಇಂಟರ್‌ನ್ಯಾಷನಲ್ ಬಿಜಿನೆಸ್ ಟೈಮ್ಸ್ ಪ್ರಕಾರ, ಲತಾ ಅವರು ಫಿಲ್ಮಿಬೀಟ್‌ಗೆ ನೀಡಿದ ಸ್ಫೋಟಕ ಸಂದರ್ಶನದಲ್ಲಿ ನಯನತಾರಾ ವಿರುದ್ಧ ತೀವ್ರವಾಗಿ ವಾಗ್ದಾಳಿ ಮಾಡಿದ್ದರು. ಆಗ ಅವರು ತಮ್ಮ ಮಾಜಿ ಪತಿಯ ಬಗ್ಗೆ ಯಾವುದೇ ದೂರು ಹೇಳಿರಲಿಲ್ಲ. ನನ್ನ ಮದುವೆ ಜೀವನ ಹಾಳಾಯ್ತು ಎಂದು ನಯನತಾರಾ ಮೇಲೆ ದೂಷಿಸಿದ್ದರು. “ಪ್ರಭುದೇವ ಒಬ್ಬ ಪ್ರಾಮಾಣಿಕ, ದಯಾಳು ಗಂಡ, ಕಳೆದ 15 ವರ್ಷಗಳಿಂದ ನಮ್ಮನ್ನು ತುಂಬ ಪ್ರೀತಿ, ಕಾಳಜಿಯಿಂದ ನೋಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ನಮಗಾಗಿ ಮನೆಯೊಂದನ್ನು ಖರೀದಿಸಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಅವರ ಈಗಿನ ವರ್ತನೆ ನನಗೆ, ದೇವ ಅವರ ಕುಟುಂಬಕ್ಕೂ ದೊಡ್ಡ ಆಘಾತ ತಂದಿದೆ. ಮದುವೆ ಆಗಿರೋ ಪುರುಷನು ಇನ್ನೊಂದು ಮಹಿಳೆಯನ್ನು ಮದುವೆಯಾಗಲು ಕೌಟುಂಬಿಕ ಕಾನೂನು ಅನುಮತಿ ನೀಡೋದಿಲ್ಲ” ಎಂದು ಲತಾ ಹೇಳಿದ್ದರು.
ಒದೆಯುತ್ತೇನೆ!
ಲತಾ ಅವರು ಮಾತನಾಡಿ, ನಯನತಾರಾ ಸಿಕ್ಕರೆ ಒದೆಯುತ್ತೇನೆ, ಅವಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬೇರೆಯವರ ಗಂಡನನ್ನು ಕಾನೂನುಬಾಹಿರವಾಗಿ ಕದಿಯುವ ಮಹಿಳೆಯನ್ನು ಶಿಕ್ಷಿಸಬೇಕು. ನನ್ನ ಗಂಡನನ್ನು ಕದಿಯಲು ಉದ್ದೇಶಿಸಿದ್ದಕ್ಕಾಗಿ ನಯನತಾರಾರನ್ನು ಪೊಲೀಸರು, ನ್ಯಾಯಾಲಯವು ಬಂಧಿಸಬೇಕು ಅಂತ ಮನವಿ ಮಾಡ್ತೀನಿ. ಆ ನಟಿಯನ್ನು ಎಲ್ಲಿಯಾದರೂ ಕಂಡರೆ, ನಾನು ಖಂಡಿತವಾಗಿಯೂ ಅವಳಿಗೆ ಒದೆಯುತ್ತೇನೆ. ಕೆಟ್ಟ ಮಹಿಳೆ ಯಾರು ಎನ್ನೋದಿಕ್ಕೆ ಅವಳು ಉತ್ತಮ ಉದಾಹರಣೆ” ಎಂದು ಹೇಳಿದ್ದರು. ಪ್ರಭುದೇವ, ಲತಾಗೆ ಮೂವರು ಮಕ್ಕಳಿದ್ದು, ಕ್ಯಾನ್ಸರ್‌ನಿಂದ ಅವರು ಓರ್ವ ಮಗನನ್ನು ಕಳೆದುಕೊಂಡಿದ್ದಾರೆ. ಇನ್ನೋರ್ವ ಮಗ ರಿಷಿ ರಾಘವೇಂದ್ರ ದೇವ ಅವರು ತಂದೆಯ ಜೊತೆಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಪ್ರಭುದೇವ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, “ನನ್ನ ಮಗನನ್ನು ಪರಿಚಯ ಮಾಡಿಕೊಡ್ತಿದ್ದೀನಿ” ಎಂದು ಹೇಳಿದ್ದರು.
69 ವರ್ಷದ ನಟನೊಂದಿಗೆ ನಟಿಸಲು ನಯನತಾರಾ ಕೇಳಿದ ಸಂಭಾವನೆ ಕೇಳಿ ನಿರ್ಮಾಪಕರು ಶಾಕ್
ಎರಡನೇ ಮದುವೆ ಆಗಿರೋ ಪ್ರಭುದೇವ!
ಲತಾ, ಪ್ರಭುದೇವಗೆ 2010 ರ ಜುಲೈನಲ್ಲಿ ವಿಚ್ಛೇದನ ಸಿಕ್ಕಿತ್ತು. ಆದರೆ ನಯನತಾರಾ, ಪ್ರಭದೇವ ಮದುವೆಗೆ ಸಾಕಷ್ಟು ಅಡೆ ಇದ್ದು, ಇವರಿಬ್ಬರು ದೂರ ಆದರು. ಅನೇಕ ಮಹಿಳಾ ಸಂಘಟನೆಗಳು ನಯನತಾರಾ ವಿರುದ್ಧ ತಿರುಗಿ ಬಿದ್ದಿದ್ದವು. ಇನ್ನು ಪ್ರಭುದೇವ ಅವರು ನಯನತಾರಾ ಜೊತೆ ಮದುವೆ ಆದರೆ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಲತಾ ಬೆದರಿಕೆ ಹಾಕಿದ್ದರು. 2012ರಲ್ಲಿ ನಯನತಾರಾ ಅವರು ಪ್ರಭುದೇವ ಜೊತೆಗೆ ಇದ್ದ ಸಂಬಂಧ ಅಂತ್ಯ ಆಗಿದೆ ಎಂದು ಅಧಿಕೃತವಾಗಿ ಹೇಳಿದ್ದರು. 2020ರಲ್ಲಿ ಪ್ರಭುದೇವ ಅವರು ಮುಂಬೈ ಮೂಲದ ಫಿಸಿಯೋಥೆರಪಿಸ್ಟ್ ಹಿಮಾನಿ ಎನ್ನುವವರನ್ನು ಮದುವೆಯಾಗಿದ್ದಾರೆ. ಆಗ ಅವರಿಗೆ 47 ವರ್ಷ ವಯಸ್ಸಾಗಿತ್ತು. ಅಂದಹಾಗೆ 2023ರಲ್ಲಿ ಈ ಜೋಡಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದೆ.