Asianet Suvarna News Asianet Suvarna News

ಮತ್ತೆ ಸಮುದ್ರಕ್ಕೆ ಧಮುಕಲು ಸಿದ್ಧವಾದ ಟೈಟಾನಿಕ್‌!

ಇಷ್ಟು ದಿನ ಟೈಟಾನಿಕ್ ಹಡಗೊಂದು ಇತ್ತು ಎನ್ನುವ ಕಥೆ ಕೇಳ್ತಿದ್ವಿ. ಆದ್ರೆ ಇನ್ಮುಂದೆ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸುವ ಅವಕಾಶ ಸಿಗ್ತಿದೆ. ಟೈಟಾನಿಕ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. 
 

Titanic Is Getting Ready To Dive Into The Sea Again roo
Author
First Published Mar 16, 2024, 12:38 PM IST

ಟೈಟಾನಿಕ್ ಎಂದಾಗ ನೆನಪಾಗೋದು ದೊಡ್ಡ ಹಡಗಿನಲ್ಲಿ ನಡೆದ ಸುಂದರ ಪ್ರೇಮಕಥೆ. ಇದ್ರ ಜೊತೆಗೆ ಅಬ್ಬರ, ಕೂಗಾಟ, ಕಿರುಚಾಟದ ಮಧ್ಯೆ ನೀರುಪಾಲಾಗುವ ದೈತ್ಯಾಕಾರದ ಹಡಗು. ಟೈಟಾನಿಕ್ ಸಿನಿಮಾ ನೋಡದ ಜನರಿಲ್ಲ. ಹಾಗೆ ಹತ್ತಾರು ಬಾರಿ ಚಿತ್ರ ವೀಕ್ಷಣೆ ಮಾಡಿದವರಿದ್ದಾರೆ. ಟೈಟಾನಿಕ್ ಹಡಗಿನ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಸುಮಾರು 112 ವರ್ಷಗಳ ಹಿಂದೆ, ಟೈಟಾನಿಕ್ ಹಡಗು, ಅಟ್ಲಾಂಟಿಕ್ ಸಾಗರದಲ್ಲಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ನಂತರ ಮುಳುಗಿತ್ತು. ಈ ಘಟನೆ ನಡೆದು ದಶಕಗಳೇ ಕಳೆದಿವೆ. ಜಗತ್ತಿನಲ್ಲಿ ಅನೇಕ ಜನರಿಗೆ ಇಂದಿಗೂ ಅದು ರಹಸ್ಯವಾಗಿಯೇ ಉಳಿದಿದೆ. ಅಲ್ಲಿ ಏನಾಗಿತ್ತು, ಏಪ್ರಿಲ್ 14 , 1912 ರಂದು 1,517 ಜನರು ಪ್ರಾಣ ಕಳೆದುಕೊಳ್ಳಲು ಕಾರಣವಾಗಿದ್ದು ಏನು ಎಂಬುದನ್ನು ತಿಳಿಯುವ ಕುತೂಹಲ ಈಗ್ಲೂ ಜನರಿಗಿದೆ. 

ಇಂದಿಗೂ ಟೈಟಾನಿಕ್ (Titanic) ಜಗತ್ತಿಗೆ ಬಿಡಿಸಲಾಗದ ರಹಸ್ಯ (Secret) ವಾಗಿಯೇ ಉಳಿದಿದೆ. ಈ ಮಧ್ಯೆ ಟೈಟಾನಿಕ್ ಹಡಗ (Ship) ನ್ನು ಮರು ನಿರ್ಮಾಣ ಮಾಡಬೇಕೆಂಬ ಆಸೆಯನ್ನು ಅನೇಕರು ಹೊಂದಿದ್ದಾರೆ. ಒಂದ್ವೇಳೆ ಅದು ಮರು ನಿರ್ಮಾಣವಾದ್ರೆ ಅಲ್ಲಿ ಸವಾರಿ ಮಾಡುತ್ತ ರೋಮ್ಯಾನ್ಸ್, ಥ್ರಿಲ್ ಅನುಭವ ಪಡೆಯಬಹುದು ಎಂಬುದು ಜನರ ಅಭಿಪ್ರಾಯ. ಅಂಥವರ ಕನಸು ಈಗ ನನಸಾಗಿದೆ. ಆಸ್ಟ್ರೇಲಿಯನ್ ಬಿಲಿಯನೇರ್ ಟೈಟಾನಿಕ್ ಅನ್ನು ಮರು ನಿರ್ಮಿಸುವ ತನ್ನ ಯೋಜನೆಯನ್ನು ಪುನರಾರಂಭಿಸಿದ್ದಾರೆ. ಆಸ್ಟ್ರೇಲಿಯಾದ ಗಣಿಗಾರಿಕೆ ದೈತ್ಯ ಕ್ಲೈವ್ ಪಾಮರ್ ಈ ಟೈಟಾನಿಕ್ ಹಡಗನ್ನು ನಿರ್ಮಿಸಲಿದ್ದಾರೆ. ಹೊಸ ಟೈಟಾನಿಕ್ ಹಡಗು ಅದರ ಮೂಲಕ್ಕಿಂತ ಹೆಚ್ಚು ಉತ್ತಮವಾಗಿರಲಿದೆ ಎಂದು ಕ್ಲೈವ್ ಪಾಮರ್ ಜನರಿಗೆ ಭರವಸೆ ನೀಡಿದ್ದಾರೆ. ಆಸ್ಟ್ರೇಲಿಯಾದ ಪಾಮರ್  ಟೈಟಾನಿಕ್ II ಅನ್ನು ಮೊದಲು 2012 ರಲ್ಲೇ ಯೋಜಿಸಲು ಪ್ರಾರಂಭಿಸಿದ್ದರು. ಕೋವಿಡ್‌ನಿಂದಾಗಿ 2018 ರಲ್ಲಿ ಎರಡನೇ ಪ್ರಯತ್ನವೂ ವಿಫಲವಾಯಿತು. ಟೈಟಾನಿಕ್ ಮರುನಿರ್ಮಾಣ ಮಾಡುವ ಬಗ್ಗೆ ಆಲೋಚನೆ ಮಾಡುವುದು ಮನೆಯಲ್ಲಿ ಕುಳಿತು ಹಣ ಎಣಿಸುವುದಕ್ಕಿಂತ ಹೆಚ್ಚು ಖುಷಿ ನೀಡುತ್ತದೆ ಎಂದಿದ್ದಾರೆ. 

ಎಂಟು ಕಣ್ಣಿನ ಹೊಸ ಚೇಳು ಥೈಲ್ಯಾಂಡಲ್ಲಿ ಪತ್ತೆ: ಈ ಜೀವಜಾಲದಲ್ಲಿ ಇನ್ನೂ ಎಂತಹ ಅಚ್ಚರಿಗಳಿವೆಯೋ?!

ಟೈಟಾನಿಕ್ ಹಡಗಿನ ಸಿದ್ಧತೆ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಅದರ ಮೊದಲ ಪ್ರಯಾಣ ನಿಗದಿಯಾಗಿದೆ. ಸೌತಾಂಪ್ಟನ್‌ನಿಂದ ನ್ಯೂಯಾರ್ಕ್‌ಗೆ ಅದರ ಮೊದಲ ಪ್ರಯಾಣವನ್ನು ಜೂನ್ 2027 ರಂದು ನಿಗದಿಪಡಿಸಲಾಗಿದೆ.

ಈವರೆಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗದಷ್ಟು ಸೌಲಭ್ಯಗಳು ಈ ಟೈಟಾನಿಕ್ ಹಡಗಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸಿಗಲಿದೆ. ಹಡಗಿನ ಒಳಭಾಗ ಮತ್ತು ಕ್ಯಾಬಿನ್ ವಿನ್ಯಾಸವು ಬಾಲ್ ರೂಂ, ಈಜುಕೊಳ (Swimming Pool) ಮತ್ತು ಟರ್ಕಿಶ್ ಸ್ನಾನಗೃಹಗಳೊಂದಿಗೆ (Turkish Bath Room) ಮೂಲ ಹಡಗಿನಂತೆಯೇ ಇರಲಿದೆ. ಟೈಟಾನಿಕ್ ಹಡಗಿನಲ್ಲಿ 835 ಕ್ಯಾಬಿನ್‌ ಇರಲಿದೆ. ಇದ್ರಲ್ಲಿ ಅರ್ಧದಷ್ಟು ಕ್ಯಾಬಿನ್‌ಗಳನ್ನು ಪ್ರಥಮ ದರ್ಜೆ ಪ್ರಯಾಣಿಕರಿಗೆ ಮೀಸಲಿಡಲಾಗುವುದು. ಇಲ್ಲಿನ ಇನ್ನೊಂದು ಆಸಕ್ತಿಕರ ವಿಷ್ಯ ಅಂದ್ರೆ ಟೈಟಾನಿಕ್ 2 ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ 1900 ರ ವೇಷಭೂಷಣಗಳನ್ನು ಧರಿಸಲು ಪ್ರೋತ್ಸಾಹಿಸಲಾಗುವುದು. 

ಈ ಹಡಗಿನಲ್ಲಿ ಎಲ್ಲ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಮೂರನೇ ದರ್ಜೆ ಪ್ರಯಾಣಿಕರಿಗೆ ಮೂಲ ಟೈಟಾನಿಕ್ ಹಡಗಿನ ಸೌಲಭ್ಯದಂತೆ ಸಾಮಾನ್ಯ ಡೈನಿಂಗ್ ಹಾಲ್ ನಲ್ಲಿ ಊಟದ ವ್ಯವಸ್ಥೆ ಆಗಲಿದೆ. ಟೈಟಾನಿಕ್ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ. ಜೇಮ್ಸ್ ಕ್ಯಾಮರೂನ್ ಕೂಡ ಅದರಿಂದ ಪ್ರಭಾವಿತರಾಗಿದ್ದರು. ಟೈಟಾನಿಕ್ ಚಿತ್ರ ನಿರ್ಮಾಣ ಮಾಡಿ 1997 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು.

ವಿಶ್ವದ ಅತ್ಯಂತ ಅತೃಪ್ತ ದೇಶ ಯಾವುದು? ಭಾರತವೂ ಹ್ಯಾಪಿಯಾಗಿದ್ಯಾ?

ಟೈಟಾನಿಕ್ ಚಿತ್ರದ ಬಗ್ಗೆ ಮಾತನಾಡಿದ ಪಾಮರ್, ಜ್ಯಾಕ್ ಮತ್ತು ರೋಸ್ ಅವರ ಪ್ರೇಮಕಥೆ ಎಲ್ಲರ ಹೃದಯ ಸ್ಪರ್ಶಿಸುತ್ತದೆ ಎಂದಿದ್ದಾರೆ. ಟೈಟಾನಿಕ್ ಎರಡು ಶಾಂತಿಯನ್ನು ನೀಡಲಿದೆ. ಅದು ವಿಶ್ವದ ಅನೇಕ ದೇಶಗಳ ಮಧ್ಯೆ ಶಾಂತಿ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಪಾಮರ್ ಹೇಳಿದ್ದಾರೆ. 

Follow Us:
Download App:
  • android
  • ios