Asianet Suvarna News Asianet Suvarna News

 ಚಾಮರಾಜನಗರ: ಕಾಡಂಚಿನ ಗ್ರಾಮದ ಸುಸಜ್ಜಿತ ಪ್ರಾಥಮಿಕ ಕೇಂದ್ರಕ್ಕೆ ವೈದ್ಯರಿದ್ದೂ ಪ್ರಯೋಜನವಿಲ್ಲ!

ಕಾಡಂಚಿನ ಜನರಿಗೆ ಆರೋಗ್ಯ ಹದಗೆಟ್ರೆ ಅಂಥವರ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಸರ್ಕಾರ ಕಟ್ಟಿಸಿದೆ. ಆದ್ರೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಕಾಡಂಚಿನ ಜನ ಪರದಾಡುವಂತಹ ಪರಿಸ್ಥಿತಿ ಈಗ ಎದುರಾಗಿದೆ. ವೈದ್ಯರ ಸಮಸ್ಯೆಗೆ ಕಾಡಂಚಿನ ಜನರು ಬಸವಳಿದು ಹೋಗಿದ್ದಾರೆ. 

Chaos in primary health centers of villages in Chamarajanagar district rav
Author
First Published Nov 8, 2023, 12:00 AM IST

ವರದಿ - ಪುಟ್ಟರಾಜು.

ಚಾಮರಾಜನಗರ (ನ.7): ಕಾಡಂಚಿನ ಜನರಿಗೆ ಆರೋಗ್ಯ ಹದಗೆಟ್ರೆ ಅಂಥವರ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಸರ್ಕಾರ ಕಟ್ಟಿಸಿದೆ. ಆದ್ರೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಕಾಡಂಚಿನ ಜನ ಪರದಾಡುವಂತಹ ಪರಿಸ್ಥಿತಿ ಈಗ ಎದುರಾಗಿದೆ. ವೈದ್ಯರ ಸಮಸ್ಯೆಗೆ ಕಾಡಂಚಿನ ಜನರು ಬಸವಳಿದು ಹೋಗಿದ್ದಾರೆ. 

ಹೌದು ಹೇಳಿ ಕೇಳಿ ಚಾಮರಾಜನಗರ ಜಿಲ್ಲೆ ಅಧಿಕ ಕಾಡು ಪ್ರದೇಶದಿಂದ ಕೂಡಿರುವ ಪ್ರದೇಶ ಇಲ್ಲಿ ಕಾಡಂಚಿನ ಗ್ರಾಮಗಳಿಂದ ಆಸ್ಪತ್ರೆಗೆ ಹೋಗಬೇಕಾದರೆ  ಹತ್ತಾರು ಕಿಲೋ ಮೀಟರ್ ಬೆಟ್ಟ ಗುಡ್ಡ ಹತ್ತಿ ಆಸ್ಪತ್ರೆ ಸೇರಬೇಕಾಗಿದೆ.  ಈ ಹಿನ್ನಲೆಯಲ್ಲಿ ರಾಮಾಪುರದಲ್ಲಿ ಒಂದು ಸುಸಜ್ಜಿತವಾದ ಬೃಹತ್ ಕಟ್ಟಡ, ಅತ್ಯಾಧುನಿಕವಾದ ಯಂತ್ರೋಪಕರಣಗಳು. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇರದ ಹಾಗೇ ಇರುವ ಈ ಸರ್ಕಾರಿ ಆಸ್ಪತ್ರೆ ಕಾಣ ಸಿಗೋದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದಲ್ಲಿ. ಇಷ್ಟು ಸುಸಜ್ಜಿತ ಕಟ್ಟಡ ಯಂತ್ರೋಪಕರಣವಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರವೇ ಈ ಭಾಗದ ಜನರ ಕೇಂದ್ರ ಬಿಂದು. 

ಕುಡಿಯುವ ನೀರಿಗೆ ಆಧಾರವಾಗಿದ್ದ ಅರ್ಕಾವತಿ ನದಿ‌ ಕಲುಷಿತ; ಡಿಸಿಎಂ ತವರು ಜಿಲ್ಲೆಗೇ ಇದೆಂಥ ದುಸ್ಥಿತಿ!

ಇಷ್ಟೆಲ್ಲಾ ಅತ್ಯಾಧುನಿಕ ಕಟ್ಟಡ ಯಂತ್ರೋಪಕರಣವಿದ್ರು, ಚಿಕಿತ್ಸೆಗೆಂದು ರೋಗಿಗಳು ಬಂದ್ರೆ ಅಂತ ರೋಗಿಗಳನ್ನ ಚಿಕಿತ್ಸೆ ನೀಡಲು ವೈದ್ಯರು ಇರುವುದೇ ಇಲ್ಲವೆಂಬ ಗಂಭೀರ ಆರೋಪ ಕೇಳಿ ಬಂದಿದೆ. ರೋಗಿಗಳಿಗೆ ವೈದ್ಯರ ಬದಲಾಗಿ ನರ್ಸ್ ಗಳು ಚಿಕಿತ್ಸೆ ನೀಡುತ್ತಿದ್ದಾರೆಂಬ ಆರೋಪ ಮಾಡ್ತಿದ್ದಾರೆ. ಜನರಿಗಾಗಿ ಕರ್ತವ್ಯ ನಿರ್ವಹಿಸುವ ವೈದ್ಯರ ನೇಮಕಾತಿ ಮಾಡಿ ಎಂಬ ಕೂಗು ಕೇಳಿ ಬರ್ತಾಯಿದೆ.

ಇನ್ನೂ ರಾಮಾಪುರ ತಮಿಳುನಾಡು ಗಡಿಗೆ ಹೊಂದಿಕೊಂಡಿದೆ. ಮಲೆ ಮಹದೇಶ್ವರ ಬೆಟ್ಟದ ಹತ್ತಿರದಲ್ಲಿರುವ ಪ್ರದೇಶದ ಹತ್ತಾರು ಪೋಡುಗಳ ಜನರು ಅನಾರೋಗ್ಯಕ್ಕೆ ತುತ್ತಾದರೆ  ಈ ರಾಮಾಪುರ ಸರ್ಕಾರಿ ಆಸ್ಪತ್ರೆಗೆ ಬರಬೇಕು. ಇಂತಹ ರಿಮೋಟ್ ಏರಿಯಾದಲ್ಲಿ ಅದರಲ್ಲೂ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಇರುವುದು ಕಾಡಂಚಿನ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಡೆಲಿವರಿಗೆಂದು ಗರ್ಭಿಣಿಯರು ಬಂದ್ರೆ ಅಂತವರನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ಔಷಧಗಳಿದ್ರು ಹೊರಗಡೆ ಖಾಸಗಿ ಮೆಡಿಕಲ್ ಶಾಪ್ ಗಳಿಗೆ ಚೀಟಿ ಬರೆದು ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನ ಸ್ಥಳೀಯರು ಮಾಡುತ್ತಿದ್ದಾರೆ..

ಅಬಕಾರಿ ಇಲಾಖೆಯಿಂದ ಭಾರೀ ಮದ್ಯಸಾರ ಬೇಟೆ; ಶಾಸಕ‌ ಸೈಲ್‌ಗೆ ಕಂಟಕವಾಯ್ತಾ ಪ್ರಕರಣದ ಮಧ್ಯ ಪ್ರವೇಶ?

ಒಟ್ನಲ್ಲಿ ಸರ್ಕಾರ ಇಂತಹ ರಿಮೋಟ್ ಕಂಟ್ರೋಲ್ ಏರಿಯಾದಲ್ಲಿ ಚಿಕಿತ್ಸೆ ಕೊಡಲು ವೈದ್ಯರನ್ನೆನೋ ನೇಮಿಸಿದೆ. ಆದ್ರೆ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸ್ತಿಲ್ಲವೆಂಬ ಗಂಭೀರ ಆರೋಪ ಮಾಡ್ತಿದ್ದು, ಯಾವುದೇ ದುರ್ಘಟನೆ ಸಂಭವಿಸುವ ಮುನ್ನ ಎಚ್ಚೆತ್ತು ಜನರ ಸಂಕಷ್ಟಕ್ಕೆ ಧಾವಿಸುವ ವೈದ್ಯರ ನೇಮಿಸಬೇಕೆಂಬ ಒತ್ತಾಯ ಕೇಳಿಬಂದಿದೆ..

Follow Us:
Download App:
  • android
  • ios