ಹಾಸನದಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು
ಶಾಲೆಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಆಟವಾಡುತ್ತಾ ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಕ್ಕಳು ಕೆರೆಯಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ (ಮೇ 16): ಶಾಲೆಗಳಿಗೆ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ದೊಡ್ಡವರೊಂದಿಗೆ ಕೆರೆಗೆ ಈಜಾಡಲು ಹೋಗುತ್ತಿದ್ದ ಮಕ್ಕಳು, ಇಂದು ಬೆಳಗ್ಗೆ ನಾಲ್ವರು ಮಕ್ಕಳು ಕೆರೆಗೆ ಮೀನು ಹಿಡಿಯಲು ಹೋಗಿದ್ದಾರೆ. ಈ ವೇಳೆ ಕೆರೆಯ ಆಳ ಪ್ರದೇಶದಲ್ಲಿ ಈಜು ಬಾರದೇ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಗ್ರಾಮದ ಮುತ್ತಿಗೆ ಕೆರೆಯಲ್ಲಿ ದುರ್ಘಟನೆ ನಡೆದಿದೆ. ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳು ಎಂದಿನಂತೆ ಆಟವಾಡುತ್ತಾ ಕೆರೆಯ ಬಳಿ ಮೀನು ಹಿಡಿಯಲು ತೆರಳಿದ್ದಾರೆ. ಈ ಬಗ್ಗೆ ಮನೆಯಲ್ಲಿಯೂ ಯಾರಿಗೂ ಹೇಳಿಲ್ಲ. ಆದರೆ, ಮಕ್ಕಳು ಮಧ್ಯಾಹ್ನವಾದರೂ ಮನೆಗೆ ವಾಪಸ್ ಬರಲಿಲ್ಲ ಎಂದು ಮನೆಯವರು ಮಕ್ಕಳನ್ನು ಹುಡುಕುತ್ತಾ ಹೋಗಿದ್ದಾರೆ. ಆಗ, ನಿಮ್ಮ ಮಕ್ಕಳು ಕೆರೆಯ ಕಡೆಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಆಗ ಸ್ಥಳಕ್ಕೆ ಹೋಗಿ ನೋಡಿದಾಗ ಮಕ್ಕಳ ಬಟ್ಟೆಗಳು ಹಾಗೂ ಚಪ್ಪಲಿಗಳು ಕೆರೆಯ ದಡದಲ್ಲಿದ್ದು, ಮಕ್ಕಳು ಮಾತ್ರ ಕಾಣಿಸಲಿಲ್ಲ. ಹೀಗಾಗಿ, ಕೆರೆಯಲ್ಲಿ ಮುಳುಗಿರಬಹುದು ಎಂದು ಕೂಡಲೇ ಈಜು ತಜ್ಞರನ್ನು ಕರೆಸಿ ಕೆರೆಯಲ್ಲಿ ಹುಡುಕಲು ಹೇಳಿದ್ದಾರೆ. ಆಗ ಕೆರೆಯಲ್ಲಿ ಇಳಿದು ನೋಡಿದರೆ ಮೃತದೇಹ ಪತ್ತೆಯಾಗಿದೆ.
ಹುಬ್ಬಳ್ಳಿ ಅಂಜಲಿ ಕೊಂದವನ ಬಂಧಿಸುವುದು ಬಿಟ್ಟು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು!
ಕೆರೆಯಲ್ಲಿ ಒಬ್ಬ ಮಗುವಿನ ಮೃತದೇಹ ಪತ್ತೆ ಆಗುತ್ತಿದ್ದಂತೆ ನಾಲ್ವರು ಮಕ್ಕಳು ಸಾವನ್ನಪ್ಪಿದ ಸುಳಿವು ಸಿಕ್ಕಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕೆರೆಯ ಬಳಿಗೆ ಬಂದ ಪೊಲೀಸರು ಮೃತ ನಾಲ್ವರು ಮಕ್ಕಳ ಶವಗಳನ್ನು ಕೆರೆಯಿಂದ ಹೊರಗೆ ತೆಗೆದಿದ್ದಾರೆ. ಮೃತರನ್ನು ಜೀವನ್ (13), ಸಾತ್ವಿಕ್ (11), ವಿಶ್ವ (12) ಹಾಗೂ ಪೃಥ್ವಿ (12) ಎಂದು ಗುರುತಿಸಲಾಗಿದೆ. ಕೂಡಲೇ ಮಕ್ಕಳ ಎಲ್ಲ ಪಾಲಕರು ಕೆರೆಯ ಬಳಿ ಬಂದಿದ್ದು, ಮೃತ ದೇಹಗಳನ್ನು ತಬ್ಬಿ ಗೋಳಾಡುತ್ತಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಇದು ಗೂಂಡಾ ರಾಜ್ಯ; ಹುಬ್ಬಳ್ಳಿ ಅಂಜಲಿ ಕೊಲೆಗೆ ಪೊಲೀಸರೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಕೆರೆಯ ಆವರಣದ ಬಳಿ ಮಕ್ಕಳ ಮೃತದೇಹ ನೋಡಲು ಸುತ್ತಲಿನ ಹಳ್ಳಿಗಳ ನೂರಾರು ಜನರು ಜಮಾಯಿಸಿದ್ದರು. ಈ ವೇಳೆ ಜನರು ನೂಕಾಟದ ಮೂಲಕ ಕೆರೆಗೆ ಬಿದ್ದು ಮತ್ತಷ್ಟು ಅನಾಹುತ ಆಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಪೊಲೀಸರು ಜನರನ್ನು ಚದುರಿಸಲು ಮುಂದಾಗುದ್ದರು. ಇನ್ನು ಕೆರೆಯಿಂದ ಎಲ್ಲ ಮೃತ ದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ತೆಗೆದು ನಂತರ ಅವುಗಳನ್ನು ಆಲೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.