Asianet Suvarna News Asianet Suvarna News

2026ರ ವೇಳೆಗೆ ಭಾರತದಲ್ಲೇ ಲ್ಯಾಪ್‌ಟಾಪ್‌, ಸ್ಮಾರ್ಟ್‌ ವಾಚ್‌ ಉತ್ಪಾದನೆ: ರಾಜೀವ್‌ ಚಂದ್ರಶೇಖರ್‌!

ಬೆಂಗಳೂರಿನಲ್ಲಿ ನಡೆದ ನವ ಭಾರತಕ್ಕಾಗಿ ಯುವ ಭಾರತ ( New India for Young India) ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, 2026ರ ವೇಳೆಗೆ ಹೆಚ್ಚಿನ ಎಲ್ಲಾ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು ಭಾರತದಲ್ಲೇ ತಯಾರಾಗಲಿದೆ ಎಂದು ವಿದ್ಯಾರ್ಥಿಯ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಹೇಳಿದರು.
 

By 2026 laptop smart watch production in India say Rajeev Chandrasekhar san
Author
First Published Mar 17, 2023, 3:52 PM IST

ಬೆಂಗಳೂರು (ಮಾ.17): ಪ್ರಸ್ತುತ ದೇಶ ಮೊಬೈಲ್‌ ಉತ್ಪಾದನೆ ಮಾಡುವುದರಲ್ಲಿ ಪ್ರಗತಿ ಸಾಧಿಸುತ್ತಿದೆ. 2026ರ ವೇಳೆ ಮೊಬೈಲ್‌ನಂತೆ ಲ್ಯಾಪ್‌ಟಾಪ್‌, ಇಯರ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರಿಸುವಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. ಬೆಂಗಳೂರಿನ ಜ್ಞಾನಜೋತಿ ಸಭಾಂಗಣದಲ್ಲಿ ನವ ಭಾರತಕ್ಕಾಗಿ ಯುವ ಭಾರತ ( New India for Young India) ಸಂವಾದ ಕಾರ್ಯಕ್ರಮದಲ್ಲಿ  ಶ್ರೀ ಕೃಷ್ಣ ರಾಜೇಂದ್ರ ರಜತ ಮಹೋತ್ಸವ ತಾಂತ್ರಿಕ ಸಂಸ್ಥೆ ( SKSJTI)  ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಈ ಮಾತು ಹೇಳಿದ್ದಾರೆ. ಇಂಡಿಯಾ ಟೆಕೇಡ್‌ನಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಸಂವಾದದಲ್ಲಿ ಚರ್ಚೆ ನಡೆಸಿದರು. 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ವೇಳೆ ಪಾಲ್ಗೊಂಡಿದ್ದರು.

ಇಷ್ಟೆಲ್ಲ ತಂತ್ರಜ್ಞಾನ ಬೆಳೆದಿದ್ದರೂ ಸಹ ವಿದೇಶಿ ಬ್ಯಾಂಕ್ ಅವಲಂಬನೆ ಯಾಕೆ ಹೆಚ್ಚಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಅಮೇರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವಾಗಿದೆ  ಅದರಲ್ಲಿ ನಮ್ಮ ದೇಶದ ಅನೇಕ ಸಾರ್ಟ್ ಅಪ್ ಗಳು ಹೂಡಿಕೆ ಮಾಡಿ ಸಮಸ್ಯೆಗೆ ಸಿಲುಕಿಕೊಂಡಿವೆ. ಭಾರತ ಮತ್ತು ಅಮೇರಿಕ ಸರ್ಕಾರಗಳು ಮಾತುಕತೆ ನಡೆಸಿದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿವೆ.. ಭಾರತದ ಬ್ಯಾಂಕ್ ಗಳು ಅರ್ಥಿಕವಾಗಿ ಸಧೃಡ ಹಾಗೂ ಸುರಕ್ಷತಾವಾಗಿದೆ. ಆದ್ದರಿಂದ ನಮ್ಮಲ್ಲಿ ಹೆಚ್ಚು ವ್ಯವಹರಿಸಲು ಗಮನ ನೀಡಬೇಕು ಎಂದರು.

ನಮ್ಮ ಬೆಂಗಳೂರಿಗೆ ನಿಮ್ಮ ವಿಷನ್ ಏನು ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ,  ಮಾಡರ್ನ್ ಬೆಂಗಳೂರು ಆಗಬೇಕ. ಇತಿಹಾಸ ಪರಂಪರೆ  ಉಳಿಸಿಕೊಂಡು  ಬೆಂಗಳೂರು ಬೆಳಸಿಬೇಕು. ಕೆಂಪೇಗೌಡರು ಕಟ್ಟಿದ ನಾಡನ್ನು ದೇಶದಲ್ಲೇ ನಂ.1 ನಗರವನ್ನಾಗಿ ಬೆಳಸಬೇಕು ಅನ್ನೋದು ತಮ್ಮ ಗುರಿ ಎಂದರು. 'ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ನಮ್ಮ ಸರ್ಕಾರ ಸಾಕಷ್ಟು ಒತ್ತು ಕೊಟ್ಟಿದೆ. ಶೀಘ್ರದಲ್ಲೇ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಘೋಷಣೆಗಳನ್ನ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ.. 100 ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಡಿಸೈನ್ ಸ್ಟಾರ್ಟ್ ಅಪ್ ಗಳ ಬರುತ್ತಿವೆ' ಎಂದು ಸೆಮಿಕಂಡಕ್ಟರ್‌ ಕುರಿತಾದ ಪ್ರಶ್ನೆಗೆ ಉತ್ತರಿಸಿದರು.

ಪಾಕಿಸ್ತಾನ ಏನಾದರೂ ನಮ್ಮ ಡಿಜಿಟಲ್ ವ್ಯವಸ್ಥೆ ಅಥವಾ ತಂತ್ರಜ್ಞಾನ ವನ್ನ ಬಳಿಸಿಕೊಳ್ಳಲು ಸಹಕಾರ ಕೇಳಿದರೆ ಕೊಡ್ತೀರಾ ಎನ್ನುವ ಪ್ರಶ್ನೆಗೆ ಇದಕ್ಕೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಭಯೋತ್ಪಾದನೆ ಬಿಟ್ಟು ಅಭಿವೃದ್ಧಿ ಕಡೆ ಗಮನ ನೀಡಿ ಎಂದು ಇಡೀ ಜಗತ್ತೇ ಅವರಿಗೆ ಸಲಹೆ ನೀಡುತ್ತಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ ಆಗ ನೋಡಬಹುದು ಎಂದರು.
ನೀವು ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡ್ತಿದ್ದೀರಾ, ಆದ್ರೆ ಕಲ್ಯಾಣ ಕರ್ನಾಟಕದ ಶಾಲೆಗಳಲ್ಲಿ ಇನ್ನೂ  ಗುಣಕಾರ ಭಾಗಕಾರ ಸರಿಯಾಗಿ ಹೇಳಿಕೊಟಿಲ್ಲ, 8 ನೇ ಕ್ಲಾಸ್ ಗೆ ಮಕ್ಕಳು ಮದುವೆಯಾಗೋದು ನಿಂತಿಲ್ಲ , ಧನ ಕಾಯೋರು ಕುರಿಕಾಯೋರಿಗೆ ಹೇಗೆ ಈ ತಂತ್ರಜ್ಞಾನ ತಲುಪುತ್ತೆ ಎಂದು ವಿದ್ಯಾರ್ಥಿ ಕೇಳಿದಾಗ 'ಇದಕ್ಕಾಗಿ ನಮ್ಮ‌ ಸರ್ಕಾರ ಪ್ರತಿಯೊಂದು ಕಾಲೇಜುಗಳಲ್ಲೂ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ ಶೀಘ್ರದಲ್ಲೇ ಘೋಷಣೆ ಮಾಡಲಿದೆ.ನಗರ ಮಾತ್ರವಲ್ಲ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ಮಕ್ಕಳಿಗೂ ದೊರೆಯಲಿದೆ' ಎಂದು ಹೇಳಿದರು.

ವಿಶ್ವದಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂದೆ ಸಾಗುತ್ತಿರೋದನ್ನ ವಿಶ್ವದ ದೊಡ್ಡ ದೊಡ್ಡ ಕಂಪನಿಗಳೇ ಹೇಳುತ್ತಿವೆ. ನಿಮಗೆ ತುಂಬಾ ಅವಕಾಶಗಳಿವೆ. ಡಿಜಿಟಲ್ ಯುಗ ಭಾರತವನ್ನ ಮುನ್ನೆಡಸಲಿದೆ.. ಇದಕ್ಕಾಗಿ ಮೋದಿ ಸರ್ಕಾರ ಸಾಕಷ್ಟು ಯೋಜನೆ ನಿಮಗೆ ನೀಡುತ್ತಿದೆ. ಡಿಗ್ರಿ ಜ್ಞಾನ ನೀಡುತ್ತೆ ಹಾಗೇ ಅದೇ ಸಮಯದಲ್ಲಿ ಕೌಶಲ್ಯ ಗಳ ತರಬೇತಿ ಪಡೆದುಕೊಳ್ಳಿ. ಸಾಕಷ್ಟು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತಿದೆ. ಡಿಜಿಟಲ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಸಾರೇ ಜಹಾಂಸೇ ಅಚ್ಚಾ ಡಿಜಿಟಲ್ ಇಂಡಿಯಾ ಹಮಾರಾ ಎನ್ನುವುದೇ ನಿಮ್ಮ ಘೋಷವಾಕ್ಯವಾಗಿರಲಿ ಎಂದರು.

ಕಾರ್ಯಕ್ರಮದಲ್ಲಿ ಪುನೀತ್‌ ಸ್ಮರಣೆ: ಇದೇ ವೇಳೆ ಕಾರ್ಯಕ್ರಮದಲ್ಲಿ ರಾಜೀವ್‌ ಚಂದ್ರಶೇಖರ್‌ ಪುನೀತ್‌ ಸ್ಮರಣೆ ಮಾಡಿದರು. 'ಪುನೀತ್‌ ರಾಜಕುಮಾರ್ ಅವರ ಜನ್ಮದಿನ ಇವತ್ತು. ಅದನ್ನು ಸ್ಫೂರ್ತಿ ದಿನ ಎನ್ನುತ್ತಾರೆ' ಎಂದಾಗ ಎಲ್ಲಾ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಹೊಸ ಭಾರತ, ಡಿಜಿಟಲ್ ಇಂಡಿಯಾ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಈಗ ನೀವು ಇರೋದು ಲಕ್ಕಿ ಜನರೇಷನ್ ಎಂದರೆ ತಪ್ಪಾಗದು. ನಿಮ್ಮ ಜನರೇಷನ್ ಗೆ ತಕ್ಕಂತೆ ನಮ್ಮ ಕೇಂದ್ರ ಸರ್ಕಾರ ಯೋಜನೆಗಳನ್ನ ತರುತ್ತಿದೆ. ನಾನು ಒಬ್ಬ ಇಂಜಿನಿಯರ್ ಆಗಿ ನಿಮ್ಮ ಹಾಗೇ ಸೆಮಿನಾರ್ ಗಳಲ್ಲಿ ಭಾಗಿಯಾಗುತ್ತಿದೆ. ಕಳೆದ 15 ವರ್ಷಗಳಿಂದ ಸಂಸತ್ತು ಪ್ರವೇಶ ಮಾಡುತ್ತಿದ್ದೇನೆ ಎಂದು ವಿದ್ಯಾರ್ಥಿಗಳಿಗೆ ತಮ್ಮ‌ಕಿರು ಪರಿಚಯವನ್ನೂ ಸಂವಾದದ ಆರಂಭದ ಸಮಯದಲ್ಲಿ ರಾಜೀವ್ ಚಂದ್ರಶೇಖರ್ ಮಾಡಿಕೊಟ್ಟರು.

ಭಾರತದ ಮೊದಲ ಟ್ರೂ ಕಾಲರ್‌ ಕಚೇರಿ ಬೆಂಗ್ಳೂರಲ್ಲಿ ಉದ್ಘಾಟನೆ

ನಾನು 44  ಕಾಲೇಜುಗಳಲ್ಲಿ ಸಂವಾದ ನಡೆಸಿದ್ದೇನೆ. ಹಳೆ ಭಾರತದಿಂದ ಹೊಸ ಹೊಸ ಭಾರತಕ್ಕೆ ನಾವು ಹೇಗೆ ಬದಲಾಗುತ್ತಿದ್ದೇವೆ ಅನ್ನೋದನ್ನ ವಿವರಿಸಿದ್ದೇವೆ. 80,90 ರಲ್ಲಿ ಕಮ್ಯೂನಿಸಂ ಆಳುತಿತ್ತು ಆದರೆ,  ಈಗ ಮೋದಿ‌ ಸರ್ಕಾರ ಬಂದ ಮೇಲೆ ಪ್ರಜಾಪ್ರಭುತ್ವದ ಸರ್ಕಾರ ಬಂತು. 97 % ಬ್ಯಾಂಕ್ ಸೆಕ್ಟರ್ ಗಳು ಬೇರೆ ದೇಶಗಳಿಂದ ಅವಲಂಬಿತವಾಗಿದ್ದವು. ಆದ್ರೆ ಈಗ ಹೊಸ ಸಾರ್ಟ್ ಅಪ್ ಗಳು ಬಂದವು. ಭಾರತದಲ್ಲೇ ಎಲ್ಲಾ ವ್ಯವಸ್ಥೆಗಳು ಸಿಗುವ ರೀತಿ ಮೋದಿ ಸರ್ಕಾರ ಮಾಡಿದೆ. ಹಳೇ ಭಾರತದಲ್ಲಿ ಭಾರತ ಅಂದ್ರೆ ಬಡ ದೇಶ ಅಂತ ಹೇಳಲಾಗುತಿತ್ತು.

ಡಿಜಿಟಲ್‌ ಯುಗವನ್ನು ಯುವ ಭಾರತ ಮುನ್ನಡೆಸಿದೆ: ರಾಜೀವ್‌ ಚಂದ್ರಶೇಖರ್‌

ಮೂಲಭೂತ ಸೌಕರ್ಯ ಕೊರತೆ , ಪಾಕಿಸ್ತಾನ , ಚೀನಾದಿಂದ  ದಾಳಿ, ಆರ್ಮಿ ಹೆಚ್ಚು ಫೋರ್ಸ್ ಗಳಿರಲಿಲ್ಲ. ಆದರೆ, ಈಗ ಹೊಸ ಭಾರತದ ಅದಕ್ಕೆ ತದ್ವಿರುದ್ಧವಾಗಿ ಬೆಳೆಯುತ್ತಿದೆ ಎಂದರು.
ಹಳೇ ಭಾರತದಲ್ಲಿ ಬರೀ ಭ್ರಷ್ಟಾಚಾರಗಳ ಸುದ್ದಿಯನ್ನೇ ನೋಡಿದ್ದೇವೆ. ಈಗ ಹೊಸ ಭಾರತದಲ್ಲಿ ನಾವು ಸಾಕಷ್ಟು ಬದಲಾವಣೆ ನೋಡ್ತಿದ್ದೇವೆ. ನಾನು ಇತ್ತೀಚೆಗೆ ನಾಗಲ್ಯಾಂಡ್ ರಿಮೋಟ್ ಸ್ಥಳದಲ್ಲಿರುವ ಹಳ್ಳಿಗೆ ತೆರಳಿದ್ದೆ ಅಲ್ಲಿ ಎಲ್ಲರ ಬಳಿ ಅಧಾರ್ ಕಾರ್ಡ್ ಇದೆ, ಪ್ರಧಾನಮಂತ್ರಿಗಳ ಯೋಜನೆ ಅವರಿಗೆ ನೇರವಾಗಿ ಸೇರುತ್ತಿದ್ದೆ ಅಂತ ಹೇಳಿದರು. ಇದೆಲ್ಲ ಸಾಧ್ಯವಾಗಿದ್ದು ತಂತ್ರಜ್ಞಾನದಿಂದ. ಕೋವಿಡ್ ಸಂದರ್ಭದಲ್ಲಿ ಭಾರತ ಸರ್ಕಾರ ನಡೆದುಕೊಂಡ ಬಗೆಯನ್ನ ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಇನ್ನೂ ಇಷ್ಟೋ ದೇಶಗಳಲ್ಲಿ ಸಂಪೂರ್ಣ ಲಸಿಕೆ ಕೊಡಲು ಸಾಧ್ಯವಾಗಿಲ್ಲ ಎಂದರು.

ಸಾಕಷ್ಟು ಮೊಬೈಲ್ ಗಳನ್ನ ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಾವು ಇನ್ನೂ ಕೆಲವೇ ವರ್ಷಗಳಲ್ಲಿ ಒಂದೇ ಒಂದು ಮೊಬೈಲ್ ಸಹ ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳುವುಂತ ಪರಿಸ್ಥಿತಿ ಬರೋದಿಲ್ಲ. ಯಾಕೆಂದರೆ ಎಲ್ಲಾ ಸ್ಮಾರ್ಟ್ ಫೋನ್ ಇಲ್ಲಿ ತಯಾರಿಸಲಾಗುತ್ತೆ. ಕರ್ನಾಟಕದಲ್ಲಿ ಅಪಲ್ ಫೋನ್ ತಯಾರಿಕ ಘಟಕ ಸಹ ನಿರ್ಮಾಣವಾಗಲಿದೆ ಎಂದು ಹೇಳಿದರು.

Follow Us:
Download App:
  • android
  • ios