Asianet Suvarna News Asianet Suvarna News

ಚುನಾವಣೆ ಪ್ರಚಾರಕ್ಕೆ ಕೊಟ್ಟ ವಾಪಸ್ ಕೊಡದ್ದಕ್ಕೆ ವ್ಯಕ್ತಿಯ ಮೇಲೆ ದೇವದುರ್ಗ ಶಾಸಕಿ ಬೆಂಬಲಿಗನಿಂದ ಹಲ್ಲೆ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಕೊಟ್ಟ ಹಣ ವಾಪಸ್ ಕೊಡಲಿಲ್ಲ ಎಂದು ಶಾಸಕಿಯ ಬೆಂಬಲಿಗನೊಬ್ಬ ವ್ಯಕ್ತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದಲ್ಲಿ ನಡೆದಿದೆ.

A person was assaulted by a supporter of Devadurga MLA Karemma nayak rav
Author
First Published Nov 10, 2023, 12:37 PM IST

 

ರಾಯಚೂರು (ನ.10) : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಕೊಟ್ಟ ಹಣ ವಾಪಸ್ ಕೊಡಲಿಲ್ಲ ಎಂದು ಶಾಸಕಿಯ ಬೆಂಬಲಿಗನೊಬ್ಬ ವ್ಯಕ್ತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದಲ್ಲಿ ನಡೆದಿದೆ.

ಚನ್ನಪ್ಪಗೌಡ ಹಲ್ಲೆಗೊಳಗಾದ ವ್ಯಕ್ತಿ. ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ್ ಬೆಂಬಲಿಗನಾಗಿರುವ ವಿಶ್ವನಾಥ ಪಾಟೀಲ್ ಮತ್ತು ಆತನ ಸಹಚರರು ವ್ಯಕ್ತಿಯ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

 

ಜೆಡಿಎಸ್- ಬಿಜೆಪಿ ಮೈತ್ರಿ: ದೇವದುರ್ಗ ಶಾಸಕಿ ಕರೆಮ್ಮ ಹೇಳಿದ್ದಿಷ್ಟು

ಏನಿದು ಘಟನೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕಿ ಕರೆಮ್ಮ ನಾಯಕರ ಪರವಾಗಿ ಚುನಾವಣೆ ಖರ್ಚಿಗೆಂದು ಚನ್ನಪ್ಪಗೌಡ ಎಂಬಾತನಿಗೆ 3 ಲಕ್ಷ 20 ಸಾವಿರ ಹಣ ಕೊಟ್ಟಿದ್ದ ವಿಶ್ವನಾಥ ಪಾಟೀಲ್. ಕೊಟ್ಟ ಹಣವನ್ನು ಆಲ್ಕೋಡ್ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾರರಿಗೆ ಖರ್ಚು ಮಾಡುವ ಸಲುವಾಗಿ ನೀಡಿದ್ದ ವಿಶ್ವನಾಥ.

ಆದರೆ ಚುನಾವಣೆ ಮುಗಿದ ಬಳಿಕ ಕೊಟ್ಟ ಹಣ ವಾಪಸ್ ಕೊಡುವಂತೆ ಚನ್ನಪ್ಪ ಗೌಡನೊಂದಿಗೆ ಕ್ಯಾತೆ ತೆಗೆದಿರುವ ವಿಶ್ವನಾಥ ಪಾಟೀಲ್. ಶಾಸಕಿ ಪರವಾಗಿ ಚುನಾವಣೆ ಪ್ರಚಾರಕ್ಕೆ ಖರ್ಚು ಮಾಡಿದ್ದ. ಇದೀಗ ಕೊಟ್ಟ ಹಣ ವಾಪಸ್ ಕೇಳುತ್ತಿರುವುದು ನೋಡಿ ದಂಗಾದ ಚನ್ನಪ್ಪಗೌಡ. ಆದರೆ ಹಣಕ್ಕಾಗಿ ಕಿರಿಕಿರಿ ಆರಂಭಿಸಿದ್ದ ಅಲ್ಲದೇ ಅಷ್ಟು ಹಣ ಬಡ್ಡಿಸಮೇತ ಕೊಡುವಂತೆ ಧಮ್ಕಿ ಹಾಕಿದ್ದ ವಿಶ್ವನಾಥ ಪಾಟೀಲ್. 

ರಾಜ್ಯದ ಹಿತಕ್ಕಾಗಿ ಅಲ್ಲ, ವೈಯಕ್ತಿಕ ಲಾಭಕ್ಕೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ: ಎನ್‌ಎಸ್ ಬೋಸರಾಜು ವ್ಯಂಗ್ಯ

ಹೀಗಾಗಿ ಇದರಿಂದಾಗಿ 2 ತಿಂಗಳು ಕಾಲಾವಕಾಶ ಕೇಳಿದ್ದ ಚನ್ನಪ್ಪಗೌಡ. 2 ತಿಂಗಳು ತಡವಾಗಿದಕ್ಕೆ ಮನೆಗೆ ಜನರನ್ನ ಕರೆದೊಯ್ದು ಕುಟುಂಬಸ್ಥರ ಮುಂದೆಯೇ ಚನ್ನಪ್ಪಗೌಡನ ಮೇಲೆ ಹಲ್ಲೆ ನಡೆಸಿರುವ ಶಾಸಕಿ ಬೆಂಬಲಿಗನಾಗಿರುವ ವಿಶ್ವನಾಥ ಪಾಟೀಲ್. ಕುಟುಂಬಸ್ಥರ ಮುಂದೆಯೇ ಬೀದಿಗೆ ಎಳೆದು ಅರೆಬೆತ್ತಲುಗೊಳಿಸಿ ಹಲ್ಲೆಗೈದಿರುವ ಆರೋಪ. ಹಲ್ಲೆಗೈದ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು.
 

Follow Us:
Download App:
  • android
  • ios