Asianet Suvarna News Asianet Suvarna News

ಬ್ಲೇಡ್‌ ರನ್ನರ್‌ ಖ್ಯಾತಿಯ ಆಸ್ಕರ್‌ ಪಿಸ್ಟೋರಿಯಸ್‌ಗೆ ಪೆರೋಲ್‌

2013ರಲ್ಲಿ ಪ್ರೇಮಿಗಳ ದಿನದಂದು ತನ್ನ ಪ್ರೇಯಸಿ ರೀವಾ ಸ್ಟೀನ್‌ಕಾಂಪ್‌ ಅವರನ್ನು ಬಾತ್‌ರೂಂನಲ್ಲಿ ಗಂಡು ಹಾರಿಸಿ ಕೊಲೆಮಾಡಿದ್ದರು. ಪ್ರಕರಣದಲ್ಲಿ ಅವರು 13 ವರ್ಷ 5 ತಿಂಗಳುಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದು, 2014ರಲ್ಲಿ ಜೈಲು ಸೇರಿದ್ದರು.

Former Paralympian Oscar Pistorius granted parole a decade after killing girlfriend kvn
Author
First Published Nov 25, 2023, 11:13 AM IST

ಪ್ರಿಟೋರಿಯಾ(ನ.25): ತನ್ನ ಪ್ರೇಯಸಿಯ ಕೊಲೆಗೈದ ಪ್ರಕರಣದಲ್ಲಿ 10 ವರ್ಷಗಳಿಂದ ಜೈಲಿನಲ್ಲಿರುವ ಬ್ಲೇಡ್‌ ರನ್ನರ್‌ ಖ್ಯಾತಿಯ ಒಲಿಂಪಿಯನ್‌, ದಕ್ಷಿಣ ಆಫ್ರಿಕಾದ ಆಸ್ಕರ್‌ ಪಿಸ್ಟೋರಿಯಸ್‌ಗೆ ಕೊನೆಗೂ ಶುಕ್ರವಾರ ಪೆರೋಲ್‌ ಲಭಿಸಿದೆ. ಅವರು ಜ.5ರಂದು ಜೈಲಿನಿಂದ ಹೊರಬರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2013ರಲ್ಲಿ ಪ್ರೇಮಿಗಳ ದಿನದಂದು ತನ್ನ ಪ್ರೇಯಸಿ ರೀವಾ ಸ್ಟೀನ್‌ಕಾಂಪ್‌ ಅವರನ್ನು ಬಾತ್‌ರೂಂನಲ್ಲಿ ಗಂಡು ಹಾರಿಸಿ ಕೊಲೆಮಾಡಿದ್ದರು. ಪ್ರಕರಣದಲ್ಲಿ ಅವರು 13 ವರ್ಷ 5 ತಿಂಗಳುಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದು, 2014ರಲ್ಲಿ ಜೈಲು ಸೇರಿದ್ದರು.

ಐಟಿಎಫ್‌ ಮಹಿಳಾ ವಿಶ್ವ ಟೆನಿಸ್ ಟೂರ್‌ ಟೂರ್ನಿ: ಋತುಜಾ, ಜೀಲ್‌ ಸೆಮಿಫೈನಲ್‌ಗೆ

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ವಿಶ್ವ ಟೆನಿಸ್ ಟೂರ್‌ ಟೂರ್ನಿಯಲ್ಲಿ ಭಾರತೀಯರು ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ್ದು, ಮೂವರು ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಸಿಂಗಲ್ಸ್‌ ವಿಭಾಗದಲ್ಲಿ ಋತುಜಾ ಭೋಸ್ಲೆ, ಜೀಲ್‌ ದೇಸಾಯಿ ಹಾಗೂ ರಶ್ಮಿಕಾ ಅಂತಿಮ 4ರ ಘಟ್ಟ ಪ್ರವೇಶಿಸಿದರು.

ರಾಜ್ಯ ಫುಟ್ಬಾಲ್‌ನಲ್ಲಿ ಹೊಸ ಸ್ಟಾರ್: ಬಿಎಫ್‌ಸಿ ಕಿರಿಯರ ತಂಡದಲ್ಲಿ ವಿನೀತ್ ಮಿಂಚು..!

ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತೆ ಋತುಜಾ, ಕಜಕಸ್ತಾನದ ಝಿಬೆಕ್‌ ವಿರುದ್ಧ 7-6(4), 1-6, 6-1 ಅಂತರದಲ್ಲಿ ಜಯಗಳಿಸಿದರೆ, ಶ್ರೇಯಾಂಕ ರಹಿತ ಜೀಲ್‌ ಜರ್ಮನಿಯ ಅಂಥೊನಿಯಾ ಸ್ಮಿತ್‌ ವಿರುದ್ಧ 6-3, 6-7(2), 6-4 ಸೆಟ್‌ಗಳಲ್ಲಿ ಗೆಲುವು ಪಡೆದರು. ಮತ್ತೋರ್ವ ಶ್ರೇಯಾಂಕ ರಹಿತ ಆಟಗಾರ್ತಿ ರಶ್ಮಿಕಾ, ಅಂತಿಮ 8ರ ಸುತ್ತಿನಲ್ಲಿ ಭಾರತದವರೇ ಆದ ವೈಷ್ಣವಿ ಅಡ್ಕರ್‌ ವಿರುದ್ಧ 6-1, 6-4ರಲ್ಲಿ ಜಯಭೇರಿ ಬಾರಿಸಿ ಸೆಮೀಸ್‌ಗೇರಿದರು. ಸೆಮೀಸ್‌ನಲ್ಲಿ ಋತುಜಾ ಅವರಿಗೆ ಜೀಲ್‌ ಸವಾಲು ಎದುರಾಗಲಿದ್ದು, ರಶ್ಮಿಕಾ ಅವರು ಥಾಯ್ಲೆಂಡ್‌ನ ಲಾನ್‌ಲನಾ ವಿರುದ್ಧ ಸೆಣಸಲಿದ್ದಾರೆ.

ರಶ್ಮಿಕಾ-ವೈದೇಹಿಗೆ ಡಬಲ್ಸ್‌ನಲ್ಲಿ ಸೋಲು

ಇನ್ನು ಡಬಲ್ಸ್‌ನಲ್ಲಿ ಶ್ರೀವಳ್ಳಿ ರಶ್ಮಿಕಾ-ವೈದೇಹಿ ಚೌಧರಿ ಜೋಡಿ ಸೆಮಿಫೈನಲ್‌ನಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು. ಋತುಜಾ-ಕಜಕಸ್ತಾನದ ಝಿಕೆಬ್‌ ಹಾಗೂ ಥಾಯ್ಲೆಂಡ್‌ನ ಪುನ್ನಿನ್‌-ರಷ್ಯಾದ ಅನ್ನಾ ಉರೆಕೆ ನಡುವಿನ ಪಂದ್ಯ ಮಳೆಯಿಂದಾಗಿ ಶನಿವಾರಕ್ಕೆ ಮುಂದೂಡಿಕೆಯಾಯಿತು.

'ಅಪ್ಪ ರೂಂನಲ್ಲಿದ್ದಾರೆ, ಇನ್ನೊಂದು ತಿಂಗಳಲ್ಲಿ....': ರೋಹಿತ್ ಶರ್ಮಾ ಮಗಳು ಸಮೈರಾ ಮುದ್ದಾದ ವಿಡಿಯೋ ವೈರಲ್..!

ಡೋಪ್‌ ಟೆಸ್ಟ್‌ನಲ್ಲಿ ರಚನಾ ಫೇಲ್‌: ತಾತ್ಕಾಲಿಕ ನಿಷೇಧ

ನವದೆಹಲಿ: ಹ್ಯಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಹ್ಯಾಮರ್‌ ಥ್ರೋ ಸ್ಪರ್ಧಿ ರಚನಾ ಕುಮಾರಿ ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲವಾಗಿದ್ದು, ತಾತ್ಕಾಲಿಕ ನಿಷೇಧಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆಯ ಅಥ್ಲೆಟಿಕ್ಸ್‌ ಸಮಗ್ರತೆ ಯುನಿಟ್‌(ಎಐಯು) ನಡೆಸಿದ ಡೋಪಿಂಗ್‌ ಪರೀಕ್ಷೆಯಲ್ಲಿ, ರಚನಾ ನಿಷೇಧಿತ ಮದ್ದು ಸೇವಿಸಿದ್ದು ಪತ್ತೆಯಾಗಿತ್ತು.
 

Follow Us:
Download App:
  • android
  • ios