Asianet Suvarna News Asianet Suvarna News

ಚಂದ್ರಯಾನ-3ಕ್ಕಿಂತ ಮೂರು ಪಟ್ಟು ದೂರ ಕ್ರಮಿಸಿದ ಆದಿತ್ಯ ಎಲ್‌-1, ಇಸ್ರೋ ಮಾಹಿತಿ!

ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳಿಸಿರುವ ಆದಿತ್ಯ ಎಲ್‌-1 ಸೌರ ವೀಕ್ಷಣಾಲಯ ಹೆಚ್ಚೂಕಡಿಮೆ ಚಂದ್ರಯಾನ-3ಗಿಂತ ಮೂರು ಪಟ್ಟು ದೂರ ತನ್ನ ಯಾನ ಮುಗಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Isro Says Aditya L1 Mission spacecraft has travelled beyond a distance of 9 2 lakh kilometres san
Author
First Published Sep 30, 2023, 7:24 PM IST | Last Updated Oct 1, 2023, 12:20 PM IST

ಬೆಂಗಳೂರು (ಸೆ.30): ನಮ್ಮ ಸೌರಮಂಡಲದ ಅತೀದೊಡ್ಡ ನಕ್ಷತ್ರ ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳಿಸಿರುವ ತನ್ನ ಮೊಟ್ಟಮೊದಲ ಸೌರ ವೀಕ್ಷಣಾಲಯ ಉಪಗ್ರಹ ಆದಿತ್ಯ ಎಲ್‌-1 ಹೆಚ್ಚೂ ಕಡಿಮೆ ಚಂದ್ರಯಾನ-3 ನೌಕೆಗಿಂತ ಮೂರು ಪಟ್ಟು ದೂರವನ್ನು ಕ್ರಮಿಸಿದೆ. ಶನಿವಾರ ಈ ಮಾಹಿತಿ ನೀಡಿರುವ ಇಸ್ರೋ, ಆದಿತ್ಯ ಎಲ್‌ 1 ಉಪಗ್ರಹ ಇಂದು ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ ದೂರದಲ್ಲಿ ಪ್ರಯಾಣ ಮಾಡುತ್ತಿದೆ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. ಭೂಮಿ ಹಾಗೂ ಚಂದ್ರನ ನಡುವೆ 3.84 ಲಕ್ಷ ಕಿಲೋಮೀಟರ್‌ ದೂರ ಇದೆ. ಅದೇ ಲೆಕ್ಕಾಚಾರದಲ್ಲಿ ನೋಡಿದರೆ, ಬಹುತೇಕ ಚಂದ್ರಯಾನ-3 ನೌಕೆಗಿಂತ ಮೂರುಪಟ್ಟು ದೂರ ಆದಿತ್ಯ ಎಲ್‌-1 ನೌಕೆ ಈಗಾಗಲೇ ಕ್ರಮಿಸಿದೆ.

ಶನಿವಾರ ಟ್ವೀಟ್‌ ಮೂಲಕ ಮಾಹಿತಿ ನೀಡಿದ ಇಸ್ರೋ, ಆದಿತ್ಯ ಎಲ್‌ 1 ಗಗನನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ, ಭೂಮಿಯ ಪ್ರಭಾವದ ಗೋಳದಿಂದ ಯಶಸ್ವಿಯಾಗಿ ಪಾರಾಗಿದೆ. ಇದು ಈಗ ಸೂರ್ಯ-ಭೂಮಿಯ ಲಾಗ್ರೇಂಜ್ ಪಾಯಿಂಟ್ 1 (L1) ಕಡೆಗೆ ತನ್ನ ಮಾರ್ಗವನ್ನು ನೋಡಿಕೊಂಡು ಹೋಗುತ್ತಿದೆ ಎಂದು ತಿಳಿಸಿದೆ.

ಭೂಮಿಯ ಪ್ರಭಾವದ ಗೋಳದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಇಸ್ರೋ ಸತತ 2ನೇ ಬಾರಿಗೆ ಯಶಸ್ವಿಯಾಗಿ ಕಳಿಸಿದೆ. ಇದಕ್ಕೂ ಮುನ್ನ ಮಾರ್ಸ್‌ ಆರ್ಬಿಟರ್‌ ಮಿಷನ್‌ಅನ್ನು ಭೂಮಿಯ ಪ್ರಭಾವಲಯದ ಗೋಳದಿಂದ ಹೊರಗಡೆ ಕಳಿಸಿತ್ತು.

ಸೂರ್ಯಯಾನದ ಪಥ ಆರಂಭ, ಇಂದು ರಾತ್ರಿ ಶಾಶ್ವತವಾಗಿ ಭೂಮಿಯನ್ನು ತೊರೆಯಲಿದೆ ಆದಿತ್ಯ ಎಲ್‌1

ಭೂಮಿಯ ಪ್ರಭಾವಳಿಯನ್ನು ಆದಿತ್ಯ ಎಲ್‌1 ತೊರೆಯುವುದರೊಂದಿಗೆ ಬಾಹ್ಯಾಕಾಶ ನೌಕೆ ಶಾಶ್ವತವಾಗಿ ಭೂಮಿಯನ್ನು ತೊರೆದಿದೆ. ಭೂಮಿ ಹಾಗೂ ಸೂರ್ಯನ ನಡುವಿನ 15 ಕೋಟಿ ಕಿಲೋಮೀಟರ್‌ ದೂರದ ಪೈಕಿ, 15 ಲಕ್ಷ ಕಿಲೋಮೀಟರ್‌ ದೂರದಲ್ಲಿರುವ ಲಾಂಗ್ರೇಜ್‌ 1 ಪಾಯಿಂಟ್‌ನಲ್ಲಿ ಆದಿತ್ಯ ಎಲ್‌1 ನೆಲೆಯಾಗಲಿದೆ. ಮುಂದಿನ ಜವರಿಯ ಆರಂಭದಲ್ಲಿ ಆದಿತ್ಯ ಎಲ್‌1 ನೌಕೆ ಲಾಂಗ್ರೆಜ್‌ ಪಾಯಿಂಟ್‌ ತಲುಪುವ ಸಾಧ್ಯತೆ ಇದೆ.

ಭೂಮಿ, ಚಂದ್ರನ ಫೋಟೋ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್‌-1 ನೌಕೆ

Latest Videos
Follow Us:
Download App:
  • android
  • ios