LRC: ಹೆಜ್ಬೊಲ್ಲಾ ಉಗ್ರರ ವಿರುದ್ಧ ಇಸ್ರೇಲ್​ನಿಂದ​ ಚಾಣಕ್ಷ ಯುದ್ಧ ನೀತಿ..!

ಒಂದೇ ದಿನ ಹೆಜ್ಬೊಲ್ಲಾ ಉಗ್ರರು ಬಳಸ್ತಿದ್ದ 3 ಸಾವಿರ ಪೇಜರ್ ಇನ್ನು ಇಸ್ರೇಲ್‌ ಸ್ಫೋಟ ಮಾಡಿದೆ. ಹೆಜ್ಬೊಲ್ಲಾ ಉಗ್ರರ ಪೇಜರ್​ಗಳನ್ನೇ ಇಸ್ರೇಲ್‌ ಬಾಂಬ್‌ ಆಗಿ ಪರಿವರ್ತನೆ ಮಾಡಿದ.ೆ ಲೆಬನಾನ್​ನಲ್ಲಿ ನಡೆದ ಪೇಜರ್​ಗಳ ಸ್ಫೋಟಕ್ಕೆ 11 ಉಗ್ರರು ಬಲಿಯಾಗಿದ್ದಾರೆ.
 

First Published Sep 18, 2024, 11:32 PM IST | Last Updated Sep 18, 2024, 11:32 PM IST

ಬೆಂಗಳೂರು (ಸೆ.18):  ಹೆಜ್ಬೊಲ್ಲಾ ಉಗ್ರರ ವಿರುದ್ಧ ಇಸ್ರೇಲ್​ನಿಂದ​ ಚಾಣಕ್ಷ ಯುದ್ಧ ನೀತಿ ರೂಪಿಸಿದ್ದು, ಇದಕ್ಕೆ ಜಗತ್ತು ಬೆಚ್ಚಿಬಿದ್ದಿದೆ. ಇಸ್ರೇಲ್ ಮೇಲೆ ದಾಳಿ ಮಾಡ್ತಿದ್ದ ಉಗ್ರರ ಸೊಂಟವನ್ನು ಮೊಸಾದ್‌ ಮುರಿದಿದೆ. ಹೆಜ್ಬೊಲ್ಲಾ ಉಗ್ರರ ಮೇಲೆ ಇಸ್ರೇಲ್​ನಿಂದ ಪೇಜರ್ ಬಾಂಬ್ ದಾಳಿಯಾಗಿದೆ.

3 ಸಾವಿರಕ್ಕೂ ಹೆಚ್ಚು ಉಗ್ರರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದು, 11 ಉಗ್ರರು ಬಲಿಯಾಗಿದ್ದಾರೆ. 400ಕ್ಕೂ ಹೆಚ್ಚು ಉಗ್ರರು ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಇದರ ನಡುವೆ ಶತ್ರುಗಳ ಮೊಬೈಲ್ ಗಳನ್ನೂ ಇಸ್ರೇಲ್‌ ಬಾಂಬ್‌ನಂತೆ ಸ್ಪೋಟ ಮಾಡಲಿದ್ಯಾ ಎನ್ನುವ ಅನುಮಾನ ಕಾಡಿದೆ.

ಬುಕ್‌ ಬಾಂಬ್,‌ ಟೂಥ್‌ಪೇಸ್ಟ್‌ ಪಾಯ್ಸನ್‌.. ಈಗ ಪೇಜರ್‌ ಬಾಂಬ್‌, ವಿರೋಧಿಗಳ ಮುಗಿಸಲು ಇಸ್ರೇಲ್​ ಡೆಡ್ಲಿ ಅಟ್ಯಾಕ್ಸ್‌!

ಇಸ್ರೇಲ್ ವಿರೋಧಿಗಳಿಗೆ ಆನ್ ಲೈನ್ ಬಾಂಬ್ ದಾಳಿಯ ಭಯ ಶುರುವಾಗಿದೆ. ಇಸ್ರೇಲಿ ಯುದ್ಧ ತಂತ್ರದಿಂದ ಭಾರತದಂತಾ ದೇಶ ಕಲಿಯಬೇಕಿರೋದೇನು..? ಉಗ್ರರ ನಡ ಮುರಿಯಲು ಭಾರತವೂ ಇಸ್ರೇಲ್​ ದಾರಿ ಹಿಡಿಯಬೇಕಾ..?
 

Video Top Stories