Asianet Suvarna News Asianet Suvarna News

ಇಸ್ರೋದಿಂದ ಹೊಸ ವಿಡಿಯೋ ಬಿಡುಗಡೆ, ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌, ಸ್ಪಷ್ಟವಾಗಿ ಗೋಚರಿಸಿದ ಭಾರತದ ಲಾಂಛನ

ಚಂದ್ರನ ಮೇಲೆ ಲ್ಯಾಂಡ್‌ ಆಗಿರುವ ವಿಕ್ರಮ್‌ ಲ್ಯಾಂಡರ್‌ ನಿಂದ ಪ್ರಗ್ಯಾನ್‌ ರೋವರ್‌ ಇಳಿಯುವ ಹೊಸದೊಂದು ವಿಡಿಯೋವನ್ನು ಇಸ್ರೋ ರಿಲೀಸ್ ಮಾಡಿದೆ. ಇದರ ಜೊತೆಗೆ ಪ್ರಗ್ಯಾನ್‌ ರೋವರ್‌ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು  ಸ್ಪಷ್ಟವಾಗಿ ವಿಡಿಯೋದಲ್ಲಿ ಗೋಚರಿಸುತ್ತಿದೆ.

Chandrayaan 3   pragyan rover comes out of Vikram lander and walks on Moon isro released video gow
Author
First Published Aug 25, 2023, 12:18 PM IST

ಬೆಂಗಳೂರು (ಆ.25): ಭಾರತದ ಮಹತ್ವಾಕಾಂಕ್ಷಿ  ಚಂದ್ರಯಾನ-3  ಆಗಸ್ಟ್ 23 ರಂದು ಯಶಸ್ವಿಯಾದ ಬೆನ್ನಲ್ಲೇ ಚಂದ್ರನ ಮೇಲಿಳಿದ  ವಿಕ್ರಮ್‌ ಲ್ಯಾಂಡರ್‌ ಹಾಗೂ  ಪ್ರಗ್ಯಾನ್‌ ರೋವರ್‌  ಕೆಲಸ ಆರಂಭಿಸಿದೆ. ಈ ಸಂಬಂಧ ಇಸ್ರೋ ಹೊಸ ವಿಡಿಯೋ ರಿಲೀಸ್ ಮಾಡಿದೆ. ಇದರಲ್ಲಿ ವಿಕ್ರಮ್‌ ಲ್ಯಾಂಡರ್‌ ನಿಂದ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ಇಳಿಯುವ ದೃಶ್ಯ ಸೆರೆಯಾಗಿದೆ. ಇದರ ಜೊತೆಗೆ ಪ್ರಗ್ಯಾನ್‌ ರೋವರ್‌ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು  ಸ್ಪಷ್ಟವಾಗಿ ವಿಡಿಯೋದಲ್ಲಿ ಗೋಚರಿಸುತ್ತಿದೆ. ಹೀಗಾಗಿ ಚಂದ್ರನ ಮೇಲೆ ಲ್ಯಾಂಡರ್‌ ಮತ್ತು ರೋವರ್‌ ಯಶಸ್ವಿಯಾಗಿ ಇಳಿಯುವುದರೊಂದಿಗೆ, ಚಂದ್ರನ ನೆಲದ ಮೇಲೆ ಸಾವಿರಾರು ವರ್ಷಗಳ ಕಾಲ ಅಳಿಯದ ರೀತಿಯಲ್ಲಿ ಇಸ್ರೋದ ಚಿಹ್ನೆ ಮತ್ತು ಭಾರತದ ರಾಷ್ಟ್ರ ಲಾಂಛನ ಚಿತ್ರಣ ಮೂಡಲಿದೆ. ಚಂದ್ರನಲ್ಲಿ ಯಾವುದೇ ವಾತಾವರಣ ಇಲ್ಲದ ಕಾರಣ ಈ ಎರಡೂ ಚಿಹ್ನೆಗಳು ಅಲ್ಲಿ ಸಾವಿರಾರು ವರ್ಷ ಹಾಗೆಯೇ ಇರಲಿದೆ ಎಂದು ವಿಶ್ಲೇಷಿಸಲಾಗಿದೆ.

ಸೆ.2ರಂದು ಸೂರ‍್ಯಯಾನ ಸಾಕಾರ ಸಾಧ್ಯತೆ, ನೇಸರನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ ಎಲ್‌-1

ಈಗಾಗಲೇ ಈ ರೋವರ್‌ ಚಂದ್ರ ಮೇಲೆ ತನ್ನ ಅಧ್ಯಯನ ಆರಂಭಿಸಿದೆ. ಈ ವಿಡಿಯೋ ಆಗಸ್ಟ್ 23ರದ್ದಾಗಿದ್ದು, ಆಗಸ್ಟ್ 25ರ ಇಂದು ಇಸ್ರೋ ಟ್ವೀಟ್ ಮಾಡಿದೆ. ಇದಕ್ಕೂ ಮುನ್ನ ಅಂದರೆ ಆಗಸ್ಟ್ 24ರಂದು ಸಂಜೆ ಟ್ವೀಟ್‌ ಮಾಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ‘ಲ್ಯಾಂಡರ್‌ ಮಾಡ್ಯೂಲ್‌ನ 3 ಪೇಲೋಡ್‌ಗಳನ್ನು ಆನ್‌ ಮಾಡಲಾಗಿದೆ. ಇಸ್ಲಾ, ರಂಭಾ ಹಾಗೂ ಚೇಸ್ಟ್‌ ಪೇಲೋಡ್‌ಗಳು ಕಾರ್ಯಾಚರಣೆ ಆರಂಭಿಸಿವೆ ಎಂದು ಮಾಹಿತಿ ನೀಡಿತ್ತು.

ಇದೇ ವೇಳೆ,  ರೋವರ್‌ ಸಂಚಾರ (ಮೊಬಿಲಿಟಿ) ಕೂಡ ಆರಂಭವಾಗಿದೆ ಎಂದು ಅದು ಹೇಳಿತ್ತು. ಇನ್ನು ವಿಕ್ರಮ್‌ ಲ್ಯಾಂಡರ್‌ ಅನ್ನು ಚಂದ್ರನ ಕಕ್ಷೆಗೆ ರವಾನಿಸಿರುವ ಪ್ರೊಪಲ್ಷನ್‌ ಮಾಡ್ಯೂಲ್‌ನ ಶೇಪ್‌ ಪೇಲೋಡ್‌ ಅನ್ನು ಭಾನುವಾರ ಆನ್‌ ಮಾಡಲಾಗುತ್ತದೆ ಎಂದು ಟ್ವೀಟ್‌ನಲ್ಲಿ ಇಸ್ರೋ ಮಾಹಿತಿ ನೀಡಿದೆ.

Chandrayaan-3 Updates: ಚಂದ್ರನಲ್ಲಿ ಲ್ಯಾಂಡರ್‌ನಿಂದ ಸ್ಥಳ ಹುಡುಕಾಟ, ಚಿತ್ರ ರಿಲೀಸ್‌ ಮಾಡಿದ ಇಸ್ರೋ

ಬುಧವಾರ ರಾತ್ರಿಯೇ, ಚಂದ್ರನ ಮೇಲೆ ಲ್ಯಾಂಡ್‌ ಅದ ಸುಮಾರು ಮೂರೂವರೆ ತಾಸಿನ ಬಳಿಕ ಲ್ಯಾಂಡರ್‌ನಿಂದ ಪ್ರಗ್ಯಾನ್‌ ರೋವರ್‌ ಸುಲಲಿತವಾಗಿ ಹೊರಬಂದಿತ್ತು ಹಾಗೂ ಮೊದಲ ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. ಇಂದು ಅದರ ವಿಡಿಯೋವನ್ನು ಇಸ್ರೋ ರಿಲೀಸ್ ಮಾಡಿದೆ.

ಇನ್ನೂ 14 ದಿನ ಹೆಚ್ಚುವರಿ ಕಾರ‍್ಯ- ಇಸ್ರೋ ವಿಶ್ವಾಸ:
ಭೂಮಿಯ 14 ದಿನಗಳು 1 ಚಂದ್ರನ ದಿನಕ್ಕೆ ಸಮ. ಹೀಗಾಗಿ ಬುಧವಾರದಿಂದ 14 ದಿನ ಕಾಲ ಚಂದ್ರನ ಮೇಲೆ ಅಧ್ಯಯನ ನಡೆಸುವ ಶಕ್ತಿಯು ಪ್ರಗ್ಯಾನ್‌ ರೋವರ್‌ ಹಾಗೂ ವಿಕ್ರಮ್‌ ಲ್ಯಾಂಡರ್‌ಗೆ ಇದೆ. ನಂತರ ಭೂಮಿಯ 14 ದಿನಗಳ ಕಾಲ (ಚಂದ್ರನ 1 ದಿನ) ಚಂದ್ರನಲ್ಲಿ ರಾತ್ರಿ ಸಂಭವಿಸಲಿದ್ದು, ಆಗ ಕೊರೆಯುವ ಚಳಿ ಕಾರಣ ರೋವರ್‌ ಹಾಗೂ ಲ್ಯಾಂಡರ್‌ಗಳು ನಿಷ್ಕ್ರೀಯಗೊಳ್ಳಬಹುದು ಎಂದು ಆರಂಭದಲ್ಲಿ ವಿಶ್ಲೇಷಿಸಲಾಗಿತ್ತು.

ಆದರೆ ಚಂದ್ರನಲ್ಲಿ ಸಂಭವಿಸುವ 14 ದಿನಗಳ ರಾತ್ರಿ ಬಳಿಕವೂ ರೋವರ್‌ ಹಾಗೂ ಲ್ಯಾಂಡರ್‌ ಸುಸ್ಥಿತಿಯಲ್ಲಿ ಇರುವ ನಿರೀಕ್ಷೆಯಿದೆ. ಹೀಗಾಗಿ ಆ ರಾತ್ರಿ ಕಳೆದ ಬಳಿಕ ಮತ್ತೆ 14 ದಿನ ಕಾಲ ರೋವರ್‌ ಹಾಗೂ ಲ್ಯಾಂಡರ್‌ಗಳು ಚಂದ್ರನ ಮೇಲೆ ಕಾರಾರ‍ಯಚರಣೆ ನಡೆಸುವ ವಿಶ್ವಾಸವಿದೆ ಎಂದು ಇಸ್ರೋ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

 

Follow Us:
Download App:
  • android
  • ios