Asianet Suvarna News Asianet Suvarna News

ಡಾ ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂಭ್ರಮದಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದೇನು?

ಹಿಂದೂ ಕ್ಯಾಲೆಂಡರ್ ಪ್ರಕಾರ ಅಪ್ಪ ನಿನ್ನೆ ಹುಟ್ಟಿದ್ದು. ಎಲ್ಲರನ್ನ ಅಪ್ಪ ಮಳೆ ಬೆಳೆ ಹೇಗಿದೆ ಅಂತ ಕೇಳ್ತಿದ್ರು, ಈಗ ಮಳೆ ಆಗಲೇಬೇಕು. ಗಂಧದಗುಡಿ ಅಗರಬತ್ತಿ ಲಾಂಚ್ ಆಗಿದೆ, ಗಂಧದ ಕಡ್ಡಿಯಿಂದಲೇ ದೇವರಿಗೆ ಹತ್ರವಾಗೋದು, ನಾನು ಸದಾ ಅಪ್ಪಾಜಿ ನೆನಪಿನಲ್ಲಿಯೇ ಇರುತ್ತೇನೆ...

Sandalwood legend actor Dr Rajkumar 95 birthday today on 24 April srb
Author
First Published Apr 24, 2024, 6:39 PM IST

ಇಂದು (24 ಏಪ್ರಿಲ್) ವರನಟ ಡಾ.ರಾಜ್ ಕುಮಾರ್ (Dr Rajkumar) ಹುಟ್ಟುಹಬ್ಬದ ಸಂಭ್ರಮ. ಗಾಜನೂರಿನಲ್ಲಿ 24 ಏಪ್ರಿಲ್ 1929ರಂದು ಮುತ್ತುರಾಜ್ ಜನನವಾಯಿತು. ಇಂದು ಡಾ ರಾಜ್‌ಕುಮಾರ್ ಅವರ 95ನೇ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ. ಅಣ್ಣಾವ್ರು ಅಗಲಿ ಇಂದಿಗೆ 18 ವರ್ಷಗಳು ಕಳೆದುಹೋಗಿವೆ. ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್ ಸಮಾಧಿಗೆ ಪೂಜೆ ನಡೆದಿದೆ. ರಾಜ್ ಪುಣ್ಯಭೂಮಿಗೆ ರಾಜ್ ಕುಟುಂಬ ಪೂಜೆ ಸಲ್ಲಿಸಿದೆ. 'ನಟಸಾರ್ವಭೌಮ'ನ ನೆನಪಿನಲ್ಲಿ ರಾಜವಂಶದ ಫ್ಯಾನ್ಸ್ ಅಲ್ಲಿ ಕಿಕ್ಕಿರಿದು ಸೇರಿದ್ದಾರೆ. ರಾಜ್ ಸಮಾಧಿಗೆ ಅಭಿಮಾನಿಗಳು ಲಗ್ಗೆ ಇಟ್ಟಿದ್ದಾರೆ. 

ಡಾ. ರಾಜ್ ಬರ್ತಡೇ ನಿಮಿತ್ತ ಇಂದು ಮಾಧ್ಯಮದ ಜತೆ ಮಾತನಾಡಿದ ಡಾ ರಾಜ್ ಮಗ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) 'ವಿಶೇಷ ಅಂದ್ರೆ ಇವತ್ತು ಸ್ವಾತಿ ನಕ್ಷತ್ರ. ನಮ್ಮ ಅಪ್ಪಾಜಿಯವರು ಹುಟ್ಟಿದ ದಿನವೂ ಇದೇ ಬಂದಿತ್ತು. ಅಭಿಮಾನಿಗಳ ಪ್ರೀತಿನೇ ನಮ್ಮನ್ನ ಉಳಿಸಿರೋದು. ಜನರ ಜೈಕಾರವನ್ನ ನೋಡಿ ಅಪ್ಪಾಜಿ ಖುಷಿ ಪಡ್ತಿದ್ರು. ಡಾ ಡಾ ಡಾ ಅಂದ್ರೆ ಅಪ್ಪನಿಗೆ ಏನೋ ಸಂತೋಷ. ಅಪ್ಪಾಜಿ ಆಶೀರ್ವಾದ ಎಲ್ಲರ ಮೇಲಿದೆ. ರಾಜ್ ಇಲ್ಲ ಅನ್ನೋಕೆ ಕಾರಣವೇ ಇಲ್ಲ. ಅವರ ಫೋಟೋ ನೋಡಿನೇ ನಾನು ದಿನ ಶುರು ಮಾಡೋದು. 

ಡಾ ರಾಜ್‌ಕುಮಾರ್ 'ಐದು' ಶ್ರೇಷ್ಠ ಸಿನಿಮಾಗಳು; ಇಂದು 'ಬಂಗಾರದ ಮನುಷ್ಯ'ನ ಹುಟ್ಟಿದ ಹಬ್ಬ!

ಹಿಂದೂ ಕ್ಯಾಲೆಂಡರ್ ಪ್ರಕಾರ ಅಪ್ಪ ನಿನ್ನೆ ಹುಟ್ಟಿದ್ದು. ಎಲ್ಲರನ್ನ ಅಪ್ಪ ಮಳೆ ಬೆಳೆ ಹೇಗಿದೆ ಅಂತ ಕೇಳ್ತಿದ್ರು, ಈಗ ಮಳೆ ಆಗಲೇಬೇಕು. ಗಂಧದಗುಡಿ ಅಗರಬತ್ತಿ ಲಾಂಚ್ ಆಗಿದೆ, ಗಂಧದ ಕಡ್ಡಿಯಿಂದಲೇ ದೇವರಿಗೆ ಹತ್ರವಾಗೋದು, ನಾನು ಸದಾ ಅಪ್ಪಾಜಿ ನೆನಪಿನಲ್ಲಿಯೇ ಇರುತ್ತೇನೆ' ಎಂದಿದ್ದಾರೆ ರಾಘವೇಂದ್ರ ರಾಜ್ ಕುಮಾರ್. ಇಂದು ಡಾ ರಾಜ್ ಹುಟ್ಟುಹಬ್ಬದ ನಿಮಿತ್ತ ಸಾಕಷ್ಟು ಕಡೆಗಳಲ್ಲಿ ಡಾ ರಾಜ್‌ ಫೋಟೋಗೆ ಹಾರ ಹಾಕಿ ಗೌರವ ಸಲ್ಲಿಸಿದ್ದಾರೆ. ಡಾ ರಾಜ್ ಸಮಾಧಿಗಂತೂ ಲೆಕ್ಕವಿಲ್ಲದಷ್ಟು ಜನರು ಬಂದು ಭೇಟಿ ಕೊಟ್ಟು ಮೇರುನಟ, ತಮ್ಮ ಆರಾಧ್ಯ ದೈವಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಹೋಗಿದ್ದಾರೆ. 

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

ಒಟ್ಟಿನಲ್ಲಿ, ಪ್ರತಿವರ್ಷ ಏಪ್ರಿಲ್ 24 ಬಂದಾಗ ಕರುನಾಡಿನ ಯಾರೊಬ್ಬರೂ ಡಾ ರಾಜ್‌ ಜನ್ಮದಿನ ಇವತ್ತು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಡಾ ರಾಜ್‌ಕುಮಾರ್ ಅವರು 12 ಏಪ್ರಿಲ್ 2006 (12 April 2006)ರಂದು ಬೆಂಗಳೂರಿನಲ್ಲಿ ತಮ್ಮ 76ನೆಯ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗಳಿಸಿರುವ ಡಾ ರಾಜ್ ಕನ್ನಡಿಗರ ಆಸ್ತಿ ಎಂದೇ ಕರೆಯಲ್ಪಡುತ್ತಾರೆ. ಡಾ ರಾಜ್‌ ಜನ್ಮದಿನವನ್ನು ನಾಡಹಬ್ಬದಂತೆ ಆಚರಿಸಲಾಗುತ್ತದೆ. 

ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

Follow Us:
Download App:
  • android
  • ios