Asianet Suvarna News Asianet Suvarna News

ಕಮರ್ಷಿಯಲ್ ಸಿನಿಮಾಗಳೇ ಸೇಫ್‌ ಅಂದ್ರು ನಾನಿ, ರೀಸನ್‌ ಕೇಳಿದ್ರೆ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ!

ನಟ ನಾನಿ ತೆಲುಗು ಭಾಷೆಯಲ್ಲಿ 25 ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಕೂಡ ನಟಿಸಿ ನಾನಿ ಗಮನಸೆಳೆದಿದ್ದಾರೆ. ತೆಲುಗು ನಟರಲ್ಲಿ ಆರಕ್ಕೇರದ 

I do minimum guarantee film by including commercil elements says Telugu actor Nani srb
Author
First Published Apr 27, 2024, 7:53 PM IST

ತೆಲುಗು ನಟ ನಾನಿ (Nani) ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಸೀಕ್ರೆಟ್‌ ಒಂದನ್ನು ಹೇಳಿದ್ದಾರೆ. ಈ ಹಂತದಲ್ಲಿ ತಾವು ಸಾಕಷ್ಟು ಏಳುಬೀಳುಗಳನ್ನು ನೋಡಿದ್ದು, ಈ ಒಂದು ಹಂತದಲ್ಲಿ ತಮಗೆ ಕೆಲವು ಸಂಗತಿಗಳ ಬಗ್ಗೆ ಜ್ಞಾನೋದಯವಾಗಿದೆ ಎಂದಿದ್ದಾರೆ. 'ನಾನು ಕೆಲವು ಕಮರ್ಷಿಯಲ್ ಎಲಿಮೆಂಟ್ಸ್‌ ಇಟ್ಟುಕೊಂಡು ಸಿನಿಮಾ ಮಾಡಿ ಸಕ್ಸಸ್ ಆಗಿರುವಾಗ ನನ್ನಸಿನಿಮಾಗೆ ಮಿನಿಮಮ್ ಗ್ಯಾರಂಟಿ ಅಂತ ಇರುತ್ತವೆ. ಹಿಂದಿನ ಸಿನಿಮಾ ಸಕ್ಸಸ್ ನೋಡಿ ಮುಂದಿನ ಸಿನಿಮಾ ಬಜೆಟ್ ಹಾಗು ಗಳಿಕೆ ಬಗ್ಗೆ ಒಂದು ಲೆಕ್ಕಾಚಾರ ನಿರ್ಮಾಪಕರಿಗೆ ಇರುತ್ತದೆ.

ಕಮರ್ಷಿಯಲ್ ಸಿನಿಮಾ ಅಂದಮೇಲೆ ಅದರಲ್ಲಿ ಕೆಲವು ಅಂಶಗಳು ರಿಪೀಟ್ ಆಗುತ್ತವೆ. ಅದೇ ಅಂಶಗಳ ಮೇಲೆ ಸಿನಿಮಾ ಒಂದು ಮಟ್ಟಿಗಿನ ಸಕ್ಸಸ್ ಕಾಣುವುದು ಪಕ್ಕಾ ಎಂಬ ಗ್ಯಾರಂಟಿ ಇರುತ್ತದೆ. ಅಥವಾ, ಸಿನಿಮಾ ಗೆಲ್ಲದಿದ್ದರೂ ರಿಲೀಸ್‌ಗಿಂತಲೂ ಮೊದಲೇ ವ್ಯವಹಾರ ಮುಗಿದು ನಿರ್ಮಾಪಕರು ಸೇಫ್ ಆಗಿರುತ್ತಾರೆ. ಆದರೆ, ಪ್ರತಿ ಸಿನಿಮಾವನ್ನೂ ಬೇರೆ ಬೇರೆ ನಿರ್ದೇಶಕರ ಜತೆ ಮಾಡುತ್ತಾ, ಕಮರ್ಷಿಯಲ್ ಎಲಿಮೆಂಟ್ಸ್ ಬಿಟ್ಟು ಕಥೆಯ ಹಿಂದಷ್ಟೇ ಹೋಗಿ ಪ್ರಯೋಗಕ್ಕೆ ಮುಂದಾದರೆ ನಮ್ಮ ಅಭಿಮಾನಿಗಳು ಕನ್‌ಫ್ಯೂಸ್ ಆಗುತ್ತಾರೆ. ನನ್ನ ಸಿನಿಮಾ ಹೀಗಿರುತ್ತದೆ ಎಂದು ಮೊದಲೇ ಊಹಿಸಿ ಬರುವವರಿಗೆ ಎಕ್ಸ್‌ಪೆರಿಮೆಂಟ್‌ ಚಿತ್ರಗಳು ನಿರಾಸೆ ಮೂಡಿಸುತ್ತವೆ.

17ನೇ ವಯಸ್ಸಲ್ಲೇ ಅಸು ನೀಗಿದ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕನ್ನಡದಲ್ಲೂ ನಟಿಸಿದ್ದರು! 

ಒಟ್ಟಿನಲ್ಲಿ ಹೇಳಬೇಕೆಂದರೆ, ಒಮ್ಮೆ ಒಂದು ಮಟ್ಟಿಗೆ ಹೆಸರು ಮಾಡಿಕೊಂಡ ಮೇಲೆ ಕಮರ್ಷಿಯಲ್ ಎಲಿಮೆಂಟ್ಸ್ ಇಟ್ಟುಕೊಂಡು ಮಿನಿಮಮ್ ಗ್ಯಾರಂಟಿ ಸಿನಿಮಾ ಮಾಡಿ ಉದ್ಯಮದಲ್ಲಿ ನಿರಂತರವಾಗಿ ಕೆಲಸ ಸಿಗುವಂತೆ ಮಾಡಿಕೊಂಡಿರುವುದು ಕ್ಷೇಮ. ನಾನು ಪ್ರಯೋಗಕ್ಕೆ ಮುಂದಾದಾಗಲೆಲ್ಲ ಏಟು ತಿಂದಿದ್ದೇನೆ. ನನ್ನನ್ನು ನಂಬಿ ಹಣ ಹಾಕಿದ ನಿರ್ಮಾಪಕರಿಗೂ ಮೋಸವಾಗಿದೆ. ಹೀಗಾಗಿ ನಾನು ಆದಷ್ಟೂ ಹೆಚ್ಚು ಕಮರ್ಷಿಯಲ್ ಚಿತ್ರಗಳಿಗೆ ಒತ್ತು ಕೊಡುತ್ತೇನೆ. ನಿರಂತರ ಸಕ್ಸಸ್ ನಮ್ಮನ್ನು ಸ್ಟಾರ್‌ಗಳನ್ನಾಗಿ ಮಾಡಿ, ಅಲ್ಲೇ ಇಟ್ಟಿರುತ್ತದೆ. ಆದರೆ, ಪ್ರಯೋಗ ಅಯೋಮಯ ಪರಿಸ್ಥಿತಿಗೆ ತಳ್ಳುತ್ತದೆ' ಎಂದಿದ್ದಾರೆ ನಟ ನಾನಿ.

ಡಾ ರಾಜ್ 'ಕಮಲಾ.. ಕಮಲಾ...' ಎಂದು ಕೂಗುತ್ತಾ ಸಾಯುತ್ತಿದ್ದರೆ ನಟಿ ಜಯಂತಿ ಬಿಕ್ಕಿಬಿಕ್ಕಿ ಅತ್ತಿದ್ದರಂತೆ!

ಅಂದಹಾಗೆ, ನಟ ನಾನಿ ತೆಲುಗು ಭಾಷೆಯಲ್ಲಿ 25 ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಎಸ್‌ಎಸ್‌ ರಾಜಮೌಳಿ (SS Rajamouli)ನಿರ್ದೇಶನದ 'ಈಗ (Ega)' ಚಿತ್ರದಲ್ಲಿ ಕೂಡ ನಟಿಸಿ ನಾನಿ ಗಮನಸೆಳೆದಿದ್ದಾರೆ. ತೆಲುಗು ನಟರಲ್ಲಿ ಆರಕ್ಕೇರದ ಮೂರಕ್ಕಿಳಿಯದ ಹಲವು ನಟರಲ್ಲಿ ಈ ನಾನಿ ಕೂಡ ಒಬ್ಬರು ಎನ್ನಬಹುದು. ಒಟ್ಟಿನಲ್ಲಿ, ನಟ ನಾನಿ ತಮ್ಮದೇ ದೃಷ್ಟಿಕೋನದಲ್ಲಿ ಸಿನಿಮಾ ಬಗ್ಗೆ ಸೀಕ್ರೆಟ್‌ ಒಂದನ್ನು ಹಂಚಿಕೊಂಡಿದ್ದಾರೆ. 

ರಶ್ಮಿಕಾ ಜತೆ ವಾಲಿಬಾಲ್ ಆಡಲು ಬಯಸುತ್ತೇನೆ; ವಿಜಯ್ ದೇವರಕೊಂಡ ಮಾತಿಗೆ ಫ್ಯಾನ್ಸ್ ರಿಯಾಕ್ಷನ್ಸ್‌ ನೋಡಿ!

Follow Us:
Download App:
  • android
  • ios