userpic
user icon
0 Min read

ಚಾಲೆಂಜಿಂಗ್ ಸ್ಟಾರ್ 'ಕಾಟೇರ' ಬಿಡುಗಡೆ ಘೋಷಣೆ; ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂತಸ!

Challenging star darshan lead kaatera movie releases on 29th December 2023 srb

Synopsis

ಸ್ಯಾಂಡಲ್‌ವುಡ್‌ ಕನಸಿನ ರಾಣಿ, ಹಲವು ದಶಕಗಳ ಹಿಂದೆ ಸೂಪರ್ ಸ್ಟಾರ್ ನಟಿಯಾಗಿ ಮೆರೆದ ಮಾಲಾಶ್ರೀ ಮಗಳು ಆರಾಧನಾ ಎಂಬುದು ವಿಶೇಷ ಸಂಗತಿ. ಆರಾಧನಾಗೆ ಇದು ಕೆರಿಯರ್ ಪ್ರಾರಂಭ, ಸಿನಿರಂಗದಲ್ಲಿ ಮೊಟ್ಟಮೊದಲ ಚಿತ್ರವಾಗಿದೆ. ಮಾಲಾಶ್ರೀ ಮಗಳು ಎಂಬ ಕಾರಣಕ್ಕೇ ಆರಾಧನಾರನ್ನು ನೋಡಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. 

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ಕಾಟೇರ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 29 ಡಿಸೆಂಬರ್ 2023ರಂದೇ ಕಾಟೇರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ರಾಕ್‌ಲೈನ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಕಾಟೇರ ಚಿತ್ರವು 70ರ ದಶಕದ ಕಥೆಯೊಂದನ್ನು ಹೇಳಲು ಹೊರಟಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

ದರ್ಶನ್ ನಟನೆಯ ಕಾಟೇರ ಚಿತ್ರದ ಬಿಡುಗಡೆಯನ್ನು ಇಷ್ಟು ಬೇಗ ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಕಾರಣ, ಕ್ರಾಂತಿ ಚಿತ್ರದ ಬಳಿಕ ನಟ ದರ್ಶನ್ ಅಭಿನಯದ ಕಾಟೇರ ಚಿತ್ರವು ಮುಹೂರ್ತ ಆಚರಸಿಕೊಂಡು ಶೂಟಿಂಗ್ ಶುರು ಮಾಡಿಕೊಂಡಿತ್ತು. ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರದ ಹೆಚ್ಚಿನ ಭಾಗದ ಶೂಟಿಂಗ್ ಕನಕಪುರದ ಸೆಟ್ ಒಂದರಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಕನಕಪುರದ ಅನೇಕ ಹಳ್ಳಿಗಳಲ್ಲಿ ಕೂಡ ಈ ಚಿತ್ರದ ಹಲವು ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಈ ಚಿತ್ರದ ಕಥೆ 70ರ ದಶಕದಲ್ಲಿ ಹಳ್ಳಿಯೊಂದರಲ್ಲಿ ಸಾಮಾನ್ಯ ವರ್ಗದ ಮನೆಯಲ್ಲಿ ನಡೆದ ಕಥೆ ಎನ್ನಲಾಗಿದೆ. 

ಸ್ಯಾಂಡಲ್‌ವುಡ್‌ ಕನಸಿನ ರಾಣಿ, ಹಲವು ದಶಕಗಳ ಹಿಂದೆ ಸೂಪರ್ ಸ್ಟಾರ್ ನಟಿಯಾಗಿ ಮೆರೆದ ಮಾಲಾಶ್ರೀ ಮಗಳು ಆರಾಧನಾ ಎಂಬುದು ವಿಶೇಷ ಸಂಗತಿ. ಆರಾಧನಾಗೆ ಇದು ಕೆರಿಯರ್ ಪ್ರಾರಂಭ, ಸಿನಿರಂಗದಲ್ಲಿ ಮೊಟ್ಟಮೊದಲ ಚಿತ್ರವಾಗಿದೆ. ಮಾಲಾಶ್ರೀ ಮಗಳು ಎಂಬ ಕಾರಣಕ್ಕೇ ಆರಾಧನಾರನ್ನು ನೋಡಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಜತೆಗೆ, ಕ್ರಾಂತಿ ಬಳಿಕ ದರ್ಶನ್ ಅಭಿಮಾನಿಗಳಿಗೆ ನೋಡಲು ಯಾವುದೇ ಚಿತ್ರವೂ ಬಂದಿಲ್ಲ. ಈ ಎಲ್ಲ ಕಾರಣಗಳಿಂದ ದರ್ಶನ್ ಅಭಿನಯದ ಕಾಟೇರ' ಚಿತ್ರವು ಭಾರೀ ನಿರೀಕ್ಷೆ ಮೂಡಿಸಿದೆ. 

ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ, ಮಂಬೈ ಪೊಲೀಸರಿಂದ ವೈ ಪ್ಲಸ್ ಭದ್ರತೆ

ಸದ್ಯಕ್ಕೆ ಕನ್ನಡವನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸದೇ ಅಚ್ಚ ಕನ್ನಡವನ್ನೇ ಉಸಿರಾಡುತ್ತಿರುವ ಏಕೈಕ ನಟ ದರ್ಶನ್. ಕನ್ನಡದ ನಿರ್ದೇಶಕರು, ಕನ್ನಡದ ನಾಯಕಿ ಹಾಗು ಕರ್ನಾಟಕದಲ್ಲೇ ಶೂಟಿಂಗ್ ಮಾಡಿಸುವ ಮೂಲಕ ನಟ ದರ್ಶನ್ ತಮ್ಮ ಕನ್ನಡದ ಪ್ರೇಮವನ್ನು ಜಗತ್ತಿಗೇ ಸಾರಿದ್ದಾರೆ. ಇಂದು ಎಲ್ಲರೂ ಪ್ಯಾನ್ ಇಂಡಿಯಾ ನಟರು, ಪ್ಯಾನ್ ಇಂಡಿಯಾ ಸಿನಿಮಾಗಳು ಎಂದು ಬೊಬ್ಬೆ ಹೊಡೆಯುವ ಕಾಲದಲ್ಲೂ ನಟ ದರ್ಶನ್ ಮಾತ್ರ ಅಚ್ಚಗನ್ನಡದ ಮಂತ್ರ ಜಪಿಸುತ್ತಾ ಕನ್ನಡ ಪ್ರೇಮಕ್ಕೆ ಮಾದರಿಯಾಗಿ ತಮ್ಮತನವನ್ನು, ನಾಡಿನ ಘನತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು. 

 

 

Latest Videos