Asianet Suvarna News Asianet Suvarna News

AAI Recruitment 2024 ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಉದ್ಯೋಗ ನೇಮಕಾತಿ

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾನಲ್ಲಿ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಲು ಮೆ 1 ಕೊನೆಯ ದಿನವಾಗಿದೆ.

AAI Junior Executive Recruitment 2024 for many Vacancies gow
Author
First Published Apr 17, 2024, 11:28 AM IST

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾನಲ್ಲಿ (ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಲು ಮೆ 1 ಕೊನೆಯ ದಿನವಾಗಿದೆ.

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾನಲ್ಲಿ 2024 ಗೇಟ್‌ ಪರೀಕ್ಷೆಯ ಅರ್ಹತೆಯ ಮೂಲಕ ಖಾಲಿ ಇರುವ 490 ಜೂನಿಯರ್ ಎಕ್ಸಿಕ್ಯೂಟಿವ್ (ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಆರ್ಕಿಟೆಕ್ಚರ್) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಕೆಪಿಎಸ್‌ಸಿಯಿಂದ ಹೈದ್ರಾಬಾದ್‌ ಕರ್ನಾಟಕದ ವೃಂದದ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿ

ಹುದ್ದೆಯ ವಿವರ:
ಜೂನಿಯರ್ ಎಕ್ಸಿಕ್ಯೂಟಿವ್ (ಆರ್ಕಿಟೆಕ್ಚರ್): 03 ಹುದ್ದೆ
ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್-ಸಿವಿಲ್): 90 ಹುದ್ದೆ
ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್-ಎಲೆಕ್ಟ್ರಿಕಲ್) : 106 ಹುದ್ದೆ
ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್) : 278 ಹುದ್ದೆ
ಜೂನಿಯರ್ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ): 13 ಹುದ್ದೆ

ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 01-05-2024

247 ಪಿಡಿಒಗಳು, 327 ಗ್ರೂಪ್‌ ಬಿ ಹುದ್ದೆಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

ಅರ್ಜಿ ಶುಲ್ಕ
ಸಾಮಾನ್ಯ ವರ್ಗದವರಿಗೆ: ರು.300
ಎಸ್‌ಸಿ/ಎಸ್‌ಟಿ/ ಪಿಡಬ್ಲ್ಲೂಡಿ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ
ವಯಸ್ಸಿನ ಮಿತಿ (01-05-2024 ರಂತೆ): ಗರಿಷ್ಠ ವಯಸ್ಸಿನ ಮಿತಿ: 27 ವರ್ಷಗಳು

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ತಾವು ಆಯ್ಕೆ ಬಯಸುವ ಹುದ್ದೆಗೆ ತಕ್ಕಂತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್‌/ ಸಿವಿಲ್‌ /ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್/ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕು ಹಾಗೂ ಆಯಾಯ ವಿದ್ಯಾರ್ಹತೆಗೆ ಸಂಬಂಧಿಸಿದಂತೆ 2024 ರ ಗೇಟ್‌ ಪರೀಕ್ಷೆಯನ್ನು ತೇರ್ಗಡೆ ಹೊಂದಿರಬೇಕು.

ವೇತನ ಶ್ರೇಣಿ: ರು.40000-3%-140000

UPSC Result 2023: ದೇಶಕ್ಕೆ ಟಾಪರ್‌ ಈ 10 ಮಂದಿ, ಬಹುತೇಕರು ಸರ್ಕಾರಿ ಸೇವೆಯಲ್ಲಿರುವವರೇ!

ಆಯ್ಕೆಯ ವಿಧಾನ: ಅಭ್ಯರ್ಥಿಗಳು 2024ರ ಗೇಟ್‌ ಪರೀಕ್ಷೆಯಲ್ಲಿ ಗಳಿಸಿದ ಶೇಕಡಾವಾರು ಅಂಕ ಮತ್ತು ಪದವಿಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಮೆರಿಟ್‌ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ https://www.aai.aero/en/careers/recruitment ವೀಕ್ಷಿಸಿ.
 

Follow Us:
Download App:
  • android
  • ios