Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಮತದಾನ ಮುನ್ನಾ ದಿನ ಮಹಿಳೆಯರಿಗೆ ಸಿಎಂ ಸಿದ್ದು ಪತ್ರ

ಇದು ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಸಿದ್ಧಾಂತ ನಂಬಿರುವ ಬಿಜೆಪಿ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಸಂವಿಧಾನಕ್ಕೆ ಬದ್ಧವಿರುವ ಕಾಂಗ್ರೆಸ್‌ ನಡುವಿನ ಚುನಾವಣೆ. ಕಾಯಾ ವಾಚಾ ಮನಸಾ ಬಿಜೆಪಿ ಮಹಿಳಾ ವಿರೋಧಿ ಪಕ್ಷ. ಕರ್ನಾಟಕದಲ್ಲಿ ಸ್ತ್ರೀ ಪೀಡಕರ ಜೊತೆಗೆ ಬಿಜೆಪಿ ಕೈಜೋಡಿಸಿರುವುದು ಅದಕ್ಕೆ ಇತ್ತೀಚಿನ ಉದಾಹರಣೆ. ಹೀಗಾಗಿ ಅವರನ್ನು ಸೋಲಿಸಿ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ 
 

CM Siddaramaiah Letter to Women before Voting at Karnataka in Lok Sabha Elections 2024 grg
Author
First Published May 7, 2024, 4:26 AM IST

ಬೆಂಗಳೂರು(ಮೇ.07): ‘ಪ್ರಸಕ್ತ ಲೋಕಸಭೆ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ಸೋಲು-ಗೆಲುವು ನಿರ್ಧರಿಸುವುದಿಲ್ಲ. ಮಹಿಳೆಯರ ಪರವಾದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡ ನಿರ್ಧರಿಸಲಿದೆ. ಹೀಗಾಗಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಸ್ಥಾನಮಾನವನ್ನು ನೀಡುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮಹಿಳೆಯರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ರಾಜ್ಯದ ಮಹಿಳೆಯರಿಗೆ ಬಹಿರಂಗ ಪತ್ರ ಬರೆದಿರುವ ಅವರು, ‘ಇದು ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಸಿದ್ಧಾಂತ ನಂಬಿರುವ ಬಿಜೆಪಿ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಸಂವಿಧಾನಕ್ಕೆ ಬದ್ಧವಿರುವ ಕಾಂಗ್ರೆಸ್‌ ನಡುವಿನ ಚುನಾವಣೆ. ಕಾಯಾ ವಾಚಾ ಮನಸಾ ಬಿಜೆಪಿ ಮಹಿಳಾ ವಿರೋಧಿ ಪಕ್ಷ. ಕರ್ನಾಟಕದಲ್ಲಿ ಸ್ತ್ರೀ ಪೀಡಕರ ಜೊತೆಗೆ ಬಿಜೆಪಿ ಕೈಜೋಡಿಸಿರುವುದು ಅದಕ್ಕೆ ಇತ್ತೀಚಿನ ಉದಾಹರಣೆ. ಹೀಗಾಗಿ ಅವರನ್ನು ಸೋಲಿಸಿ’ ಎಂದು ಹೇಳಿದ್ದಾರೆ.

Lok Sabha Elections 2024: ರಾಜ್ಯದಲ್ಲಿಂದು 2ನೇ ಹಂತದ ಲೋಕಸಭೆ ಸಮರ

ಕೈಬಲಪಡಿಸಿ:

ಐದು ಸಾವಿರ ವರ್ಷಗಳಿಂದ ನಿರಂತರವಾಗಿ ತಾರತಮ್ಯ, ಶೋಷಣೆಗೆ ತುತ್ತಾಗಿರುವ ಮಹಿಳೆಯರ ಸಬಲೀಕರಣದ ಪ್ರಯತ್ನ ಮುಂದುವರಿಯಬೇಕಾದರೆ ಮಹಿಳೆಯರು ತಮ್ಮ ಕೈ ಬಲಪಡಿಸುವವರ ಕೈ ಹಿಡಿಯಬೇಕು. ಬಿಜೆಪಿ, ಆರ್‌ಎಸ್‌ಎಸ್‌ ಸ್ಪಷ್ಟವಾಗಿ ಮಹಿಳಾ ವಿರೋಧಿ. ನಮ್ಮ ಸರ್ಕಾರ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ ಯೋಜನೆಗಳನ್ನು ಶುರುಮಾಡಿದ ದಿನದಿಂದಲೂ ಬಿಜೆಪಿ ನಾಯಕರು ಅಪಪ್ರಚಾರದ ಆಂದೋಲನ ಪ್ರಾರಂಭಿಸಿದ್ದಾರೆ. ಈ ರೀತಿಯ ನೆರವು ನೀಡಿದರೆ ಹೆಣ್ಣುಮಕ್ಕಳು ಮನೆಬಿಟ್ಟು ಹೋಗುತ್ತಾರೆ ಎಂದೆಲ್ಲಾ ತೀರಾ ಕ್ಷುಲ್ಲಕತನದ ಆರೋಪ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಲು ಸಾಲು ಯೋಜನೆ:

ಐದು ವರ್ಷಗಳ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಿ ಸಾಲು-ಸಾಲು ಯೋಜನೆ ನೀಡಿದ್ದೆವು. ಯೋಜನೆಗಳ ಫಲವನ್ನೂ ಪಡೆದಿದ್ದೀರಿ. ‘ಗೃಹ ಲಕ್ಷ್ಮೀ’ ಯೋಜನೆಯಡಿ 1.21 ಕೋಟಿ ಮನೆ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ರು. ಹಾಗೂ ‘ಶಕ್ತಿ’ ಯೋಜನೆಯಡಿ ಈವರೆಗೆ 201 ಕೋಟಿಗೂ ಅಧಿಕ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. 4 ಸಾವಿರ ಕೂಸಿನ ಮನೆ, 19.27 ಲಕ್ಷ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ಸೇರಿ ಬಜೆಟ್‌ನಲ್ಲಿ ಮಹಿಳೆಯರಿಗೆ 86,423 ಕೋಟಿ ರು. ಅನುದಾನ ನೀಡಿದ್ದೇವೆ ಎಂದು ವಿವರಿಸಿದ್ದಾರೆ.

'ನಾನು ಡಾನ್ಸ್‌ ಮಾಡ್ತಿರೋದನ್ನ ನೋಡಿ ಎಂಜಾಯ್‌ ಮಾಡಿದೆ' ‘DICTATOR’ ಪೋಸ್ಟ್‌ಗೆ ಮೋದಿ ಪ್ರತಿಕ್ರಿಯೆ!

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಯಜಮಾನಿಗೆ ಪ್ರತಿ ವರ್ಷ 1 ಲಕ್ಷ ರು. ನೆರವು ನೀಡುವ ಮಹಾಲಕ್ಷ್ಮೀ ಯೋಜನೆ, ಸರ್ಕಾರಿ ಉದ್ಯೋಗದಲ್ಲಿ ಶೇ.50 ರಷ್ಟು ಮೀಸಲಾತಿ, ಆಶಾ, ಅಂಗನವಾಡಿ ಹಾಗೂ ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆಯರ ವೇತನ ದ್ವಿಗುಣದಂತಹ ಮಹಿಳಾ ಪರ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲೇನಿದೆ?

ಪ್ರಸಕ್ತ ಲೋಕಸಭೆ ಚುನಾವಣೆ ರಾಜಕೀಯ ಪಕ್ಷಗಳ ಸೋಲು- ಗೆಲುವನ್ನಷ್ಟೇ ನಿರ್ಧರಿಸುವುದಿಲ್ಲ. ಮಹಿಳೆಯರ ಪರವಾದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳ ಭವಿಷ್ಯವೂ ಇದೆ. ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ ಎಂಬ ಸಿದ್ಧಾಂತ ಹೊಂದಿದ ಬಿಜೆಪಿ ಸ್ತ್ರೀ ವಿರೋಧಿ ಪಕ್ಷವಾಗಿದ್ದು, ಕರ್ನಾಟಕದಲ್ಲಿ ಸ್ತ್ರೀಪೀಡಕರ ಜತೆ ಬಿಜೆಪಿ ಕೈಜೋಡಿಸಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಶುರು ಮಾಡಿದಾಗಿನಿಂದ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಈ ರೀತಿ ನೆರವು ನೀಡಿದರೆ ಹೆಣ್ಣು ಮಕ್ಕಳು ಮನೆ ಬಿಟ್ಟು ಹೋಗುತ್ತಾರೆ ಎಂದು ಆರೋಪಿಸಿದೆ. ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಸಂವಿಧಾನಕ್ಕೆ ಬದ್ಧವಿರುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಎಂದು ಮನವಿ ಮಾಡಿದ್ದಾರೆ.

Follow Us:
Download App:
  • android
  • ios