Asianet Suvarna News Asianet Suvarna News

ಅಜಾತಶತ್ರು ಧರಂ ಸಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದು...

ಇಹಲೋಕ ತ್ಯಜಿಸಿರುವ ಧರಂ ಸಿಂಗ್ ಕರ್ನಾಟಕದ ಅಜಾತಶತ್ರು ರಾಜಕಾರಣಗಳಲ್ಲಿ ಪ್ರಮುಖರು. ಪಕ್ಷಭೇದವಿಲ್ಲದೇ ಪ್ರತಿಯೊಬ್ಬರಿಂದಲೂ ಪ್ರಶಂಸಿಸಲ್ಪಡುವ ಅಪರೂಪದ ರಾಜಕಾರಣಿ. ಪ್ರಬಲ ಜಾತಿಯ ಹಿನ್ನೆಲೆಯಿಲ್ಲದೇ ಸಿಎಂ ಆದ ಅಪ್ಪಟ ಕಾಂಗ್ರೆಸ್ಸಿಗರು ಅವರು. ಧರಮ್ ಸಿಂಗ್ ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ.

dharam sing profile and details

ಬೆಂಗಳೂರು: ಇಹಲೋಕ ತ್ಯಜಿಸಿರುವ ಧರಂ ಸಿಂಗ್ ಕರ್ನಾಟಕದ ಅಜಾತಶತ್ರು ರಾಜಕಾರಣಗಳಲ್ಲಿ ಪ್ರಮುಖರು. ಪಕ್ಷಭೇದವಿಲ್ಲದೇ ಪ್ರತಿಯೊಬ್ಬರಿಂದಲೂ ಪ್ರಶಂಸಿಸಲ್ಪಡುವ ಅಪರೂಪದ ರಾಜಕಾರಣಿ. ಪ್ರಬಲ ಜಾತಿಯ ಹಿನ್ನೆಲೆಯಿಲ್ಲದೇ ಸಿಎಂ ಆದ ಅಪ್ಪಟ ಕಾಂಗ್ರೆಸ್ಸಿಗರು ಅವರು.

ಹೈದರಾಬಾದ್-ಕರ್ನಾಟಕ ರಾಜಕಾರಣದ ಎರಡು ಕಣ್ಣುಗಳೆಂದರೆ ಒಂದು ಧರಮಸಿಂಗ್ ಮತ್ತೊಂದು ಮಲ್ಲಿಕಾರ್ಜುನ ಖರ್ಗೆ ಎಂದೇ ಹೇಳಬಹುದು. ರಾಜಕಾರಣದ ಲವಕುಶ, ರಾಮಲಕ್ಷ್ಮಣರೆಂದೇ ಇವರಿಬ್ಬರನ್ನು ಕರೆಯುತ್ತಿದ್ದರು. ಅಷ್ಟೊಂದು ಕೋ ಆರ್ಡಿನೇಶನ್ ಇವರಿಬ್ಬರಲ್ಲಿತ್ತು ಎಂದೇ ಹೇಳಲಾಗುತ್ತಿತ್ತು. ಧರಂಸಿಂಗ್ , ಮಲ್ಲಿಕಾರ್ಜುನ್ ಖರ್ಗೆ ಮತ್ತು ಹೆಚ್ ಕೆ ಪಾಟೀಲರ ಒಡನಾಟವನ್ನ ಕಂಡು ಸಮಕಾಲೀನ ರಾಜಕಾರಣಿಗಳು ಮತ್ತು ಪತ್ರಕರ್ತರು  ’ಸೆಟ್ ದೋಸೆ’ ಕಾಂಬಿನೇಶನ್ ಎಂದೇ ಬಣ್ಣಿಸುತ್ತಿದ್ದರು.

ಧರಮ್ ಸಿಂಗ್ ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ.

ಧರಂಸಿಂಗ್ ಪ್ರೊಫೈಲ್
ತಂದೆಯ ಹೆಸರು: ನಾರಾಯಣ ಸಿಂಗ್
ತಾಯಿ: ಪದ್ಮಾವತಿ
ಹುಟ್ಟಿದ್ದು: 25.12.1936
ಜನ್ಮಸ್ಥಳ: ಕಲಬುರಗಿ ಜಿಲ್ಲೆ, ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ
ಜಾತಿ: ರಜಪೂತ
ಪತ್ನಿ: ಪ್ರಭಾವತಿ
ಮಕ್ಕಳು: 3 (ಇಬ್ಬರು ಗಂಡು ಮಕ್ಕಳು - ಜೇವರ್ಗಿ ಶಾಸಕ ಅಜಯಸಿಂಗ್ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮತ್ತು ಓರ್ವ ಪುತ್ರಿ)
ವಿದ್ಯಾರ್ಹತೆ: ಎಂಎ-ಎಲ್​ಎಲ್​ಬಿ, ಉಸ್ಮನಾಬಾದ್ ವಿವಿ, ಹೈದ್ರಾಬಾದ್

ರಾಜಕೀಯ ಪ್ರವೇಶ:
1) ತಮ್ಮ 24, 25 ನೇ ವಯಸ್ಸಿನಲ್ಲಿ ಕಾಂಗ್ರೆಸ್ ನೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡರು
2) 1968 ರಿಂದ 1988 ರವರೆಗೆ ಸಿಟಿ ಕೌನ್ಸಿಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ರು.
3) 1978 ರಲ್ಲಿ ಮೊದಲ ಬಾರಿಗೆ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶ ಮಾಡಿದ್ರು.
4) 1980 ರಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದ್ರು.
5) 1983 ರಲ್ಲಿ ಜೇವರ್ಗಿ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ್ರು.
6) 1985 ರಲ್ಲಿ ಜೇವರ್ಗಿ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ
7) 1989 ರಲ್ಲಿ ನಾಲ್ಕನೇ ಬಾರಿ ಶಾಸಕರಾಗಿ ಜೇವರ್ಗಿಯಿಂದ ಆಯ್ಕೆ
8) 1994 ರಲ್ಲಿ ಐದನೇ ಬಾರಿಗೆ ಅದೇ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆ
9) 1999 ರಲ್ಲಿ ಆರನೇ ಬಾರಿಗೆ ಜೇವರ್ಗಿಯಿಂದ ಶಾಸಕರಾಗಿ ಆಯ್ಕೆ
10) 2004 ರಲ್ಲಿ ಏಳನೇ ಬಾರಿಗೆ ವಿಧಾನಸಭೆಗೆ ಆಯ್ಕೆ
11) 2004 ಮೇ 28 ರಂದು ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿ ಅಧಿಕಾರ
12) 2006 ಜನವರಿ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
13) 2008 ರಲ್ಲಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿ ಎಂಟನೇ ಬಾರಿ ವಿಧಾನಸಭೆ ಪ್ರವೇಶ ಮಾಡುವ ಕನಸಿಗೆ ಭಗ್ನ. ಈ ಬಾರಿ ಸೋಲು.
14) 2009 ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರು.
15) 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು

ಲೋಕಸಭೆ ಚುನಾವಣೆಯಲ್ಲಿ ಸೋತಾಗಿನಿಂದ ಧರಂ ಸಿಂಗ್ ಅವರು ವಿಶ್ರಾಂತ ಜೀವನವನ್ನ ಸಾಗಿಸುತ್ತಿದ್ದರು. ಆದ್ರೂ ಸಮಸ್ಯೆ ಹೇಳಿಕೊಂಡು ಮನೆ ಬಾಗಿಲಿಗೆ ಬರುವ ಕಾರ್ಯಕರ್ತರಿಗೆ, ಜನರಿಗೆ ಪರಿಹಾರ ನೀಡುವ ಕೆಲಸವನ್ನ ಮಾಡುತ್ತಿದ್ದರು. ಜೊತೆಗೆ ಇಬ್ಬರು ಮಕ್ಕಳು ಶಾಸಕರಾದ್ದರಿಂದ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು.

ಕಾಂಗ್ರೆಸ್ಸಿನಿಂದ ರಾಜಕೀಯ ಬದುಕನ್ನು ಆರಂಭಿಸಿದ್ದ ಧರಂಸಿಂಗ್ ಎಲ್ಲಿಯೂ ರಾಜಕಾರಣದಲ್ಲಿ ಕಪ್ಪುಚುಕ್ಕೆ ಹೊಂದಿದವರಲ್ಲ. ಇದೂವರೆಗೂ ರಾಜ್ಯ ಕಾಂಗ್ರೆಸ್ಸಿನಲ್ಲಿ ಮಹತ್ವದ ಬದಲಾವಣೆಗಳಾಗುವ ಸಂದರ್ಭದಲ್ಲಿ  ಇವರ ಸಲಹೆ ಮಾರ್ಗದರ್ಶನ ಪಡೆಯಲಾಗುತ್ತಿತ್ತು

ಮುಖ್ಯಮಂತ್ರಿ ಆಗಿದ್ದ ವೇಳೆ, ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು. ಅಂದಿನ ಲೋಕಾಯುಕ್ತ ಸಂತೋಷ್ ಹೆಗಡೆ ನೀಡಿದ ವರದಿಯಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಇತ್ತೀಚಿಗೆ ಎಸ್​ಐಟಿಗೆ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮಾಹಿತಿ ಕೇಳಿತ್ತು.

ಅತ್ಯಧಿಕ ಬಾರಿ ಶಾಸಕರಾಗಿ ಆಯ್ಕೆಯಾದ್ರೂ ಹೇಳಿಕೊಳ್ಳುವ ಹಾಗೆ ಕ್ಷೇತ್ರವನ್ನು ಮತ್ತು ಸಂಸದರಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿಲ್ಲ ಅನ್ನೋ ಆರೋಪವಿತ್ತಾದ್ರೂ, ಕೆಲ ನೀರಾವರಿ ಯೋಜನೆಗಳು, ಜಿಲ್ಲೆ ಮತ್ತು ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ರು ಎಂದೇ ಹೇಳಬಹುದು.

Follow Us:
Download App:
  • android
  • ios