Asianet Suvarna News Asianet Suvarna News

ಜಾಲತಾಣ ವಿಳಾಸಗಳ ಸಾರ್ವತ್ರಿಕ ಸ್ವೀಕೃತಿ ದಿನಾಚರಣೆ

ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಸ್ವೀಕೃತಿ ದಿನಾಚರಣೆ ಆಚರಿಸಲಾಗುತ್ತಿದೆ. ಇದನ್ನು ದೆಹಲಿಯಲ್ಲಿ ಮಾರ್ಚ್ 28, 2023ರಂದು ನಡೆಸಲಾಗುವುದು. ಈ ಬಗ್ಗೆ ಡಾ.ಯು.ಬಿ. ಪವನಜ ಬರೆದಿರೋ ಲೇಖನ ಇಲ್ಲಿದೆ.

Celebrating Universal Acceptance of Web Addresses Vin
Author
First Published Mar 19, 2023, 3:59 PM IST

- ಡಾ.ಯು.ಬಿ. ಪವನಜ

ಅಂತರ್ಜಾಲ ತಾಣಗಳು ಮತ್ತು ಅವುಗಳ ವಿಳಾಸಗಳು ಇಂಗ್ಲಿಷಿನಲ್ಲೇ ಇರಬೇಕಾಗಿಲ್ಲ. ಈಗ ಜಾಲತಾಣ ವಿಳಾಸಗಳು ಜಗತ್ತಿನ ಹಲವಾರು ಭಾಷೆಗಳಲ್ಲಿರಬಹುದು. ಇವುಗಳಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳೂ ಸೇರಿವೆ. ಆದರೆ ಸದ್ಯಕ್ಕೆ ಅವು ಭಾರತ, भारत, .భారత, .ഭാരത, ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿದೆ. ಜಾಲತಾಣ ವಿಳಾಸ ಕನ್ನಡದಲ್ಲಿ ಬಂದಾಗ ಅದರ ಜೊತೆ ಇಮೈಲ್‌ ಕೂಡ ಇರಬೇಕಲ್ಲ? ಅಂದರೆ ವಿಶ್ವಕನ್ನಡ.ಭಾರತ ಎಂಬ ಜಾಲತಾಣದ ಜೊತೆ ಪವನಜಃವಿಶ್ವಕನ್ನಡ. ಭಾರತ ಇಮೈಲ್‌ ಸಾಧ್ಯವಿದೆ. ಅದು ಇದೆ ಕೂಡ. ಅದೇ ರೀತಿ ಇತರೆ ಇಮೈಲ್‌ಗಳೂ ಸಾಧ್ಯವಿದೆ. ಕರ್ನಾಟಕ ಸರಕಾರದ ಜಾಲತಾಣದ ವಿಳಾಸ ಕನ್ನಡದಲ್ಲೂ ಇದೆ.

ಕವಿತೆ ಎಂಬ ಗೆಳತಿಯ ಹಿಂದೆ!

ಇಂಗ್ಲಿಷ್‌ ಅಲ್ಲದೆ ಇತರೆ ಭಾಷೆಗಳನ್ನೂ ಜಾಲತಾಣ ಮತ್ತು ಇಮೈಲ್‌ ವಿಳಾಸಗಳಿಗೆ ಬಳಸಿದಾಗ ಅವುಗಳನ್ನು ಅರ್ಥ ಮಾಡಿಕೊಂಡು ಸಮರ್ಥವಾಗಿ ಬಳಸಿಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಸಾಧ್ಯವಾದಾಗ ಅದನ್ನು ಸಾರ್ವತ್ರಿಕ ಸ್ವೀಕೃತಿ (Universal acceptance) ಎನ್ನುತ್ತಾರೆ. ಈ ಬಗ್ಗೆ ಐಕಾನ್‌ನಲ್ಲಿ (Internet corporation for assigned names and numbers, ICANN) ಒಂದು ವಿಭಾಗವಿದೆ. ಐಕಾನ್‌ನಲ್ಲಿ ಸಾರ್ವತ್ರಿಕ ಸ್ವೀಕೃತಿಗಾಗಿ ಇರುವ ವಿಭಾಗವು ಈ ಬಗ್ಗೆ ಹಲವು ಕೆಲಸಗಳನ್ನು ಮಾಡುತ್ತಿದೆ. ಎಲ್ಲ ತಂತ್ರಾಂಶಗಳಲ್ಲಿ, ಜಾಲತಾಣಗಳನ್ನು ವೀಕ್ಷಿಸುವ ತಂತ್ರಾಂಶಗಳಲ್ಲಿ (ಬ್ರೌಸರುಗಳಲ್ಲಿ), ಇಮೈಲ್‌ ತಂತ್ರಾಂಶಗಳಲ್ಲಿ, ಪ್ರೋಗ್ರಾಮ್ಮಿಂಗ್‌ ಭಾಷೆಗಳಲ್ಲಿ, ಹೀಗೆ ತಂತ್ರಾಂಶ ಕ್ಷೇತ್ರದ ಹಲವು ಅಂಗಗಳಲ್ಲಿ ಸಾರ್ವತ್ರಿಕ ಸ್ವೀಕೃತಿ ಸರಿಯಾಗಿ ಕೆಲಸ ಮಾಡುತ್ತಿದೆಯೋ ಎಂದು ಪರಿಶೀಲಿಸುವುದು ಇದರ ಕೆಲಸ.

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಸ್ವೀಕೃತಿ ದಿನಾಚರಣೆ ಆಚರಿಸಲಾಗುತ್ತಿದೆ. ಇದನ್ನು ದೆಹಲಿಯಲ್ಲಿ ಮಾರ್ಚ್ 28, 2023ರಂದು ನಡೆಸಲಾಗುವುದು. http://uasg.tech ಜಾಲತಾಣಕ್ಕೆ ಭೇಟಿ ನೀಡಿ ಈ ಬಗ್ಗೆ ಎಲ್ಲಾ ವಿವರಗಳನ್ನು ಓದಬಹುದು. ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರತಿನಿಧಿಯಾಗಿ ಕನ್ನಡದ ಪ್ರಪ್ರಥಮ ಜಾಲತಾಣ ನಿರ್ಮಾತೃ ಡಾ.ಯು.ಬಿ. ಪವನಜ ಅವರು ಭಾಗವಹಿಸುತ್ತಿದ್ದಾರೆ
(ಲೇಖಕರು ಐಕಾನ್‌ನ ಸಾರ್ವತ್ರಿಕ ಸ್ವೀಕೃತಿ ವಿಭಾಗಕ್ಕೆ ಈಗಿನ ಅವಧಿಗೆ ಉಪಾಧ್ಯಕ್ಷರು.)

Follow Us:
Download App:
  • android
  • ios