Asianet Suvarna News Asianet Suvarna News

ಮಹಾಕಾವ್ಯ ರಚನೆ ಮೂಲಕ ಆದಿಕವಿಯಾದ ವಾಲ್ಮೀಕಿ: ಸಚಿವ ಎಂ.ಸಿ.ಸುಧಾಕರ್

ರಾಮಾಯಣ ಎಂಬ ಮಹಾನ್ ಗ್ರಂಥ ರಚನೆ ಮಾಡಿದ ಕಾರಣಕ್ಕೆ ವಾಲ್ಮೀಕಿ ಆದಿಕವಿಯಾದದ್ದು. ವಾಲ್ಮೀಕಿ ಅಪ್ಪಟ ಜ್ಞಾನವಂತ. ಆರ್ಯ ಜನಾಂಗದ ಆದರ್ಶಗಳನ್ನು ತಮ್ಮ ಮಹಾಕಾವ್ಯದ ಮೂಲಕ ಸಾರಿ ಹೇಳಿದವರು ವಾಲ್ಮೀಕಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. 

Valmiki primordial poet through epic creation Says Minister Dr MC Sudhakar gvd
Author
First Published Oct 29, 2023, 9:23 PM IST

ಚಿಕ್ಕಬಳ್ಳಾಪುರ (ಅ.29): ರಾಮಾಯಣ ಎಂಬ ಮಹಾನ್ ಗ್ರಂಥ ರಚನೆ ಮಾಡಿದ ಕಾರಣಕ್ಕೆ ವಾಲ್ಮೀಕಿ ಆದಿಕವಿಯಾದದ್ದು. ವಾಲ್ಮೀಕಿ ಅಪ್ಪಟ ಜ್ಞಾನವಂತ. ಆರ್ಯ ಜನಾಂಗದ ಆದರ್ಶಗಳನ್ನು ತಮ್ಮ ಮಹಾಕಾವ್ಯದ ಮೂಲಕ ಸಾರಿ ಹೇಳಿದವರು ವಾಲ್ಮೀಕಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮಹಾಕಾವ್ಯಗಳ ಅಧ್ಯಯನ ಮಾಡಿ: ರತ್ನಾಕರನಿಂದ ಮಹರ್ಷಿ ವಾಲ್ಮೀಕಿ‌ಯಾಗಿ‌ ಹಿಂದುಗಳ ಪವಿತ್ರ ಗ್ರಂಥ ರಾಮಾಯಣ ರಚಿಸಿದವರು. ಈ ಗ್ರಂಥದಲ್ಲಿ ಅವರ ವ್ಯಕ್ತಿತ್ವ , ಜ್ಞಾನ, ದಾರ್ಶನಿಕರಾಗಿಯೂ, ಸಮಾಜ ಸುಧಾರಕರಾಗಿ ಕಾಣಬಹುದು. ಕುಟುಂಬದಲ್ಲಿ ಹೇಗೆ ಇರಬೇಕು ಎಂಬುದನ್ನು ತನ್ನ ಮಹಾಕಾವ್ಯ. ಮಹಾಕಾವ್ಯಗಳನ್ನು ಓದುವ ಮೂಲಕ ಮಹರ್ಷಿ ವಾಲ್ಮೀಕಿ‌ಯಾಗಲು ಪ್ರಯತ್ನಿಸಬೇಕು‌ ಎಂದರು. ‌ಶಾಸಕರಾದ ಪ್ರದೀಪ್ ಈಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮಾಯಣ ಮಹಾಕಾವ್ಯದಲ್ಲಿ ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿ, ತಾಯಿ-ತಂದೆ,ಗುರು ಮತ್ತು ಅಥಿತಿಗಳನ್ನು ದೇವರಂತೆ ಪೂಜಿಸಿ ಎನ್ನುವಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ ಎಂದರು.

ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್‌.ಡಿ.ರೇವಣ್ಣ

ಉನ್ನತ ಶಿಕ್ಷಣಕ್ಕೆ ನೆರವು: ಈ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಬೇಕು. ಇವರು ಶೈಕ್ಷಣಿಕವಾಗಿ ಬೆಳೆಯಲು ನನ್ನ ವೈಯುಕ್ತಿಕ ಸಹಕಾರದೊಂದಿಗೆ ಉನ್ನತ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಂದರೆ ವೈದ್ಯಕೀಯ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುತ್ತೇನೆ ಎಂದರು. ಈ ವೇಳೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ‌ ಅತಿ‌ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಮತ್ತು ಸಮುದಾಯದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಹೂವಿನ ಪಲ್ಲಕ್ಕಿಗಳ ಮೆರವಣಿಗೆ: ಬೆಂಗಳೂರು ಗ್ರಾಮಾಂರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಬಿ.ವಿ.ಶಿವಕುಮಾರ್ ರವರು ಮಹರ್ಷಿ ವಾಲ್ಮೀಕಿ ಯವರ ಕುರಿತು ವಿಶೇಷ ಉಪನ್ಯಾಸ ವನ್ನು ನೀಡಿದರು. ವೇದಿಕೆ ಕಾರ್ಯಕ್ರಕ್ಕೂ ಮೊದಲು ನಗರದ ವಾಪಸಂದ್ರದ ರಂಗನಾಥಸ್ವಾಮಿ ದೇವಾಲದ ಮುಂಭಾಗದಿಂದ ಬಿ.ಬಿ.ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪದವರೆಗೂ ಮಹರ್ಷಿ ವಾಲ್ಮಿಕಿಯ ಹೂವಿನ ಪಲ್ಲಕ್ಕಿಗಳ ಅದ್ದೂರಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕ ಚಾಲನೆ ನೀಡಿದರು.

ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್‌ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ,ಜಿ.ಪಂ.ಉಪ ಕಾರ್ಯದರ್ಶಿ ಡಾ.ಭಾಸ್ಕರ್‌, ಉಪ ವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ತಹಸೀಲ್ದಾರ್ ಅನಿಲ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕಾಧಿಕಾರಿ ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪಾಂಡುರಂಗ, ವಾಲ್ಮೀಕಿ ನಾಯಕ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Follow Us:
Download App:
  • android
  • ios