Asianet Suvarna News Asianet Suvarna News

Chitradurga: ಚಿಕ್ಕಗೊಂಡನಹಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಮೂಡಿದ ಆತಂಕ!

ಕೋಟೆನಾಡಿನಲ್ಲಿ ಚಿರತೆಯೊಂದು ಕಳೆದೊಂದು ವಾರದಿಂದ ಜನರ ನಿದ್ದೆಗೆಡಿಸಿದೆ. ಮನೆಯಿಂದ ಜಮೀನುಗಳಿಗೆ ರೈತರು ಹೋಗುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಅಷ್ಟಕ್ಕೂ ಚಿರತೆ ಕಾಣಿಸಿಕೊಂಡಿದ್ದು ಎಲ್ಲಿ?

The people of Chikkagondanahalli village were moved by the sight of the leopard gvd
Author
First Published Oct 21, 2023, 3:48 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಅ.21): ಕೋಟೆನಾಡಿನಲ್ಲಿ ಚಿರತೆಯೊಂದು ಕಳೆದೊಂದು ವಾರದಿಂದ ಜನರ ನಿದ್ದೆಗೆಡಿಸಿದೆ. ಮನೆಯಿಂದ ಜಮೀನುಗಳಿಗೆ ರೈತರು ಹೋಗುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಅಷ್ಟಕ್ಕೂ ಚಿರತೆ ಕಾಣಿಸಿಕೊಂಡಿದ್ದು ಎಲ್ಲಿ? ಅಲ್ಲಿನ ಜನರು ಏನೇಳ್ತಾರೆ ಎಂಬುದರ ವರದಿ ಇಲ್ಲಿದೆ‌ ನೋಡಿ. ಚಿರತೆ ಆತಂಕದಲ್ಲಿಯೇ ಮನೆಯಿಂದ ಜಮೀನಿಗೆ ತೆರಳ್ತಿರೋ ಜನರು. ಮತ್ತೊಂದೆಡೆ‌ ಕಿರಿಕ್ ಚಿರತೆ ಸೆರೆ‌‌ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಏನೂ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕ್ತಿರೋ ಗ್ರಾಮಸ್ಥರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಬಳಿ. 

ಕಳೆದೊಂದು ವಾರದಿಂದಲೂ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಜನರು ತುಂಭಾ ಭಯ ಬೀತರಾಗಿದ್ದಾರೆ. ಸದ್ಯ ಎಲ್ಲಾ ರೈತರು ಜಮೀನುಗಳಲ್ಲಿ ಬೆಳೆದು ನಿಂತಿರೋ ಬೆಳೆಗಳು ಕಟಾವಿಗೆ ಬಂದಿರೋ ಸಮಯ ಇದಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರೂ ಜಮೀನುಗಳಿಗೆ ತೆರಳಬೇಕಾಗುತ್ತದೆ. ಆದ್ರೆ ಅಲ್ಲಲ್ಲಿ ಚಿರತೆ ಪ್ರತ್ಯಕ್ಷ ಆಗ್ತಿರೋದ್ರಿಂದ ಏನಾದ್ರು ಅನಾಹುತ ಆದ್ರೆ ಏನ್ ಮಾಡೋದು ಎಂಬ ಆತಂಕದಲ್ಲಿ ಜನರಿ ಬದುಕು ಸಾಗಿಸ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಆದಷ್ಟು ಬೇಗ ಚಿರತೆ ಸೆರೆ ಹಿಡಿದು ನಮ್ಮ ಗ್ರಾಮದ ಜನರ ನೆಮ್ಮದಿ ಕಾಪಾಡಬೇಕಿದೆ ಅಂತಾರೆ ಗ್ರಾಮಸ್ಥರು. 

ಕಲೆಕ್ಷನ್‌ನಲ್ಲೂ ಸಿದ್ದು, ಡಿಕೆಶಿ ನಡುವೆ ತೀವ್ರ ಸ್ಪರ್ಧೆ: ಸದಾನಂದಗೌಡ

ಇನ್ನೂ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷ ಆದಾಗಿನಿಂದ ಚಿಕ್ಕ, ಪುಟ್ಟ ಮಕ್ಕಳನ್ನು ಒಬ್ಬಂಟಿಯಾಗಿ ಮನೆಯಿಂದ ಹೊರ ಕಳುಹಿಸಲಿಕ್ಕೂ ಜನರು ಆತಂಕ ಪಡ್ತಿದ್ದಾರೆ. ಈಗಾಗಲೇ‌ ಹೇಳಿದ‌‌ ಹಾಗೆ ಗ್ರಾಮೀಣ ಭಾಗದಲ್ಲಿ ರೈತರು ಜಾನುವಾರುಗಳ‌ ಸಾಕಾಣಿಕೆ ಹೆಚ್ಚಾಗಿರೋದ್ರಿಂದ ಅವುಗಳಿಗೆ ಮೇವು ಒದಗಿಸಲು ಜಮೀನುಗಳಿಗೆ ಅನಿವಾರ್ಯವಾಗಿ ತೆರಳುವ ಪರಿಸ್ಥಿತಿ ಬರುತ್ತೆ. ಆದ್ರೆ ಚಿಕ್ಕಗೊಂಡನಹಳ್ಳಿ, ಚಿಕ್ಕಪ್ಪನಹಳ್ಳಿ ಸುತ್ತಮುತ್ತ ಗ್ರಾಮದ ರೈತರ ಜಮೀನಿನ ಕಡೆ ಚಿರತೆ ಓಡಾಟ ನಡೆಸ್ತಿರೋದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ. ಅದ್ರಲ್ಲಂತೂ ಜಮೀನುಗಳಿಲ್ಲಿ ನಿರ್ಮಿಸಿರುವ ಕೆಲ ಮನೆಗಳ ಜನರ ಪರಿಸ್ಥಿತಿ ಅಂತು ಹೇಳತೀರದು. 

ಸತ್ತ ಮೇಲೆ ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ

ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದ್ರು ಯಾರೂ ಕ್ರಮ ಕೈಗೊಳ್ತಿಲ್ಲ. ಹೀಗೆ ನಿರ್ಲಕ್ಷ್ಯ ಮುಂದುವರೆದರೆ ನಾವು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನಕ್ಕೆ ತಂದು ಅಧಿಕಾರಿಗಳ‌ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು‌. ಬಂದಿರೋ ಅಲ್ಪ ಸ್ವಲ್ಪ ಮಳೆಯಲ್ಲೇ ಜಮೀನುಗಳಲ್ಲಿ ಹಾಕಿರೋ ಬೆಳೆಯನ್ನು ನೋಡಲಿಕ್ಕೆ ತೆರಳೋ‌ ಜನರಿಗೆ ಈಗಲೇ ಚಿರತೆ ಭಯ ಶುರುವಾಗಿದೆ. ಆದ್ದರಿಂದ ಭಯ ಭೀತರಾಗಿರೋ ಚಿಕ್ಕಗೊಂಡನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಜನರನ್ನ, ಕೂಡಲೇ ಚಿರತೆ ಕಾಟದಿಂ‌ದ‌ ಅರಣ್ಯಾಧಿಕಾರಿಗಳು ಮುಕ್ತಿ‌ ಕೊಡಿಸಲಿ ಎಂಬುದು ನಮ್ಮ ಆಶಯ.

Follow Us:
Download App:
  • android
  • ios