Asianet Suvarna News Asianet Suvarna News

ಮೈಸೂರು ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ, ಬಿಬಿಎ, ಬಿಸಿಎ ಪ್ರವೇಶಾತಿ ಆರಂಭ

ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ವರ್ಷದ ಬಿ.ಕಾಂ, ಬಿಬಿಎ, ಬಿಸಿಎ ಪದವಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭ ಆಗಿದೆ.

Mysore Maharani College of Commerce BCom, BBA, BCA admissions have started snr
Author
First Published Apr 12, 2024, 6:30 PM IST

  ಮೈಸೂರು  : ನಗರದ ಪಡುವಾರಹಳ್ಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ವರ್ಷದ ಬಿ.ಕಾಂ, ಬಿಬಿಎ, ಬಿಸಿಎ ಪದವಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭ ಆಗಿದೆ.

https://uucms.karnataka.gov.in/login ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು, ಪೋಷಕರು ಪ್ರಸ್ತಾಪಿತ ಪದವಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸೋಮಣ್ಣ ತಿಳಿಸಿದ್ದಾರೆ.

ನಾಲ್ಕು ವರ್ಷ ಡಿಗ್ರಿ ಬೇಕಾ- ಭೇಡ್ವಾ

ಬೆಂಗಳೂರು   ಕೇಂದ್ರ ಬಿಜೆಪಿ ಸರ್ಕಾರ ತಂದಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ಕ್ಕೆ ಪರ್ಯಾಯವಾಗಿ ಕರ್ನಾಟಕಕ್ಕೆ ‘ರಾಜ್ಯ ಶಿಕ್ಷಣ ನೀತಿ’ಯನ್ನು ಅನುಷ್ಠಾನಗೊಳಿಸಿ 4 ವರ್ಷಗಳ ಪದವಿಯನ್ನು ಹಿಂಪಡೆಯುವುದಾಗಿ ಹೇಳಿದ್ದ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಈಗ 4 ವರ್ಷಗಳ ಪದವಿಯನ್ನು ಮುಂದುವರೆಸುವ ಬಗ್ಗೆ ‘ಅಭಿಪ್ರಾಯ ಸಂಗ್ರಹ’ ಆರಂಭಿಸಿದೆ. ಇಲಾಖೆಯ ಈ ಕ್ರಮಕ್ಕೆ ವಿದ್ಯಾರ್ಥಿ ಸಂಘಟನೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

2021-22ರಲ್ಲಿ ಪದವಿಯ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದು ಈಗ ಮೂರನೇ ವರ್ಷದಲ್ಲಿ 5ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಮೂಲಕ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಸಂದೇಶಗಳನ್ನು ಕಳುಹಿಸಲಾಗಿದೆ. ಅಭಿಪ್ರಾಯ ನೀಡುವುದು ಕಡ್ಡಾಯ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಶಿಕ್ಷಕರು ಅರ್ಧಗಂಟೆ ಮುಂಚೆ ಶಾಲೆಗೆ ಬರಬೇಕು: ಶಿಕ್ಷಣ ಇಲಾಖೆ ಸೂಚನೆ

ಎನ್‌ಇಪಿ ಪ್ರಕಾರ, ಪದವಿಗೆ ಬಹು ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ಪ್ರತಿ ವರ್ಷವೂ ಪ್ರಮಾಣ ಪತ್ರವನ್ನು ಪಡೆಯುತ್ತಾರೆ. ನಾಲ್ಕು ವರ್ಷ ವ್ಯಾಸಂಗ ಪೂರ್ಣಗೊಳಿಸಿದರೆ ಪದವಿ ಪೂರ್ಣಗೊಳಿಸಿದಂತೆ. ಆದರೆ, ಈ ವ್ಯವಸ್ಥೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸ್ನೇಹಿಯಾಗಿಲ್ಲ ಎಂದು ಕೆಲ ನಾಯಕರು ಮತ್ತು ಕೆಲವು ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

‘ರಾಜ್ಯ ಶಿಕ್ಷಣ ನೀತಿ’ಗಾಗಿ ಯುಜಿಸಿಯ ಮಾಜಿ ಅಧ್ಯಕ್ಷ ಪ್ರೊ, ಸುಖದೇವ್ ಥೋರಟ್ ನೇತೃತ್ವದ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ. ಆಯೋಗವು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಆಯೋಗದಲ್ಲೂ 3 ವರ್ಷಗಳ ಪದವಿಯೇ ಸೂಕ್ತ ಎಂಬ ಅಭಿಪ್ರಾಯ ನೀಡಿದೆ ಎಂದು ತಿಳಿದು ಬಂದಿದೆ.

ಕೇಂದ್ರದ ಅನುದಾನಕ್ಕೆ ತೊಡಕು: ವಿಶ್ವವಿದ್ಯಾಲಯಗಳಿಗೆ ಕೇಂದ್ರ ಶಿಕ್ಷಣ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಎನ್‌ಇಪಿ ಅನುಸರಿಸದಿದ್ದರೆ ಈ ಅನುದಾನ ಬಿಡುಗಡೆಗೆ ತೊಡಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎನ್‌ಇಪಿಯನ್ನು ಅನಿವಾರ್ಯವಾಗಿ ಅನುಷ್ಠಾನಗೊಳಿಸುವ ಸಂದಿಗ್ಧತೆಗೆ ಸಿಲುಕಿದೆ. ಇದೇ ಕಾರಣಕ್ಕೆ 4 ವರ್ಷ ಪದವಿ ಮುಂದುವರಿಕೆ ಬಗ್ಗೆ ಅಭಿಪ್ರಾಯ ಕೋರುತ್ತಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ಕಾಂಗ್ರೆಸ್ ಆಡಳಿತ ಪ್ರಶ್ನಿಸಬೇಕಾ?: ಘೋಷವಾಕ್ಯ ಬದಲಾವಣೆಗೆ ಈಶ್ವರಪ್ಪ ವ್ಯಂಗ್ಯ

ಹಿಂದಿನಂತೆ 3 ವರ್ಷಗಳ ಪದವಿ ಮುಂದುವರೆಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಈಗ ಎನ್‌ಇಪಿ ಪ್ರಕಾರ 4 ವರ್ಷಗಳ ಪದವಿಯನ್ನು ಮುಂದುವರೆಸಲು ಅಭಿಪ್ರಾಯ ಸಂಗ್ರಹಿಸುತ್ತಿರುವ ಕ್ರಮಕ್ಕೆ ನಮ್ಮ ವಿರೋಧವಿದೆ.
-ಸಿ.ಎಂ. ಅಪೂರ್ವ, ಅಧ್ಯಕ್ಷೆ, ಎಐಡಿಎಸ್‌ಒ, ಬೆಂಗಳೂರು ಜಿಲ್ಲೆ

Follow Us:
Download App:
  • android
  • ios