Asianet Suvarna News Asianet Suvarna News

ಅಧಿಕ ಭಾರದ ಕಲ್ಲು ಸಾಗಾಣಿಕೆ ವಿರುದ್ಧ ಕ್ರಮಕ್ಕೆ ಶಾಸಕ ಸುಬ್ಬಾರೆಡ್ಡಿ ಸೂಚನೆ

ನಿಗದಿಗಿಂತ ಅಧಿಕ ಭಾರದ ಗ್ರಾನೈಟ್‌ ಕಲ್ಲುಗಳನ್ನು ಲಾರಿಗಳ ಮೂಲಕ ಸಾಗಣಿಕೆ ಮಾಡುತ್ತಿರುವ ಪರಿಣಾಮ ಇಲ್ಲಿನ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದರೂ ಸಹ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ಅನುಮಾನುಗಳು ಹುಟ್ಟಹಾಕುತ್ತಿವೆ.

MLA SN Subbareddy instructed to take action against heavy stone transportation gvd
Author
First Published Jul 28, 2023, 10:43 PM IST

ಬಾಗೇಪಲ್ಲಿ (ಜು.28): ನಿಗದಿಗಿಂತ ಅಧಿಕ ಭಾರದ ಗ್ರಾನೈಟ್‌ ಕಲ್ಲುಗಳನ್ನು ಲಾರಿಗಳ ಮೂಲಕ ಸಾಗಣಿಕೆ ಮಾಡುತ್ತಿರುವ ಪರಿಣಾಮ ಇಲ್ಲಿನ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದರೂ ಸಹ ಸಂಬಂಧಪಟ್ಟಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ರೀತಿಯ ಅನುಮಾನುಗಳು ಹುಟ್ಟಹಾಕುತ್ತಿವೆ. ಇದನ್ನು ತಡೆಗಟ್ಟದಿದ್ದರೆ ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆಯಬೇಕಾಗುತ್ತೆ ಎಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಎಚ್ಚರಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಲವು ಕಡೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಅತೀ ಹೆಚ್ಚು ಭಾರದ ಗ್ರಾನೈಟ್‌ ಬಂಡೆಗಳನ್ನು ಲಾರಿಗಳ ಮೂಲಕ ಸಾಗಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ ಇದರಿಂದ ಈ ರಸ್ತೆಗಳಲ್ಲಿ ಸಂಚರಿಸುವ ಇತರೆ ವಾಹನಗಳ ಸವಾರರು ಸೇರಿದಂತೆ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ ಎಂದರು.

ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್‌

ಸೂಚನೆ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ: ಈ ಸಂಬಂಧ ಅನೇಕ ಸಭೆಗಳಲ್ಲಿ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಿದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಏಕೆ, ನಿಮಗೂ ಕಲ್ಲು ಗಣಿಗಾರಿಕೆ ಮಾಲೀಕರ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಶಾಸಕ ಪ್ರಶ್ನೆಗೆ ಸಭೆಯಲ್ಲಿದ್ದ ತಹಸೀಲ್ದಾರ್‌ ಸೇರಿದಂತೆ ಸಂಬಂಧಪಟ್ಟಇಲಾಖೆಗಳ ಬಹುತೇಕ ಅಧಿಕಾರಿಗಳು ಮೌನಕ್ಕೆ ಶರಣಾದರು.

ಕಲ್ಲು ಗಣಿಗಾರಿಕೆ ಹಾಗೂ ಅಧಿಕ ಭಾರದ ಗ್ರಾನೈಟ್‌ ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸುವ ವಿಚಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಲೋಕೋಪಯೋಗಿ, ಪೊಲೀಸ್‌ ಇಲಾಖೆ ಮತ್ತು ಆರ್‌ಟಿಓ ಇಲಾಖೆಗಳು ಸಂಬಂಧಪಟ್ಟಿದ್ದರೂ ಯಾವುದೇ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಹಾಳಗಿರುವ ರಸ್ತೆಗಳ ಗುಂಡುಗಳನ್ನು ಮುಚ್ಚುವ ಕೆಲಸವನ್ನಾದರೂ ಮಾಡಿ ಎಂದು ಸಂಬಂಧಪಟ್ಟಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲೂಕಿನ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ತೋಟಗಾರಿಕೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯ ನೆಪದಲ್ಲಿ ಸರ್ಕಾರದ ಸೌಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತಿಲ್ಲ ಹಾಗೂ ಈ ಹಿಂದಿನ ವರ್ಷದ ಗುರಿಯನ್ನು ನೀವು ಸಾಧಿಸಿಲ್ಲ ಏಕೆ ಎಂಬ ಶಾಸಕರ ಪ್ರಶ್ನೆಗೆ ತೋಟಗಾರಿಕೆ ಇಲಾಖೆ ಅಧಿಕಾರಿ ಮೌನವಹಿಸಿದರು.

ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಉಚಿತ ತರಬೇತಿ: ಶಾಸಕ ಪ್ರದೀಪ್‌ ಈಶ್ವರ್‌

ಶುದ್ಧ ಕುಡಿಯುವ ನೀರು ಸರಬರಾಜು ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ, ದುರಸ್ತಿ ಇರುವ ಆರ್‌ಓ ಪ್ಲಾಟ್‌ಗಳನ್ನು ತಕ್ಷಣ ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂನ ಡಿ.ಎಸ್‌ ಭಾಸ್ಕರ್‌, ತಹಸೀಲ್ದಾರ್‌ ರಾಮಲಕ್ಷ್ಮಯ್ಯ, ತಾಪಂ ಇಒ ಆನಂದ್‌, ಚೇಳೂರು ಇನ್ಸ್‌ಪೆಕ್ಟರ್‌ ರವಿ ಮತ್ತಿತರರು ಇದ್ದರು.

Follow Us:
Download App:
  • android
  • ios