Asianet Suvarna News Asianet Suvarna News

ಮಂತ್ರಾಲಯ ಸರ್ವ ಜನಾಂಗದ ಶಾಂತಿಯ ತೋಟ: ಆಂಧ್ರ ರಾಜ್ಯಪಾಲ ಅಬ್ದುಲ್‌ ನಜೀರ್

ಮಂತ್ರಾಲಯವು ಇಂದು ವಿಶ್ವದ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಇಲ್ಲಿ ಶತಶತಮಾನಗಳಿಂದ ನೆಲೆಸಿರುವ ರಾಯರು ವಿಶೇಷ ಶಕ್ತಿ ಹೊಂದಿದ ದೈವಪುರುಷರಾಗಿದ್ದಾರೆ. ಇಂದು ಶ್ರೀಮಠ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಸಮಾಜಸೇವಾ ಕಾರ್ಯವೂ ದೇವರ ಕೆಲಸಕ್ಕೆ ಸಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮಂತ್ರಾಲಯವನ್ನು ಬಣ್ಣಿಸಿದ್ದಾರೆ. ಇಂಥ ಕ್ಷೇತ್ರವನ್ನು ಇನ್ನಷ್ಟು ಸುಂದರಗೊಳಿಸಿರುವ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಕಾರ್ಯ ಮೆಚ್ಚುಗೆಪ್ರಾಯ: ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್‌ ನಜೀರ್‌

Andhra Pradesh Governor Abdul Nazeer Talks Over Mantralayam grg
Author
First Published Sep 1, 2023, 1:44 PM IST

ರಾಯಚೂರು(ಸೆ.01): ಕಲಿಯುಗದ ಕಲ್ಪತರು, ಕಲಿಯುಗದ ಕಾಮದೇನು ಶ್ರೀರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಮಂತ್ರಾಲಯ ಕ್ಷೇತ್ರವನ್ನು ನೋಡುತ್ತಿದ್ದರೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಬಿಂಬಿಸುತ್ತಿದೆ ಎಂದು ಸುಪೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್‌ ನಜೀರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಗುರುರಾಯರ 352 ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ನಿಮಿತ್ತ ಶ್ರೀಮಠದ ಮುಂಭಾಗದಲ್ಲಿರುವ ಯೋಗೀಂದ್ರ ತೀರ್ಥರ ಸಭಾಮಂಟಪದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀಮಠದಿಂದ ಸನ್ಮಾನಿತರಾಗಿ ಮಾತನಾಡಿದರು.

ರಾಘವೇಂದ್ರ ಸ್ವಾಮಿ 352ನೇ ಆರಾಧನೆ ಮಹೋತ್ಸವ: ಮಂತ್ರಾಲಯದಲ್ಲಿ ರಾಯರ ಭಕ್ತರ ಸಂಭ್ರಮವೋ ಸಂಭ್ರಮ

ಮಂತ್ರಾಲಯವು ಇಂದು ವಿಶ್ವದ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಇಲ್ಲಿ ಶತಶತಮಾನಗಳಿಂದ ನೆಲೆಸಿರುವ ರಾಯರು ವಿಶೇಷ ಶಕ್ತಿ ಹೊಂದಿದ ದೈವಪುರುಷರಾಗಿದ್ದಾರೆ. ಇಂದು ಶ್ರೀಮಠ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಸಮಾಜಸೇವಾ ಕಾರ್ಯವೂ ದೇವರ ಕೆಲಸಕ್ಕೆ ಸಮವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮಂತ್ರಾಲಯವನ್ನು ಬಣ್ಣಿಸಿದ್ದಾರೆ. ಇಂಥ ಕ್ಷೇತ್ರವನ್ನು ಇನ್ನಷ್ಟು ಸುಂದರಗೊಳಿಸಿರುವ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಕಾರ್ಯ ಮೆಚ್ಚುಗೆಪ್ರಾಯ ಎಂದರು.

ಅಪಾರ ಆಧಾತ್ಮಿಕ ಶಕ್ತಿಯನ್ನು ಹೊಂದಿರುವ ಶ್ರೀರಾಯರು ಬೃಂದಾವನಸ್ಥರಾದ ಜಾಗವು ಅತ್ಯಂತ ಪವಿತ್ರತೆಯಿಂದ ಕೂಡಿದೆ. ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆಧ್ಯಾತ್ಮಿಕ,ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಶ್ರೀಮಠದಿಂದ ಭಕ್ತರಿಗೆ ಉಚಿತವಾಗಿ ವಸತಿ, ಅನ್ನದಾನ, ಆರೋಗ್ಯವನ್ನು ಒದಗಿಸುತ್ತಿದ್ದಾರೆ, ಸಂಸ್ಕೃತ ವಿದ್ಯಾಪೀಠ, ಆಂಗ್ಲ ಶಾಲೆಯಡಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ನೂರಾರು ಎಕರೆಯಲ್ಲಿ ಗೋ ಸಂರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಶ್ರೀಮಠದಿಂದ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಆಸ್ಪತ್ರೆ, ವಿಶ್ವವಿದ್ಯಾಲಯ ಆರಂಭಿಸುವುದು ಹಾಗೂ ಮಂತ್ರಾಲಯದಲ್ಲಿ ಮಿನಿ ಏರ್‌ಪೋರ್ಟ್ ನಿಮರ್ಮಾಣದ ಇಚ್ಛಾಶಕ್ತಿಯನ್ನು ಶ್ರೀಗಳು ಹೊಂದಿದ್ದಾರೆ ಎಂದರು.
ಸಮಾರಂಭದ ಸಾನಿಧ್ಯವಹಿಸಿ ಅನುಗ್ರಹ ಸಂದೇಶ ನೀಡಿದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು

ಸಾಧಕರು ಇನ್ನೂ ಹೆಚ್ಚು ಸೇವೆ ಮಾಡಲಿ ಎನ್ನುವ ಉತ್ತಮ ಚಿಂತನೆಯೊಂದಿಗೆ ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಲಾಗುತ್ತಿದೆ. ರಾಯರು ಜಾತ್ಯತೀತ, ಭಾಷಾತೀತ, ಪ್ರಾಂತ್ಯಾತೀತರಾಗಿ ಭಕ್ತರನ್ನು ಆಶೀರ್ವದಿಸುತ್ತಿದ್ದಾರೆ. ಮನುಕುಲದ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಎಲ್ಲ ಮಾನಸ ಮಂದಿರದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ.

ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಗುರುಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಮುಖರು. ವಿರಳಾತಿವಿರಳಾದ ಗುರುಗಳಲ್ಲಿ ಗುರುತ್ವವಿದೆ. ವಿಶ್ವದ ಒಳಿತಿಗಾಗಿ ಬೃಂದಾವನದಲ್ಲಿ ತಪಸ್ಸು ಮಾಡುತ್ತಾ ಕುಳಿತಿರುವ ಶ್ರೀಗುರುರಾಯರು ಕಷ್ಟದಲ್ಲಿರುವ ತಮ್ಮ ಭಕ್ತರನ್ನು ಕರುಣಿಸುವ ವಿಶೇಷ ಗುರುತ್ವಾಕರ್ಷಣೆ ಶಕ್ತಿಯನ್ನು ಹೊಂದಿದ್ದಾರೆ ಎಂದು ಬಣ್ಣಿಸಿದರು. ದೇಶದಲ್ಲಿ ಶಾಂತಿ ನೆಲೆಸಲಿ, ಮಳೆ ಬೆಳೆ ಚನ್ನಾಗಿ ಬಂದು ರೈತರು ಸುಖ ಶಾಂತಿಯಿಂದ ಬಾಳುವಂತಾಗಲಿ ಎಂದು ರಾಯರು ಹಾರೈಸಲಿ ಎಂದು ನುಡಿದರು.

ಇದೇ ವೇಳೆ ಪರಿಮಳ ಗ್ರಂಥ 7 ನೇ ಆವೃತ್ತಿ, ಕಲಿಯುಗ ಕಲ್ಪತರು 51 ಆವೃತ್ತಿ, ರಾಮಚರಿತ ಮಂಜರಿ, ಸೋತ್ತ್ರ ಸಂಪುಟ, ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ, ಪರಿಮಾಳಾಚಾರ್ಯ ಪಟ್ಟಾಭಿಷೇಕ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಕೇಸರಿ ಮಹಾ ಮಹಾಪೋದ್ಯಾಯ ರಾಜಾ ಎಸ್ ಗೀರಿ ಆಚಾರ್ಯ,ನ್ಯಾಯಮೂರ್ತಿ ಶ್ರೀ ಷಾ ನಂದ,ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ವಿದ್ವಾನ ವಾದಿರಾಜ ಆಚಾರ್ಯ, ರಾಜಾ ಗೌತಮ ಆಚಾರ್ಯ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

22 ದಿನಗಳಲ್ಲೇ ಭರ್ತಿಯಾದ ಮಂತ್ರಾಲಯ ರಾಯರ ಮಠದ ಹುಂಡಿಗಳು: ಪ್ರತಿನಿತ್ಯ 10 ಲಕ್ಷ ರೂ. ಕಾಣಿಕೆ

ನಾಲ್ವರಿಗೆ ಅನುಗ್ರಹ ಪ್ರಶಸ್ತಿ

ಸಮಾರಂಭದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಲ್ವರಿಗೆ ಶ್ರೀಮಠದಿಂದ ಪ್ರಸಕ್ತ ಸಾಲಿನ ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹ ಪ್ರಶಸ್ತಿಯನ್ನು ನೀಡಲಾಯಿತು. ವಿದ್ವಾನ್ ರಾಮ ವಿಠ್ಠಲಚಾರ್ಯ, ವಿದ್ವಾನ್ ಗರಿಕಿಪಾಟಿ ನರಸಿಂಹರಾವ್, ಎನ್. ಚಂದ್ರಶೇಖರನ್ ಹಾಗೂ ಎಂಐಟಿ ಸಂಸ್ಥಾಪಕ ಡಾ.ವಿಶ್ವನಾಥ್ ಡಿ. ಕಾರತ್ ಅವರಿಗೆ ಶ್ರೀಗಳು ಪ್ರಸಕ್ತ ಸಾಲಿನ ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹ ಪ್ರಶಸ್ತಿಯನ್ನು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.

ರಾಯರ ದರ್ಶನ ಪಡೆದ ನ್ಯಾ.ಅಬ್ದುಲ್ ನಜೀರ್

ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ನಿಮಿತ್ತ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್‌ ನಜೀರ್‌ ಅವರು ಶ್ರೀಮಠಕ್ಕೆ ಭೇಟಿ ನೀಡಿ ಗ್ರಾಮದೇವತೆ ಮಂಚಾಲಮ್ಮ ದೇವಿಗೆ ಪೂಜೆಯನ್ನು ಮಾಡಿದರು ನಂತರ ಶ್ರೀರಾಯರ ಮೂಲಬೃಂದಾವನದ ದರ್ಶನ ಪಡೆದು ತಾವೇ ಮಂಗಳಾರತಿಯನ್ನು ಮಾಡಿ ನಮಿಸಿದರು.

Follow Us:
Download App:
  • android
  • ios