ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯಿರಿ, ರಿಸೈನ್ ಬಳಿಕ ದುಡ್ಡು ತೆಗೆಯದಿದ್ರೆ ಏನಾಗುತ್ತೆ?

Synopsis
ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯಿರಿ, ರಿಸೈನ್ ಬಳಿಕ ದುಡ್ಡು ತೆಗೆಯದಿದ್ರೆ ಏನಾಗುತ್ತೆ? ಸಂಪೂರ್ಣ ಡಿಟೇಲ್ಸ್ ಇಲ್ಲಿದೆ...
ಸಂಬಳ ಪಡೆಯುವ ಉದ್ಯೋಗಿಗಳಿಗೆ ಪ್ರತಿ ತಿಂಗಳು ಪ್ರಾವಿಡೆಂಟ್ ಫಂಡ್ (PF) ಕಟ್ ಆಗುತ್ತದೆ. ಕಡಿತಗೊಳ್ಳುವ ದುಡ್ಡಿಗೆ ತಕ್ಕಂತೆ ಅದಕ್ಕೆ ಆಯಾ ಕಂಪೆನಿಗಳು ತಮ್ಮ ಪಾಲನ್ನು ನೀಡುತ್ತವೆ. ಆದರೆ ಪಿಎಫ್ನಲ್ಲಿ ಎಷ್ಟು ಹಣ ಜಮಾ ಆಗ್ತಿದೆ, ಎಷ್ಟು ಸಿಗುತ್ತದೆ? ಒಂದು ಕಂಪೆನಿಯಿಂದ ರಿಸೈನ್ ಮಾಡಿದ ಬಳಿಕ ಹಣ ಏನಾಗುತ್ತದೆ? ಯಾವುದೇ ಕಂಪೆನಿಗೆ ಹೋಗದಿದ್ದರೆ ಹಣ ವಾಪಸ್ ಸಿಗುತ್ತಾ? ಬಡ್ಡಿ ಬಂದರೆ ಎಷ್ಟು ವರ್ಷ ಬರತ್ತೆ? ಇತ್ಯಾದಿ ಪ್ರಶ್ನೆಗಳು ಇರುವುದು ಸಹಜ. ಅಂಥವರಿಗೆ ಗುಡ್ನ್ಯೂಸ್ ಇಲ್ಲದೆ. ಕೇವಲ ಒಂದು ಮಿಸ್ ಕಾಲ್ ಕೊಡುವ ಮೂಲಕ ನೀವು ನಿಮ್ಮ ಪಿಎಫ್ನಲ್ಲಿ ಎಷ್ಟು ಹಣ ಜಮಾ ಆಗಿದೆ ಎನ್ನುವುದನ್ನು ನೋಡಬಹುದು ಎನ್ನುವುದು ಗೊತ್ತೆ? ಅಂದಹಾಗೆ ಸದ್ಯ ಪಿಎಫ್ನಲ್ಲಿ ಶೇಕಡಾ 8.25ರ ಬಡ್ಡಿದರದಲ್ಲಿ ಹಣ ಸಂದಾಯ ಆಗುತ್ತದೆ.
ನೀವು ಯಾವ ಮೊಬೈಲ್ ಸಂಖ್ಯೆಯನ್ನು ನಿಮ್ಮ UANನಲ್ಲಿ ನೋಂದಾಯಿಸಿರುತ್ತೀರೋ, ಆ ಸಂಖ್ಯೆಯಿಂದ 99660 44425ಗೆ ಮಿಸ್ಡ್ ಕಾಲ್ ಕೊಡಿ. ಒಂದೆರಡು ರಿಂಗ್ ಆಗುವುದರೊಳಗೇ ಅದು ಕಟ್ ಆಗುತ್ತದೆ. ಮೂರ್ನಾಲ್ಕು ಸೆಕೆಂಡ್ಗಳಲ್ಲಿ ನಿಮಗೆ ಮೆಸೇಜ್ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು, ಪ್ಯಾನ್, ಆಧಾರ್ ಎಲ್ಲವೂ ಇರುತ್ತದೆ. ನೀವೇ ಎಂದು ಸಾಬೀತು ಪಡಿಸಲು ಇಷ್ಟು ಮಾಹಿತಿ. ಅದರಲ್ಲಿ ಸದ್ಯ ನಿಮ್ಮ ಪಿಎಫ್ ಅಕೌಂಟ್ನಲ್ಲಿ ಎಷ್ಟು ದುಡ್ಡು ಇದೆ ಎನ್ನುವುದನ್ನು ನೋಡಬಹುದು. ಇದು ಒಂದಾದರೆ, ನೀವು 77382 99899ಗೆ SMS ಕಳುಹಿಸುವ ಮೂಲಕ ಬ್ಯಾಲೆನ್ಸ್ ಮತ್ತು ಖಾತೆಯಲ್ಲಿ ಅಪ್‌ಡೇಟ್ ಆದ ಮೊತ್ತವನ್ನು ಸಹ ನೀವು ತಿಳಿದುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟು: ನೀವು ನೋಂದಾಯಿತ ಸಂಖ್ಯೆಯಿಂದ AN EPFOHO ENG ಎಂದು ಟೈಪ್ ಮಾಡಿ ಸಂದೇಶವನ್ನು ಕಳುಹಿಸಬೇಕು. ಇಲ್ಲಿ ENG ಎಂದರೆ ಇಂಗ್ಲಿಷ್ ನೀವು ಬೇರೆ ಭಾಷೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ, ಆ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಬರೆದು SMS ಮಾಡಬೇಕು. ಕನ್ನಡ ಬೇಕಿದ್ದರೆ KAN ಎಂದು ಟೈಪ್ ಮಾಡಬೇಕು.
ನೀಲಿ ಆಧಾರ್ ಕಾರ್ಡ್ ಇದ್ಯಾ? ಇದರ ಪ್ರಯೋಜನ- ಆನ್ಲೈನ್ನಲ್ಲೇ ಮಾಡಿಸೋ ಬಗೆ ತಿಳಿಯಿರಿ...
ಇನ್ನೊಂದು ಉಮಂಗ್ ಆ್ಯಪ್. ಪ್ಲೇ ಸ್ಟೋರ್ನಿಂದ ಸರ್ಕಾರದ ಈ ಆ್ಯಪ್ ಡೌನ್ಲೋಡ್ ಮಾಡಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದರಿಂದ ನೀವು ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಬಹುದಾಗಿದೆ. ಪಿಎಳ್ ಕ್ಲೈಮ್‌ಗಳನ್ನು ಕೂಡ ಸಲ್ಲಿಸಬಹುದು. ಮಾತ್ರವಲ್ಲದೇ ಪಾಸ್‌ಬುಕ್ ವೀಕ್ಷಿಸಬಹುದು ಮತ್ತು ನಿಮ್ಮ ಕ್ಲೈಮ್‌ಗಳನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು. ಇವೆಲ್ಲ ಕಷ್ಟವಾದರೆ, ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ʼEmployees sectionʼಅನ್ನು ಕ್ಲಿಕ್ ಮಾಡಿ. ಸದಸ್ಯರ ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ನೀವು PF ಪಾಸ್‌ಬುಕ್‌ಗೆ ಎಂಟ್ರಿಯಾಗಬಹುದು. ಇದರಲ್ಲಿ opening ಮತ್ತು closing ಬ್ಯಾಲೆನ್ಸ್ ಹಾಗೂ ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆ ನೋಡಬಹುದು. ಪಿಎಫ್ ವರ್ಗಾವಣೆಯ ಒಟ್ಟು ಮೊತ್ತ ಮತ್ತು ಸಂಗ್ರಹವಾದ ಪಿಎಫ್ ಬಡ್ಡಿಯ ಮೊತ್ತವೂ ಕಾಣಿಸುತ್ತದೆ.
ಇನ್ನು ನೀವು ರಿಸೈನ್ ಮಾಡಿದ ಮೇಲೆ ಪ್ರತಿ ತಿಂಗಳು ಪಿಎಫ್ ಅಮೌಂಟ್ ಹೋಗದೇ ಇದ್ದರೆ ಚಿಂತೆ ಬಿಡಿ. ಏನೂ ಆಗುವುದಿಲ್ಲ. ಪ್ರತಿ ತಿಂಗಳು ಶೇಕಡಾ 8.25 ರ ಬಡ್ಡಿದರದಲ್ಲಿ ಹಣ ಸಂಗ್ರಹ ಆಗುತ್ತದೆ. ಖಾತೆಯು ಸಕ್ರಿಯವಾಗಿರುತ್ತದೆ ಮತ್ತು ಬಡ್ಡಿಯನ್ನು ಗಳಿಸುತ್ತಲೇ ಇರುತ್ತದೆ. ಬೇರೆ ಕೆಲಸಕ್ಕೆ ಸೇರಿದರೆ, ಹೊಸ ಉದ್ಯೋಗದಾತರ ಖಾತೆಗೆ ವರ್ಗಾಯಿಸಬಹುದು ಅಥವಾ ನಂತರ ನಿಮಗೆ ಸೂಕ್ತವಾದಾಗ ಅದನ್ನು ಹಿಂಪಡೆಯಬಹುದು. 36 ತಿಂಗಳುಗಳ ಕಾಲ ಯಾವುದೇ ಕೊಡುಗೆಗಳು ಅಥವಾ ಹಿಂಪಡೆಯುವಿಕೆಗಳಿಲ್ಲದ ನಂತರ ಖಾತೆಯು ನಿಷ್ಕ್ರಿಯವಾಗುತ್ತದೆ. ಆಗಲೂ ನೀವು ಚಿಂತಿಸಬೇಕಿಲ್ಲ. ನೀವು 58 ವರ್ಷ ತುಂಬುವವರೆಗೆ ಬಡ್ಡಿ ಬರುತ್ತಲೇ ಇರುತ್ತದೆ.
ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್: FD ಇಡುವವರಿಗೆ ಬ್ಯಾಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್...