Asianet Suvarna News Asianet Suvarna News

ಭಾರತದಲ್ಲಿ ಸೆಮಿಕಂಡಕ್ಟರ್ ಸ್ಥಾಪನೆ: ಇದು ಪ್ರಧಾನಿ ದೂರದೃಷ್ಟಿ ಫಲ : ರಾಜೀವ್ ಚಂದ್ರಶೇಖರ್

ಭಾರತದಲ್ಲಿ ಸೆಮಿಕಂಡಕ್ಟರ್‌ ಘಟಕ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ನಲ್ಲಿ ಆಹ್ವಾನ ನೀಡಿದ ಬೆನ್ನಲ್ಲೇ, ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ (ಚಿ​ಪ್‌​) ಜೋಡಣಾ ಮತ್ತು ಪರೀಕ್ಷಾ ಘಟಕ ಅರಂಭಿಸುವುದಾಗಿ ಅಮೆರಿಕ ಮೂಲದ ಮೈಕ್ರಾನ್‌ ಟೆಕ್ನಾಲಜಿ ಘೋಷಿಸಿದೆ.

Semiconductor establishment in India This is a big milestone in indias semiconductor sector Rajeev Chandrasekhar akb
Author
First Published Jun 23, 2023, 9:10 AM IST

ನವದೆಹಲಿ: ಭಾರತದಲ್ಲಿ ಸೆಮಿಕಂಡಕ್ಟರ್‌ ಘಟಕ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ನಲ್ಲಿ ಆಹ್ವಾನ ನೀಡಿದ ಬೆನ್ನಲ್ಲೇ, ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ (ಚಿ​ಪ್‌​) ಜೋಡಣಾ ಮತ್ತು ಪರೀಕ್ಷಾ ಘಟಕ ಅರಂಭಿಸುವುದಾಗಿ ಅಮೆರಿಕ ಮೂಲದ ಮೈಕ್ರಾನ್‌ ಟೆಕ್ನಾಲಜಿ ಘೋಷಿಸಿದೆ. ಭಾರತದಲ್ಲಿ ನಾವು ಎರಡು ಹಂತದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದೇವೆ. ಮೊದಲ ಹಂತದ ಯೋಜನೆ 2023ರಲ್ಲಿ ಆರಂಭವಾಗಿ, 2024ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದಕ್ಕಾಗಿ 5 ಲಕ್ಷ ಚದರಡಿ ಜಾಗ ಬಳಕೆಯಾಗಲಿದೆ. ಈ ಘಟಕಗಳೂ 5000 ನೇರ ಉದ್ಯೋಗ ಮತ್ತು 15000 ಸಮುದಾಯ ಉದ್ಯೋಗವನ್ನು ಸೃಷ್ಟಿಸಲಿದೆ. ನಮ್ಮ ಹೊಸ ಘಟಕವು ಮೊಬೈಲ್‌, ಟೀವಿ, ಕಂಪ್ಯೂ​ಟರ್‌, ವಾಹ​ನ​ಗ​ಳಿಗೆ ತೀರಾ ಅಗ​ತ್ಯ​ವಾದ ಸೆಮಿಕಂಡಕ್ಟರ್‌ ಚಿಪ್‌ ಜೋಡಣೆ ಮತ್ತು ಪರೀಕ್ಷೆಯನ್ನು ಒಳಗೊಂಡಿರಲಿದೆ. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ನೆರವಾಗಲಿದೆ ಎಂದು ಕಂಪನಿ ಪ್ರಕಟಣೆ ನೀಡಿದೆ. 

ಮೈಕ್ರಾನ್‌ ಕಂಪನಿಯು ಸರ್ಕಾರದ ಎಟಿಎಂಪಿ (ಮಾಡಿಫೈಡ್‌ ಅಸೆಂಬ್ಲಿ, ಟೆಸ್ಟಿಂಗ್‌, ಮಾರ್ಕಿಂಗ್‌ ಮತ್ತು ಪ್ಯಾಕೇಜಿಂಗ್‌) ಯೋಜನೆಯಡಿ ಜಾರಿಯಾಗಲಿದೆ. ಇದರನ್ವಯ ಒಟ್ಟು ಯೋಜನಾ ವೆಚ್ಚದಲ್ಲಿ ಶೇ.50ರಷ್ಟನ್ನು ಕೇಂದ್ರ ಸರ್ಕಾರ ನೀಡಲಿದೆ ಮತ್ತು ಒಟ್ಟು ಯೋಜನೆಯಲ್ಲಿ ಶೇ.20ರಷ್ಟುಹಣವನ್ನು ಗುಜರಾತ್‌ ಸರ್ಕಾರ ಪ್ರೋತ್ಸಾಹಧನ ರೂಪದಲ್ಲಿ ನೀಡಲಿದೆ. ಈ ಒಪ್ಪಂದಕ್ಕೆ ಕೇಂದ್ರ ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯ ಅಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ರಾಜೀವ್ ಚಂದ್ರಶೇಖರ್ ಶ್ಲಾಘನೆ ವ್ಯಕ್ತಪಡಿಸಿದ್ದು, ಇದೊಂದು ದೊಡ್ಡ ಮೈಲಿಗಲ್ಲು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿ ಆಡಳಿತದಲ್ಲಿ ಭಾರತವು ಕಳೆದ 9 ವರ್ಷಗಳಲ್ಲಿ ಬಹಳ ದೂರ ಸಾಗಿ ಬಂದಿದೆ. ಭಾರತವವನ್ನು ಆರ್ಥಿಕ ಮತ್ತು ತಂತ್ರಜ್ಞಾನದ ಶಕ್ತಿಯಾಗಿ ಜಗತ್ತು ಗುರುತಿಸಿದೆ. ಈ ಅಲ್ಪಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿ ಅವರ ದೂರದೃಷ್ಟಿ ಮತ್ತು ನಾಯಕತ್ವ ನೀಡಿದ ವೇಗ ಬೆಂಬಲ ಈ ಪ್ರಗತಿ ಕಾರಣ ಎಂದು ಅವರು ಹೇಳಿದ್ದಾರೆ. 

ನೂತನ ಸೆಮಿಕಂಡಕ್ಟರ್‌ ಲ್ಯಾಬ್‌ ಉದ್ಘಾಟಿಸಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆಮಿಕಂಡಕ್ಟರ್ ನಿರ್ಮಾಣ ದೂರದೃಷ್ಟಿಯ ಘೋಷಣೆ ಮಾಡಿದ ಬಳಿಕ ಕಳೆದ 18 ತಿಂಗಳಲ್ಲಿ ಭಾರತದ ಸೆಮಿಕಾನ್ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆ ಮಾಡಲು ಮತ್ತು ನಿರ್ಮಿಸಲು ರೂ 76,000 ಕೋಟಿ ಹೂಡಿಕೆ ಮಾಡಿ ಹೆಚ್ಚಿನ ಪ್ರಗತಿ ಮಾಡಲಾಗಿದೆ. ಸೆಮಿಕಾನ್ ಇಂಡಿಯಾ ಪ್ಯೂಚರ್ ಡಿಸೈನ್ ಯೋಜನೆಯಡಿ ಹಲವು ಹೊಸ ಸ್ಟಾರ್ಟ್‌ಅಪ್‌ಗಳ ಜೊತೆ ರೋಮಾಂಚಕ ಸೆಮಿಕಾನ್ ವಿನ್ಯಾಸ ನಾವೀನ್ಯ ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿದೆ. 

ಮುಂದಿನ ತಲೆಮಾರಿನ ಡಿಜಿಟಲ್ ಇಂಡಿಯಾ ಚಿಪ್‌ಗಳು ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಇದು ಕಾರ್ಯತಂತ್ರದ ಭಾರತೀಯ ಕಾರ್ಯಕ್ರಮವಾಗಿದೆ. 
ಸೆಮಿಕಾನ್ ಇಂಡಿಯಾ ಹಾಗೂ ಫ್ಯೂಚರ್‌ ಸ್ಕಿಲ್ ಅನ್ನು  85,000 VLSI ಇಂಜಿನಿಯರ್‌ಗಳನ್ನು ಜಾಗತಿಕ ಪ್ರತಿಭೆಗಳಾಗಿ ನಿರ್ಮಿಸುವುದಕ್ಕಾಗಿ ಸ್ಥಾಪಿಸಲಾಗಿದೆ. ಜಾಗತಿಕ ಕೈಗಾರಿಕೆ ದೈತ್ಯರ ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಲಾದ ಸೆಮಿಕಂಡಕ್ಟರ್ ಪಠ್ಯಕ್ರಮದ ತರಬೇತಿ ಇವರಿಗೆ ನೀಡಲಾಗಿದೆ. ಇದರ ಜೊತೆಗೆ ಮೈಕ್ರಾನ್ ಸಂಸ್ಥೆಗೆ ಪ್ಯಾಕೇಜಿಂಗ್ ಸೌಲಭ್ಯವನ್ನು ಅನುಮೋದಿಸಲಾಗಿದೆ. ಇದಕ್ಕಾಗಿ ಸೆಮಿಕಾನ್ ಇಂಡಿಯಾ ಕಾಂಪ್ಲೆಕ್ಸ್ ಆಧುನೀಕರಣ ಮತ್ತು ಸಂಶೋಧನಾ ಫ್ಯಾಬ್ ಮತ್ತು ಇಂಡಿಯಾ ಸೆಮಿಕಾನ್ ಸಂಶೋಧನಾ ಕೇಂದ್ರವನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಟ್ವಿಟ್ ಮಾಡಿದ್ದಾರೆ. 

1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್‌ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು

 

Follow Us:
Download App:
  • android
  • ios