userpic
user icon
0 Min read

'ಉಗ್ರರನ್ನು ಕ್ಷಮಿಸುವುದು ದೇವರಿಗೆ ಬಿಟ್ಟದ್ದು, ಆದರೆ ಅವರನ್ನು ಆತನ ಬಳಿಗೆ ಕಳುಹಿಸುವುದು ನನಗೆ ಸೇರಿದ್ದು!'

Russian President Vladimir Putins quote gone viral again suc
Terror Putin

Synopsis

ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಹಲ್ಗಾಮ್​ನಲ್ಲಿ ನಡೆಸಿರುವ ನರಮೇಧದ ನಡುವೆಯೇ ರಷ್ಯಾ ಅಧ್ಯಕ್ಷರ ಡೈಲಾಗ್​ ಒಂದು ವೈರಲ್​ ಆಗ್ತಿದೆ. ಏನದು? 

ಕಾಶ್ಮೀರದಲ್ಲಿ ಉಗ್ರರು ನಡೆಸಿರುವ 26 ಮಂದಿಯ ನರಮೇಧಕ್ಕೆ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದಾರೆ. ಹಿಂದೂಗಳ ಮೇಲೆ ನಡೆದಿರುವ ಈ ಹತ್ಯಾಕಾಂಡಕ್ಕೆ ನಿಜವಾದ ದೇಶಪ್ರೇಮಿಗಳ ಮನದಲ್ಲಿ ಕಿಚ್ಚು ಹೊತ್ತಿ ಉರಿದಿದೆ.  ಉಗ್ರರನ್ನು, ಅವರಿಗೆ ರಕ್ಷಣೆ ನೀಡುತ್ತಿರುವವರನ್ನು ಮಟ್ಟ ಹಾಕುವವರೆಗೂ ನಿಜವಾದ ಭಾರತೀಯರಿಗೆ ನೆಮ್ಮದಿ ಇಲ್ಲ. ಹೆಂಡತಿ- ಮಕ್ಕಳ ಎದುರಿನಲ್ಲಿಯೇ ಹಿಂದೂ ಗಂಡಸರನ್ನು ಕೊಲೆ ಮಾಡಿರುವ ಪಾತಕಿಗಳಿಗೆ ಏಳೇಳು ಜನ್ಮದಲ್ಲಿಯೂ ನಡುಕು ಹುಟ್ಟಿಸುವಂಥ ಶಿಕ್ಷೆ ಆಗಬೇಕು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.  ಇದಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನದ ಸೂಚನೆಯೂ ಸಿಕ್ಕಿದೆ. ಇದಾಗಲೇ ಭಾರತವು ಪಾಕಿಸ್ತಾನಕ್ಕೆ ಹಲವಾರು ರೀತಿಯಲ್ಲಿ ಪೆಟ್ಟು ಕೊಟ್ಟಿದ್ದು, ಇದರಿಂದ ಪಾಕಿಸ್ತಾನ ನಡುಕ ಅನುಭವಿಸುತ್ತಿದೆ.

ಇದರ ನಡುವೆಯೇ, ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತೂ ಯುದ್ಧದ ಪರ ಇಲ್ಲ. ನಾವು ಯಾವಾಗಲೂ ಶಾಂತಿಯ ಪರ. ಯುದ್ಧದ ಬದಲು ಭದ್ರತೆಯನ್ನು ಬಿಗಿಗೊಳಿಸಬೇಕಿದೆ. ಯುದ್ಧದ ಬಗ್ಗೆ ಯೋಚನೆ ಬೇಡ. ಅದರ ಬದಲು ಭದ್ರತೆಯನ್ನು ಬಿಗಿ ಮಾಡಿ ಎಂದು ಸಲಹೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದರೆ, ಅತ್ತ ಪಾಕಿಸ್ತಾನದ ಟಿವಿಯಲ್ಲಿ ಇವರ ಮಾತು ರಾಜಾಜಿಸುತ್ತಿದೆ. ಸಿದ್ದರಾಮಯ್ಯನವರ ಮಾತನ್ನು ಪಾಕ್​ ಟಿವಿಗಳಲ್ಲಿ ಪ್ರತಿನಿತ್ಯ ಹಲವಾರು ಬಾರಿ ಪ್ರಸಾರ ಮಾಡಲಾಗುತ್ತಿದ್ದು, ಭಾರತದಲ್ಲಿ ಯುದ್ಧದ ವಿರುದ್ಧ ಇದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟಾದ ಬಳಿಕ ಸಿದ್ದರಾಮಯ್ಯನವರು ಉಲ್ಟಾ ಹೊಡೆದು, ನಾನು ಯುದ್ಧ ಬೇಡ ಎಂದು ಹೇಳಿಲ್ಲ ಎಂದಿದ್ದಾರೆ. ಅದೇನೇ ಇರಲಿ... ದಂಡಂ ದಶಗುಣಂ ಎನ್ನುವುದೇ ಈಗ ಉಳಿದಿರುವ ದಾರಿ ಎನ್ನುತ್ತಿರುವ ನಡುವೆಯೇ ಉಗ್ರರ ಕುರಿತಾಗಿ ರಷ್ಯಾ ಪ್ರಧಾನಿ ವ್ಲಾಡಿಮಿರ್​​ ಪುಟಿನ್​ ಅವರು ಹೇಳಿರುವ ಹೇಳಿಕೆಯಿಂದ ಈಗ ವೈರಲ್​ ಆಗುತ್ತಿದೆ.

ಪಾಕಿಸ್ತಾನದ​ ಟಿವಿಯಲ್ಲೂ ಸಿದ್ದರಾಮಯ್ಯ ಫೇಮಸ್​: ಸುದ್ದಿಯ ವಿಡಿಯೋ ವೈರಲ್​- ನಿರೂಪಕಿ ಹೇಳಿದ್ದೇನು ಕೇಳಿ...

ಕೆಲವು ವರ್ಷಗಳ ಹಿಂದೆ ಅವರು ಈ ಹೇಳಿಕೆ ನೀಡಿದ್ದರು. ಅದೇನೆಂದರೆ, ಉಗ್ರರನ್ನು ಕ್ಷಮಿಸುವುದು ದೇವರಿಗೆ ಬಿಟ್ಟದ್ದು, ಆದರೆ ಅವ್ರನ್ನ ಆತನ ಬಳಿಗೆ ಕಳುಹಿಸುವುದು ನನಗೆ ಸೇರಿದ್ದು ಎಂದಿದ್ದರು. ಇವರ ಈ ಮಾತು ಭಾರತಕ್ಕೆ ಈಗ ಅನ್ವಯ ಆಗುತ್ತದೆ. ಭಯೋತ್ಪಾದಕರು, ಅವರಿಗೆ ನೆರವು ಮಾಡುತ್ತಿರುವವರು, ಮಿತ್ರರ ರೂಪದಲ್ಲಿ ಇರುವ ಶತ್ರುಗಳು, ಪ್ರತ್ಯಕ್ಷ-ಪರೋಕ್ಷವಾಗಿ ವೋಟ್​ಬ್ಯಾಂಕ್​ಗಾಗಿ ಇಂಥವರ ಪರ ವಹಿಸಿಕೊಳ್ಳುತ್ತಿರುವವರು ಎಲ್ಲರನ್ನೂ ಮಟ್ಟ ಹಾಕಬೇಕು  ಎಂಬ ಕೂಗು ಜೋರಾಗುತ್ತಿರುವ ಈ ಹೊತ್ತಿನಲ್ಲಿ ಪುಟಿನ್​ ಅವರ ಮಾತು ವೈರಲ್​ ಆಗುತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ  ಮೋದಿ ಅವರೂ ಅಳವಡಿಸಿಕೊಳ್ಳಬೇಕಿದೆ ಎನ್ನುತ್ತಿದ್ದಾರೆ. 

ಹಿಂದೂಗಳನ್ನು ಗುರಿಯಾಗಿಸಿಕೊಂಡು ಈ ನರಮೇಧ ನಡೆದೇ ಇಲ್ಲ ಎಂದು ಹೇಳಿಕೊಂಡು ವಿಡಿಯೋ ಹಾಕುತ್ತಿರುವುದು ಕೂಡ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಇದಾಗಲೇ,  26 ಮಂದಿ ಹಿಂದೂಗಳ ನರಮೇಧದ ಸಮಯದಲ್ಲಿ 20 ಮಂದಿಯ ಪ್ಯಾಂಟ್​ ಹಾಗೂ ಒಳ ಉಡುಪು ತೆಗೆದು ಖಾಸಗಿ ಅಂಗ ಪರೀಕ್ಷಿಸಿದ ಮೇಲೆ ಅವರು ಮುಸ್ಲಿಮರು ಅಲ್ಲ ಎಂದು ಕನ್​ಫರ್ಮ್​ ಮಾಡಿಕೊಂಡು  ಗುಂಡಿನ ದಾಳಿ ನಡೆಸಲಾಗಿದೆ ಎನ್ನುವ ವಿಷಯವನ್ನು ಸೇನಾ ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಜಮ್ಮು ಮತ್ತು ಕೆ ಆಡಳಿತ ಅಧಿಕಾರಿಗಳ ತಂಡ ನಿನ್ನೆ ರಿವೀಲ್​ ಮಾಡಿದ್ದಾರೆ..  ಈ ಬಗ್ಗೆ ಇದಾಗಲೇ ಮೃತರ ಸಂಬಂಧಿಕರು ಹೇಳಿಕೆ ಕೂಡ ನೀಡಿದ್ದಾರೆ.  ತಾವು ಸ್ಥಳಕ್ಕೆ ಧಾವಿಸಿದಾಗ ಒಳ ಉಡುಪುಗಳು ತೆಗೆದಿರುವುದು ಕಾಣಿಸಿತ್ತು. ಕೆಲವು ಕುಟುಂಬಸ್ಥರು ಮೇಲು ಹೊದಿಕೆಯಿಂದ ಶವವನ್ನು ಮುಚ್ಚಿದ್ದರು, ಕೆಲವರು ಆಘಾತದಿಂದ ಹಾಗೆಯೇ ಅಲ್ಲಿಯೇ ಕುಸಿದು ಹೋಗಿದ್ದರು ಎಂದು ತನಿಖಾಧಿಕಾರಿಗಳು  ತಿಳಿಸಿದ್ದಾರೆ. 

ಪಾಕ್​ ಬೆಂಬಲಿತ ಭಾರತೀಯರ ಲಿಸ್ಟ್​ ಕೊಟ್ಟ ಪಾಕ್​ ಮೀಡಿಯಾ! ಹಳೇ ವಿಡಿಯೋ ವೈರಲ್

Latest Videos