Asianet Suvarna News Asianet Suvarna News

ಚಾಲಕನ ನಿರ್ಲಕ್ಷ್ಯದಿಂದ ಅಪಘಾತ, ಗಾಯಗೊಂಡ ವೈದ್ಯಯಿಂದ ಊಬರ್ ಬಹಿಷ್ಕಾರಕ್ಕೆ ಕರೆ!

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ವಿರುದ್ದ ಪದೇ ಪದೇ ದೂರುಗಳು ದಾಖಲಾಗುತ್ತದೆ. ಇದೀಗ ಊಬರ್ ಬಹಿಷ್ಕಾರದ ಕೂಗು ಕೇಳಿಬಂದಿದೆ. ಊಬರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿ ವೈದ್ಯರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ದೆಹಲಿಯಲ್ಲಿ ವೈದ್ಯರ ಗುಂಪು ಉಬರ್ ಬಹಿಷ್ಕಾರ ಆಂದೋಲನ ಆರಂಭಿಸಿದೆ.
 

Delhi Doctor calls Boycott uber after getting hurt in Accident badly ckm
Author
First Published May 2, 2024, 8:18 PM IST

ದೆಹಲಿ(ಮೇ.02) ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯಿಂದ ಪ್ರಯಾಣ ಸುಲಭವಾಗಿದೆ. ಆದರೆ ಈ ಟ್ಯಾಕ್ಸಿ ಸೇವೆ ವಿರುದ್ದ ಪ್ರತಿ ದಿನ ಒಂದಲ್ಲೂ ಒಂದು ದೂರುಗಳು ದಾಖಲಾಗುತ್ತಿದೆ. ಇದೀಗ ದೆಹಲಿಯ ವೈದ್ಯರೊಬ್ಬರು ಸಂಚರಿಸುತ್ತಿದ್ದ ಉಬರ್ ಟ್ಯಾಕ್ಸಿ ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ವೈದ್ಯರು ಗಾಯಗೊಂಡಿದ್ದಾರೆ. ಸುರಕ್ಷಿತವಲ್ಲದ ಉಬರ್ ಪ್ರಯಾಣವನ್ನು ಬಹಿಷ್ಕರಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಹಲವು ವೈದ್ಯರು ಉಬರ್ ಬಹಿಷ್ಕಾರ ಕೂಗು ಎಬ್ಬಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಉಬರ್ ಕ್ರಮದ ಭರವಸೆ ನೀಡಿದೆ.

ದೆಹಲಿಯ ದಂತ ವೈದ್ಯೆ ರುಚಿಕಾ ಮೆಟ್ರೋ ನಿಲ್ದಾಣಕ್ಕೆ ತೆರಳಲು ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಮನೆಯಿಂದ ಮೆಟ್ರೋ ರೈಲು ನಿಲ್ದಾಣಕ್ಕೆ ಹೊರಟ ಟ್ಯಾಕ್ಸಿ, ಆರಂಭದಿಂದಲೇ ಚಾಲಕನ ಚಾಲನೆ ಆತಂಕಕ್ಕೆ ಕಾರಣವಾಗಿತ್ತು. ನಿರ್ಲಕ್ಷ್ಯ, ದಿಡೀರ್ ಬಲಗಡೆ, ಎಡಗಡೆಗೆ ತಿರುಗಿಸುವುದು, ಟ್ರಾಫಿಕ್ ನಿಯಮ ಕಡೆಗಣಿಸಿ ಚಾಲನೆ ಮಾಡುತ್ತಿದ್ದ ಚಾಲಕ, ಯಾವುದೇ ಇಂಡಿಕೇಟರ್ ಸಿಗ್ನಲ್ ನೀಡಿದ ತಿರುಗಿಸಿದ್ದ. ಈ ವೇಲೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ದಂತ ವೈದ್ಯೆ ರುಚಿಕಾ ಗಾಯಗೊಂಡಿದ್ದರು. 

ಉಬರ್ ಬುಕ್ ಮಾಡಿದ್ದು ಚಂದ್ರಯಾನಕ್ಕಾ? ಕೋಟಿ ಮೀರಿದ ಕ್ಯಾಬ್ ಬಿಲ್ ನೋಡಿ ಪ್ರಯಾಣಿಕ ಶಾಕ್

ಘಟನೆ ಬಳಿಕ ಎಕ್ಸ್ ಮೂಲಕ ಉಬರ್ ಪ್ರಯಾಣದ ಭಯಾನಕ ಘಟನೆಯನ್ನು ಹೇಳಿಕೊಂಡಿದ್ದರು. ಆರಂಭದಲ್ಲಿ ನಾನು ಉಬರ್ ಬಹಿಷ್ಕರಿಸುತ್ತಿದ್ದೇನೆ ಎಂದು ಉಲ್ಲೇಖಿಸಿ ಕಹಿ ಘಟನೆಯನ್ನು ಹೇಳಿಕೊಂಡಿದ್ದರು. ಉಬರ್ ಚಾಲಕರ ನಿರ್ಲಕ್ಷ್ಯ, ಸುರಕ್ಷಿತವಲ್ಲದ ಪ್ರಯಾಣ, ಲೈಸೆನ್ಸ್ ಪಡೆಯದವರ ರೀತಿಯ ಪ್ರಯಾಣದಿಂದ ಅಪಘಾತ ಸಂಭವಿಸಿದೆ ಎಂದು ರುಚಿಕಾ ಹೇಳಿದ್ದರು.

ಚಾಲಕ ಮಿರರ್ ನೋಡದೆ, ಯಾವುದೇ ಸಿಗ್ನಲ್ ನೀಡದೆ ವಾಹನ ತಿರುಗಿಸಿದ್ದ. ಹೀಗಾಗಿ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ. ಅಪಘಾಚದಲ್ಲಿ ತೀವ್ರಗಾಯವಾದಿದೆ. 5 ದಿನ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಈ ಅಪಘಾತ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ನನ್ನನ್ನು ಕುಗ್ಗಿಸಿದೆ ಎಂದಿದ್ದಾರೆ.

 

 

ಆರ್ಥಿಕ ನಷ್ಟ ಸೇರಿದಂತೆ ಇತರ ಎಲ್ಲಾ ನಷ್ಟಗಳನ್ನು ನಾನು ಭರಿಸಿದ್ದೇನೆ. ಆದರೆ ನನ್ನ ಉನ್ನತ ವ್ಯಾಸಾಂಗ, ತರಗತಿಗಳಿಂದ ದೂರ ಉಳಿಯಬೇಕಾದ ನಷ್ಟ ಯಾರು ಭರಿಸುತ್ತಾರೆ ಎಂದು ವೈದ್ಯೆ ರುಚಿಕಾ ಕೇಳಿದ್ದಾರೆ. ರುಚಿಕಾ ಟ್ವೀಟ್ ಮಾಡುತ್ತಿದ್ದಂತೆ ಉಬರ್ ತಂಡ ತಕ್ಷಣ ಸ್ಪಂದಿಸಿದೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

8 ಕಿ.ಮಿಗೆ 1,334 ರೂ ಚಾರ್ಜ್ ಮಾಡಿ ಉಬರ್, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ!
 

Follow Us:
Download App:
  • android
  • ios