Asianet Suvarna News Asianet Suvarna News

ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌: ಕಂಚಿಗಾಗಿ ಇಂದು ಭಾರತ-ಇಂಗ್ಲೆಂಡ್‌ ಫೈಟ್‌

  • ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌
  • ಕಂಚಿಗಾಗಿ ಇಂದು ಭಾರತ-ಇಂಗ್ಲೆಂಡ್‌ ಫೈಟ್‌
  • 2013ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಗೆದ್ದು ಕಂಚಿನ ಪದಕ ಜಯಿಸಿದ್ದ ಭಾರತ 
Junior Women's Hockey World Cup: India-England fight today for bronze akb
Author
Bangalore, First Published Apr 12, 2022, 5:00 AM IST

ಪಾಚೆಫ್‌ಸ್ಟೂರಮ್‌: ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ (women's hockey World Cup) 2ನೇ ಬಾರಿ ಕಂಚು ಗೆಲ್ಲುವ ತವಕದಲ್ಲಿರುವ ಭಾರತ, ಮಂಗಳವಾರ 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್‌ (England) ವಿರುದ್ಧ ಸೆಣಸಲಿದೆ. 2013ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಗೆದ್ದು ಕಂಚಿನ ಪದಕ (bronze medal)ಜಯಿಸಿದ್ದ ಭಾರತ ಮತ್ತೊಮ್ಮೆ ಅದೇ ತಂಡದ ವಿರುದ್ಧ ಸ್ಪರ್ಧಿಸಲಿದೆ. ಅತ್ತ ಇಂಗ್ಲೆಂಡ್‌ 2009, 2013ರಲ್ಲಿಯೂ ಕಂಚಿನ ಪದಕದ ಸ್ಪರ್ಧೆಯಲ್ಲಿ ಸೋತಿದ್ದು, ಈ ಬಾರಿ ಚೊಚ್ಚಲ ಪದಕ ಗೆಲ್ಲುವ ತವಕದಲ್ಲಿದೆ. ಉಭಯ ತಂಡಗಳು ಈ ಬಾರಿ ಗುಂಪು ಹಂತದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿದ್ದವು. ಬಳಿಕ ಭಾರತ ಕ್ವಾರ್ಟರ್‌ ಫೈನಲ್‌ನಲ್ಲಿ ದ.ಕೊರಿಯಾ ವಿರುದ್ಧ ಗೆದ್ದರೂ, ಸೆಮಿಫೈನಲ್‌ನಲ್ಲಿ ನೆದರ್‌ಲೆಂಡ್‌ (Netherlands) ವಿರುದ್ಧ ಸೋತಿತ್ತು. ಇಂಗ್ಲೆಂಡ್‌ ಕ್ವಾರ್ಟರ್‌ನಲ್ಲಿ ಅಮೆರಿಕವನ್ನು ಮಣಿಸಿ, ಸೆಮೀಸ್‌ನಲ್ಲಿ ಜರ್ಮನಿಗೆ (Germany)ಶರಣಾಗಿತ್ತು. ಟೂರ್ನಿಯ ಫೈನಲ್‌ ಕೂಡಾ ಮಂಗಳವಾರವೇ ನಡೆಯಲಿದ್ದು, 3 ಬಾರಿ ಚಾಂಪಿಯನ್‌ ನೆದರ್‌ಲೆಂಡ್‌ ಹಾಗೂ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಜರ್ಮನಿ ಮುಖಾಮುಖಿಯಾಗಲಿವೆ.

ಭಾನುವಾರ ನಡೆದ 3 ಬಾರಿ ಚಾಂಪಿಯನ್‌ ನೆದರ್‌ಲೆಂಡ್ಸ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ 0-3 ಗೋಲುಗಳ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿತು. ಇದರಿಂದ ಕಿರಿಯ ಮಹಿಳೆಯರ ಹಾಕಿ ವಿಶ್ವಕಪ್‌ನಲ್ಲಿ (Junior Women's Hockey World Cup) ಚೊಚ್ಚಲ ಬಾರಿ ಫೈನಲ್‌ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿತ್ತು. ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದ್ದ ಭಾರತ ಈ ಪಂದ್ಯದಲ್ಲಿ ನೆದರ್‌ಲೆಂಡ್‌ ಸವಾಲನ್ನು ಮೆಟ್ಟಿನಿಲ್ಲಲು ವಿಫಲವಾಯಿತು. ಟೆಸ್ಸಾ ಬೀಸ್ಮಾ ((Tessa Beesma) 12ನೇ ನಿಮಿಷದಲ್ಲಿ ನೆದರ್‌ಲೆಂಡ್ಸ್‌ ಪರ ಗೋಲಿನ ಖಾತೆ ತೆರೆದರೆ, ಲುನಾ ಫೋಕ್‌(Luna Folk)(53ನೇ ನಿಮಿಷ), ಜಿಪ್‌ ಡಿಕ್‌(Zip Dick)(54ನೇ ನಿಮಿಷ) ಮತ್ತೆರಡು ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದರು. 8ನೇ ಬಾರಿ ಸೆಮಿಫೈನಲ್‌ನಲ್ಲಿ ಆಡಿದ ನೆದರ್‌ಲೆಂಡ್‌ ಸತತ 4ನೇ ಬಾರಿ ಫೈನಲ್‌ ಪ್ರವೇಶಿಸಿತು. 2013ರಲ್ಲಿ ಕಂಚು ಜಯಿಸಿದ್ದ ಭಾರತ ಈ ಬಾರಿ ಎರಡನೇ ಕಂಚಿನ ಪದಕದ ನಿರೀಕ್ಷೆ ಇದ್ದು, ಮಂಗಳವಾರ 3ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್‌/ಜರ್ಮನಿ ವಿರುದ್ಧ ಸೆಣಸಾಡಲಿದೆ.

IPL 2022 ಹಾರ್ದಿಕ್ ಪಾಂಡ್ಯ ಅರ್ಧಶತಕ, ಸನ್ ರೈಸರ್ಸ್ ಗೆ ಸವಾಲಿನ ಗುರಿ

ಈ ಮಧ್ಯೆ ಪ್ರೊ ಲೀಗ್‌ ಮಹಿಳಾ ಹಾಕಿ ಟೂರ್ನಿಯ (FIH Pro League Women's Hockey League) ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಭಾನುವಾರ ಮಾಹಿತಿ ನೀಡಿದೆ. ಏಪ್ರಿಲ್ 2 ಮತ್ತು 3ರಂದು ಪಂದ್ಯಗಳು ನಿಗದಿಯಾಗಿದ್ದವು. ಆದರೆ ಇಂಗ್ಲೆಂಡ್‌ ಆಟಗಾರ್ತಿಯರಲ್ಲಿ ಕೊರೋನಾ ಸೋಂಕು (Coronavirus) ಕಾಣಿಸಿಕೊಂಡ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು. 

ಆದರೆ ಸಮಯದ ಅಭಾವದಿಂದ ಬೇರೊಂದು ಸಮಯದಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಿಲ್ಲದ ಕಾರಣ ಉಭಯ ದೇಶಗಳ ಹಾಕಿ ಸಂಸ್ಥೆಗಳ ಜೊತೆ ಚರ್ಚಿಸಿ ಎಫ್‌ಐಎಚ್‌, ಪಂದ್ಯ ರದ್ದುಗೊಳಿಸಿದೆ. ಈ ಕಾರಣ ಒಂದು ಪಂದ್ಯಕ್ಕೆ 3 ಅಂಕದಂತೆ ಭಾರತಕ್ಕೆ 6 ಅಂಕಗಳು ದೊರೆತಿವೆ. ಇದರೊಂದಿಗೆ ಒಟ್ಟು 22 ಅಂಕಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ನೆದರ್‌ಲೆಂಡ್‌ 19 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. 2 ಪಂದ್ಯಗಳನ್ನಾಡಿರುವ ಇಂಗ್ಲೆಂಡ್‌ ಇನ್ನಷ್ಟೇ ಅಂಕಪಟ್ಟಿಯಲ್ಲಿ ಖಾತೆ ತೆರೆಯಬೇಕಿದೆ.

IPL 2022 ಸನ್ ರೈಸರ್ಸ್ ಗೆ ಭರ್ಜರಿ ಜಯ, ಮೊದಲ ಸೋಲು ಕಂಡ ಗುಜರಾತ್
 

Follow Us:
Download App:
  • android
  • ios