Asianet Suvarna News Asianet Suvarna News

ರೋಗಕ್ಕೆಲ್ಲಿ ಬಡ-ಸಿರಿವಂತ ವ್ಯತ್ಯಾಸ? ಬ್ರಿಟನ್ ರಾಣಿಗೂ ವಕ್ಕರಿಸಿದೆ ಕ್ಯಾನ್ಸರ್

ಅನೇಕ ದಿನಗಳಿಂದ ಕಾಣೆಯಾಗಿದ್ದ ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಮಾಧ್ಯಮದ ಮುಂದೆ ಬಂದಿದ್ದಾರೆ. ಅವರ ಆರೋಗ್ಯದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಯಾವೆಲ್ಲ ಕಷ್ಟಗಳು ಅವರ ಮುಂದಿದೆ ಎಂಬುದನ್ನು ಹೇಳಿದ್ದಾರೆ.  
 

Princess Of Wales Kate Middleton Is Fighting Cancer Undergoing Chemotherapy roo
Author
First Published Mar 23, 2024, 2:43 PM IST

ರೋಗಕ್ಕೆ ಬಡವ – ಶ್ರೀಮಂತ ಎನ್ನುವುದಿಲ್ಲ. ಎಲ್ಲ ಗಡಿಗಳನ್ನು ದಾಟಿ ಅದು ಜನರನ್ನು ಕಾಡುತ್ತದೆ. ರೋಗ ಬಡವರಿಗೆ ಬಂದ್ರೆ ಅದಕ್ಕೆ ಚಿಕಿತ್ಸೆ ಕಷ್ಟ. ಅದೇ ಶ್ರೀಮಂತರಿಗೆ ರೋಗ ಬಂದ್ರೆ ಎಷ್ಟೇ ಹಣ ನೀಡಿಯಾದ್ರೂ ಬದುಕಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ಆದ್ರೆ ರೋಗದ ವೇಳೆ ಕಾಡುವ ನೋವು ಎಲ್ಲರಿಗೂ ಒಂದೆ ಆಗಿದೆ. ಅದನ್ನು ಗೆದ್ದು ಬರಲು ಸೂಕ್ತ ಸಮಯದಲ್ಲಿ ಚಿಕಿತ್ಸೆ ಜೊತೆ ಧೈರ್ಯದ ಅಗತ್ಯವಿದೆ. ಬ್ರಿಟನ್‌ನ ವೇಲ್ಸ್‌ ರಾಜಕುಮಾರಿ ಕೇಟ್‌ ಮಿಡಲ್ಟನ್‌ ಬಗ್ಗೆ ಆಘಾತಕಾರಿ ವಿಷ್ಯ ಹೊರಬಿದ್ದಿದೆ. 

ರಾಜಕುಮಾರಿ (Princess) ಕೇಟ್ ಮಿಡಲ್ಟನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ವಿಷ್ಯವನ್ನು ಅವರು ಶುಕ್ರವಾರ ತಿಳಿಸಿದ್ದಾರೆ. ಕೇಟ್ ಮಿಡಲ್ಟನ್ (Kate Middleton) ದೀರ್ಘಕಾಲದವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ, ನಂತರ ಅವರ ಆರೋಗ್ಯ (Health) ದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿತ್ತು. ಈಗ ಕೇಟ್ ಮಿಡಲ್ಟನ್ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅವರಿಗೆ ಕ್ಯಾನ್ಸರ್ ಇರೋದು ಸ್ಪಷ್ಟವಾಗಿದೆ. 

ಆರೋಗ್ಯ ಯಾರಿಗ್ ಬೇಡ ಹೇಳಿ, ಬೆಳಗ್ಗೆ ಇಷ್ಟು ಮಾಡಿ ಸಾಕು ಫಿಟ್ ಆಗಿರ್ತಿರಿ

ರಾಯಿಟರ್ಸ್ ಪ್ರಕಾರ, ಕೇಟ್ ಅವರಿಗೆ ಕ್ಯಾನ್ಸರ್ ಇದೆ ಎಂದು ಪರೀಕ್ಷೆಗಳು ದೃಢಪಡಿಸಿವೆ. ಜನವರಿಯಲ್ಲಿ ಅವರಿಗೆ ಹೊಟ್ಟೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆದಿತ್ತು. ನಂತರ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತಕ್ಷಣ ಕೀಮೋಥೆರಪಿ ನಡೆಯುತ್ತಿದೆ. 

ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿ ಪ್ರಿನ್ಸ್ ವಿಲಿಯಂ ಅವರ 42 ವರ್ಷದ ಪತ್ನಿ ಕೇಟ್, ಕ್ಯಾನ್ಸರ್ ನನಗೆ ದೊಡ್ಡ ಆಘಾತ ನೀಡಿದೆ ಎಂದಿದ್ದಾರೆ. ಬ್ರಿಟಿಷ್ ರಾಜಮನೆತನಕ್ಕೆ ಇದು ಮತ್ತೊಂದು ಹೊಡೆತ. ಕಿಂಗ್ ಚಾರ್ಲ್ಸ್ ಕೂಡ ಕ್ಯಾನ್ಸರ್ ಗೆ ಒಳಗಾಗಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ.

ಸದ್ಯ ಬಿಡುಗಡೆ ಆಗಿರುವ ವಿಡಿಯೋದಲ್ಲಿ ಕೇಟ್ ತುಂಬಾ ದಣಿದಿರುವಂತೆ ಕಾಣುತ್ತಿದೆ. ವಿಲಿಯಂ ಮತ್ತು ಅವರ ಕುಟುಂಬದ  ಖಾಸಗಿಯಾಗಿ ಇದನ್ನು ನಿರ್ವಹಿಸಲು ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕೇಟ್ ಹೇಳಿದ್ದಾರೆ. ನಾನು ಸದ್ಯ ಆರೋಗ್ಯವಾಗಿದ್ದು, ಪ್ರತಿ ದಿನ ಗಟ್ಟಿಯಾಗ್ತಿದ್ದೇನೆ ಎಂದಿದ್ದಾರೆ.  ಶಸ್ತ್ರಚಿಕಿತ್ಸೆಯಿಂದ ನಾನು ಚೇತರಿಸಿಕೊಂಡ ಸಮಯದಲ್ಲಿ ನಿಮ್ಮ ಬೆಂಬಲ ಮತ್ತು ಶುಭಾಶಯ ನನಗೆ ಬಲ ನೀಡಿದ್ದು, ನಾನು ವೈಯಕ್ತಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕೇಟ್ ಹೇಳಿದ್ದಾರೆ. ನಮ್ಮ ಇಡೀ ಕುಟುಂಬಕ್ಕೆ ಎರಡು ತಿಂಗಳು ನಂಬಲಾಗದಷ್ಟು ಕಷ್ಟಕರವಾಗಿತ್ತು. ಆದರೆ ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಅದ್ಭುತ ವೈದ್ಯಕೀಯ ತಂಡವನ್ನು ನಾನು ಹೊಂದಿದ್ದೇನೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೇಟ್ ಇದೇ ವೇಳೆ ಹೇಳಿದ್ದಾರೆ. 

ಕೆನ್ಸಿಂಗ್ಟನ್ ಪ್ಯಾಲೇಸ್ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಕೇಟ್, ಹೊಟ್ಟೆಯ ಶಸ್ತ್ರಚಿಕಿತ್ಸೆ ವೇಳೆ ಕ್ಯಾನ್ಸರ್ ಇರುವುದು ಗೊತ್ತಿರಲಿಲ್ಲ. ನಂತ್ರ ಕ್ಯಾನ್ಸರ್ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ನಡೆದ ಮೆಡಿಕಲ್ ಟೆಸ್ಟ್ ನಲ್ಲಿ ಕ್ಯಾನ್ಸರ್ ಪತ್ತೆಯಾಯ್ತು. ನನ್ನ ವೈದ್ಯಕೀಯ ತಂಡ ಕಿಮೋಥೆರಪಿ ಮಾಡುವಂತೆ ಸಲಹೆ ನೀಡಿತು. ನಾನೀಗ ಅದ್ರ ಆರಂಭದ ಹಂತದಲ್ಲಿದ್ದೇನೆ ಎಂದು ಕೇಟ್ ಹೇಳಿದ್ದಾರೆ.  

14 ಜನರನ್ನು ಐಐಟಿ ಬಾಂಬೆ ಕ್ಯಾಂಪಸ್ಸಲ್ಲಿ ಕಚ್ಚಿದ ನಾಯಿ ರೇಬೀಸ್‌‍ನಿಂದ ಸಾವು

ವಿಡಿಯೋದಲ್ಲಿ ಮಕ್ಕಳ ಬಗ್ಗೆಯೂ ಕೇಟ್ ಹೇಳಿದ್ದಾರೆ. ಮಕ್ಕಳಾದ ಜಾರ್ಜ್, ಚಾರ್ಲೆಟ್ ಮತ್ತು ಲೂಯಿಸ್ ಅವರಿಗೆ ಎಲ್ಲವನ್ನೂ ವಿವರಿಸಲು ಮತ್ತು ನಾನು ಚೆನ್ನಾಗಿರುತ್ತೇನೆ ಎಂದು ಅವರಿಗೆ ಭರವಸೆ ನೀಡಲು ನಮಗೆ ಸಮಯ ತೆಗೆದುಕೊಂಡಿತು ಎಂದಿದ್ದಾರೆ. ನನ್ನನ್ನು ಬಲಪಡಿಸುವ ವಿಷ್ಯದ ಬಗ್ಗೆ ನಾನು ಹೆಚ್ಚು ಗಮನ ನೀಡ್ತಿದ್ದು, ಅದು ನನ್ನನ್ನು ಗಟ್ಟಿಮಾಡ್ತಿದೆ ಎಂದ ಕೇಟ್, ನನ್ನೊಂದಿಗೆ ವಿಲಿಯಂ ಇರುವುದು ಕೂಡ ನನಗೆ ತುಂಬಾ ಸಹಾಯಕವಾಗಿದೆ ಎಂದಿದ್ದಾರೆ. ಇನ್ನೊಂದಿಷ್ಟು ದಿನ ಚೇತರಿಕೆಗೆ ಸಮಯ ಹಿಡಿಯಲಿದ್ದು, ಅಲ್ಲಿಯವರೆಗೆ ತೊಂದರೆ ನೀಡದಂತೆ ಕೇಟ್ ಮನವಿ ಮಾಡಿದ್ದಾರೆ.

Follow Us:
Download App:
  • android
  • ios