ಜಗತ್ತಿನ ಮೂವರ ಬಳಿಯಲ್ಲಿದೆ ಮಾತ್ರ 232 ಕೋಟಿ ಮೌಲ್ಯದ ಕಾರ್
The Rolls Royce Boat Tail: ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ರಾಲ್ಸ್ ರಾಯ್ಸ್ ಬೋಟ್ ಟೈಲ್ ಬಗ್ಗೆ ತಿಳಿಯಿರಿ. ಕೇವಲ ಮೂರು ಯುನಿಟ್‌ಗಳನ್ನು ಉತ್ಪಾದಿಸಲಾಗಿರುವ ಈ ಕಾರಿನ ಬೆಲೆ 232 ಕೋಟಿ ರೂ. ಯಾರು ಈ ಕಾರನ್ನು ಹೊಂದಿದ್ದಾರೆ ಮತ್ತು ಅದರ ವಿಶೇಷತೆಗಳೇನು ಎಂಬುದನ್ನು ತಿಳಿದುಕೊಳ್ಳಿ.
- FB
- TW
- Linkdin

ಐಷಾರಾಮಿ ಕಾರ್‌ಗಳು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ರಸ್ತೆಯಲ್ಲಿ ಕೋಟಿ ಕೋಟಿ ಮೌಲ್ಯದ ಕಾರ್ ಕಾಣಿಸಿದ್ರೆ ಸಾಕು ಜನರು ಅದರ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಲು ಇಷ್ಟಪಡುತ್ತಾರೆ. ಈ ಲೇಖನದಲ್ಲಿ ವಿಶ್ವದ ಮೂರು ಐಷಾರಾಮಿ ಕಾರ್‌ಗಳ ಬಗ್ಗೆ ಹೇಳುತ್ತಿದ್ದೇವೆ.
ಈ ಒಂದು ಕಾರ್ ಮೌಲ್ಯ ಬರೋಬ್ಬರಿ 232 ಕೋಟಿ ರೂಪಾಯಿ ಆಗಿದೆ. ಆದರೆ ಈ ಕಾರ್ ವಿಶ್ವದ ಮೂವರ ಬಳಿಯಲ್ಲಿದೆ. ಆ ಮೂವರು ಯಾರು ಗೊತ್ತಾ? ಈ ಕಾರ್ ವಿಶೇಷತೆ ಏನು ಎಂಬುದರ ಮಾಹಿತಿ ಇಲ್ಲಿದೆ.
ರಾಲ್ಸ್ ರಾಯ್ಸ್ ಐಷಾರಾಮಿ ಕಾರ್‌ಗಳಲ್ಲಿ ಒಂದಾಗಿದೆ. ಈ ಕಂಪನಿಯ ರಾಲ್ಸ್ ರಾಯ್ಸ್ ಬೋಟ್ ಟೈಲ್ ವಿಶ್ವದ ದುಬಾರಿ ಮತ್ತು ಐಷಾರಮಿ ಕಾರ್ ಆಗಿದ್ದು, ಇದರ ಬೆಲೆ 28 ಮಿಲಿಯನ್ ಯುಎಸ್ ಡಾಲರ್.(232 ಕೋಟಿ ರು). ಇಷ್ಟು ದುಬಾರಿ ಕಾರ್‌ನ ಮೂರು ಯುನಿಟ್‌ಗಳನ್ನು ಮಾತ್ರ ರಾಲ್ಸ್ ರಾಯ್ಸ್ ಪ್ರೊಡಕ್ಷನ್ ಮಾಡಿದೆ. ಹಾಗಾಗಿ ಮೂವರ ಬಳಿಯಲ್ಲಿ ಮಾತ್ರ ಈ ಕಾರ್‌ಗಳಿವೆ.
ಕಾರ್ ವಿಶೇಷತೆ?
ಈ ಕಾರ್‌ನ್ನು ದೋಣಿಯಂತೆ ಡಿಸೈನ್ ಮಾಡಲಾಗಿದೆ. 4 ಆಸನಗಳನ್ನು ಈ ಕಾರ್ ಹೊಂದಿದ್ದು, ಇದು ಎರಡು ರೆಫ್ರಿಜರೇಟರ್ ಹೊಂದಿದೆ. ಒಂದು ರೆಫ್ರಿಜರೇಟರ್‌ನಲ್ಲಿ ಷಾಂಪೇನ್ ಸ್ಟೋರ್ ಮಾಡಲು ಡಿಸೈನ್ ಮಾಡಲಾಗಿದೆ. ಸಮುದ್ರ ನೀರಿನ ನೀಲಿ ಬಣ್ಣದಲ್ಲಿ ಈ ಕಾರ್ ಲಭ್ಯವಿದೆ. ನೌಕೆಯಲ್ಲಿ ಕುಳಿತು ಪ್ರಯಾಣಿಸುವ ಕ್ಲಾಸಿಕ್ ಅನುಭವವನ್ನು ಈ ಕಾರ್ ನೀಡುತ್ತದೆ.
ಯಾರ ಬಳಿಯಲ್ಲಿದೆ ಈ ಕಾರ್?
ಬಿಲಿಯನೇರ್ ರ‍್ಯಾಪರ್ ಜೇ-ಝಡ್ ಮತ್ತು ಪತ್ನಿ ಬೆಯೋನ್ಸ್ ಒಡೆತನದಲ್ಲಿ ಒಂದು ಕಾರ್ ಇದೆ. ಮತ್ತೊಂದು ಕಾರ್ ಮುತ್ತಿನ ವ್ಯಾಪಾರಿಯೊಬ್ಬರು ಹೊಂದಿದ್ದಾರೆ. ಮೂರನೇ ಕಾರ್‌ನ್ನು ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಮೌರೊ ಇಕಾರ್ಡಿ ಹೊಂದಿದ್ದಾರೆ.