- Home
- Business
- ಬದಲಾದ ಹೂಡಿಕೆ, ಬಂಗಾರದ ಬೆಲೆ ಭಾರೀ ಇಳಿಕೆ: ತಣ್ಣಗಾದ ಜಾಗತಿಕ ಯುದ್ಧೋನ್ಮಾದ ಮತ್ತಷ್ಟು ಬೆಲೆ ಕುಸಿತ ಸಾಧ್ಯತೆ!
ಬದಲಾದ ಹೂಡಿಕೆ, ಬಂಗಾರದ ಬೆಲೆ ಭಾರೀ ಇಳಿಕೆ: ತಣ್ಣಗಾದ ಜಾಗತಿಕ ಯುದ್ಧೋನ್ಮಾದ ಮತ್ತಷ್ಟು ಬೆಲೆ ಕುಸಿತ ಸಾಧ್ಯತೆ!
ಇಲ್ಲಿಯವರೆಗೆ ಏರಿಕೆ ಕಂಡಿದ್ದ ಬಂಗಾರದ ಬೆಲೆ ಈಗ ಕಡಿಮೆಯಾಗುತ್ತಿದೆ. ಗಗನಕ್ಕೇರಿದ್ದ ಬಂಗಾರದ ಬೆಲೆಗಳು ಈಗ ಇಳಿಕೆ ಕಾಣುತ್ತಿವೆ. ಒಂದು ತೊಲ ಬಂಗಾರದ ಬೆಲೆ ₹660 ರಷ್ಟು ಕಡಿಮೆಯಾಗಿದೆ.
- FB
- TW
- Linkdin

ಬಂಗಾರದ ಬೆಲೆ ಇಳಿಕೆ
ಜಾಗತಿಕ ಪರಿಸ್ಥಿತಿಯಲ್ಲಿನ ಬದಲಾವಣೆಗಳು, ಯುದ್ಧದ ವಾತಾವರಣ ಕಡಿಮೆಯಾಗುವುದು ಮುಂತಾದ ಕಾರಣಗಳು ಬಂಗಾರದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ. ಹೂಡಿಕೆದಾರರು ಬೇರೆ ಮಾರ್ಗಗಳತ್ತ ಮುಖ ಮಾಡುತ್ತಿರುವುದರಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.
ಬುಧವಾರ ಒಂದೇ ದಿನದಲ್ಲಿ ಒಂದು ತೊಲ ಬಂಗಾರದ ಬೆಲೆ ₹660 ರಷ್ಟು ಕಡಿಮೆಯಾಗಿದೆ. ಹೀಗಾಗಿ ಹಲವು ದಿನಗಳ ನಂತರ 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ ₹98,000ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಗಳು ಹೇಗಿವೆ ಎಂಬುದನ್ನು ನೋಡೋಣ.
ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಗಳು ಹೇಗಿವೆ?
* ದೆಹಲಿಯಲ್ಲಿ 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ ₹98,330 ಮತ್ತು 22 ಕ್ಯಾರಟ್ ಬಂಗಾರದ ಬೆಲೆ ₹90,150 ಇದೆ.
* ಮುಂಬೈನಲ್ಲಿ 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ ₹98,180 ಮತ್ತು 22 ಕ್ಯಾರಟ್ ಬಂಗಾರದ ಬೆಲೆ ₹90,000 ಇದೆ.
* ಚೆನ್ನೈನಲ್ಲಿ 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ ₹98,180 ಮತ್ತು 22 ಕ್ಯಾರಟ್ ಬಂಗಾರದ ಬೆಲೆ ₹90,000 ಇದೆ.
* ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ ₹98,180 ಮತ್ತು 22 ಕ್ಯಾರಟ್ ಬಂಗಾರದ ಬೆಲೆ ₹90,000 ಇದೆ.
* ಹೈದರಾಬಾದ್‌ನಲ್ಲಿ 10 ಗ್ರಾಂ 24 ಕ್ಯಾರಟ್ ಬಂಗಾರದ ಬೆಲೆ ₹98,180 ಮತ್ತು 22 ಕ್ಯಾರಟ್ ಬಂಗಾರದ ಬೆಲೆ ₹90,000 ಇದೆ.
ಬಂಗಾರದ ಬೆಲೆ ಏಕೆ ಇಳಿಯುತ್ತಿದೆ?
ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ವಿಗ್ನ ವಾತಾವರಣ ಕಡಿಮೆಯಾಗುತ್ತಿದೆ. ಇಸ್ರೇಲ್ ಮತ್ತು ಇರಾನ್, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಛಾಯೆಗಳು ದೂರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತೆಷೇರುಪೇಟೆಯತ್ತ ಮುಖ ಮಾಡುತ್ತಿದ್ದಾರೆ.
ಬಂಗಾರದಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಬಂಗಾರದ ಬೆಲೆ ಇಳಿಕೆಗೆ ಇದೊಂದು ಕಾರಣ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡಲಾಗಿದೆ.