Asianet Suvarna News Asianet Suvarna News

ರಿಯಲ್‌ಮಿ ಟ್ಯಾಬ್ಲೆಟ್ ಲಾಂಚ್: ಏನೆಲ್ಲ ಫೀಚರ್‌ಗಳಿವೆ, ಬೆಲೆ ಎಷ್ಟು?

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಜಾಗವನ್ನು ಸೃಷ್ಟಿಸಿಕೊಂಡಿರುವ ಚೀನಾ ಮೂಲದ ರಿಯಲ್‌ಮಿ ಕಂಪನಿಯು ಮೊದಲ ಬಾರಿಗೆ ಟ್ಯಾಬ್ಲೆಟ್ ಲಾಂಚ್ ಮಾಡಿದೆ. ರಿಯಲ್‌ಮಿ ಪ್ಯಾಡ್ ಹೆಸರಿನ ಈ ಟ್ಯಾಬ್ಲೆಟ್ ಹಲವು ವಿಶೇಷತೆಗಳನ್ನ ಹೊಂದಿದೆ. 10.4 ಇಂಚ್ ಡಿಸ್‌ಪ್ಲೇ ಹೊಂದಿರುವ ಈ ಪ್ಯಾಡ್‌ನಲ್ಲಿ ಜಬರ್ದಸ್ತ್ ಬ್ಯಾಟರಿಯನ್ನು ನೀಡಲಾಗಿದೆ.

Realme Pad tablet launched in India and check details
Author
Bengaluru, First Published Sep 13, 2021, 5:56 PM IST

ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವ, ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ರಿಯಲ್‌ಮಿ ಪ್ಯಾಡ್ ಬಿಡುಗಡೆ ಮಾಡಿದೆ. ಇದರ ಜೊತೆಗೆ ಕಂಪನಿಯು ಕ್ವಾಡ್ ಸ್ಪೀಕರ್ ಕೂಡ ಲಾಂಚ್ ಮಾಡಿದೆ.

ರಿಯಲ್‌ಮಿ ಕಂಪನಿಯು ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಅಕ್ಟಾಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ80 ಪ್ರೊಸೆಸರ್ ಆಧರಿತವಾಗಿರುವ ಈ ಟ್ಯಾಬ್ಲೆಟ್ ಡಾಲ್ಬಿ ಅಟ್ಮೋಸ್ ಸೌಂಡ್‌ಗೆ ಸಪೋರ್ಟ್ ಮಾಡುತ್ತದೆ. ಜೂತೆಗೆ ಇನ್ನು ಹಲವಾರು ವಿಶೇಷತೆಗಳನ್ನು ಈ ರಿಯಲ್‌ಮಿ ಟ್ಯಾಬ್ಲೆಟ್ ಹೊಂದಿದೆ.

ನಿಮ್ಮ ವಾಟ್ಸಾಪ್‌ ಆನ್‌ಲೈನ್ ಸ್ಟೇಟಸ್ ಮರೆಮಾಚಬಹುದು!

ಭಾರತೀಯ ಮಾರುಕಟ್ಟೆಯಲ್ಲಿ  3ಜಿಬಿ ಮತ್ತು 32 ಜಿಬಿ ಸ್ಚೋರೇಜ್ ಸಾಮರ್ಥ್ಯದ ಹಾಗೂ  ವೈ ಪೈ ಒನ್ಲೀ ವೆರಿಯೆಂಟ್ ಟ್ಯಾಬ್ ಬೆಲೆ 13,999 ರೂಪಾಯಿ ಇದೆ.  ಇದೇ ಟ್ಯಾಬ್ಲೆಟ್ ನಿಮಗೆ 3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಹಾಗೂ ವೈ ಫೈ ಮತ್ತು 4ಜಿ ವೆರಿಯೆಂಟ್‌ನಲ್ಲೂ ಸಿಗುತ್ತದೆ. ಈ ಟ್ಯಾಬ್ಲೆಟ್ 15,999 ರೂಪಾಯಿಯಾಗಿದೆ.  ಇನ್ನು 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್, ವೈಫೈ ಮತ್ತು 4ಜಿ ವೆರಿಯೆಂಟ್ ಬೆಲೆ 17,999 ರೂಪಾಯಿಯಾಗಿದೆ. 

ಕಂಪನಿಯು ಈ ಎಲ್ಲ ಮಾದರಿಯ ಟ್ಯಾಬ್ಲೆಟ್‌ಗಳನ್ನು ರಿಯಲ್ ಗೋಲ್ಡ್ ಮತ್ತು ರಿಯಲ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಮಾರಾಟ ಮಾಡುತ್ತಿದೆ. ಸೆಪ್ಟೆಂಬರ್ 12ರಿಂದ ಮಾರಾಟಕ್ಕ ಸಿಗಲಿವೆ. ಇನ್ನು ನೀವು ಈ ಟ್ಯಾಬ್‌ಗಳನ್ನು ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್, ರಿಯಲ್‌ಮಿ ವೆಬ್‌ಸೈಟ್‌ಗಳ ಮೂಲಕವೂ ಖರೀದಿಸಬಹುದು. ಆನ್‌ಲೈನ್ ಮಾತ್ರವಲ್ಲದೇ ಆಫ್‌ಲೈನ್ ಸ್ಟೋರ್‌ಗಳಲ್ಲೂ ಈ ರಿಯಲ್‌ಮಿ ಟ್ಯಾಬ್ ಖರೀದಿಗೆ ದೊರೆಯಲಿದೆ. 
 

Realme Pad tablet launched in India and check details

ರಿಯಲ್‌ಮಿ ಪ್ಯಾಡ್ ಟ್ಯಾಬ್ಲೆಟ್ ಬಹಳಷ್ಟು ವಿಶೇಷತೆಗಳನ್ನು ಒಳಗೊಂಡಿವೆ. ಈ ಟ್ಯಾಬ್ ಆಂಡ್ರಾಯ್ಡ್ 11 ಮತ್ತು ಹೊಸ ರಿಯಲ್‌ಮಿ ಯುಐ ಆಧರಿತವಾಗಿದೆ. ಈ ಟ್ಯಾಬ್ 10.4 ಇಂಚ್ ಡಬ್ಲೂಯುಎಕ್ಸ್‌ಜಿಎ ಪ್ಲಸ್ ಪ್ರದರ್ಶಕವನ್ನು  ಹೊಂದಿದೆ. ಈ ಡಿಸ್‌ಪ್ಲೇ ಸ್ಕ್ರೀನ್ ಟು ಬಾಡಿ  ಅನುಪಾತವು 82:5ರಷ್ಟಿದೆ. ಜೊತೆಗೆ ಡಾರ್ಕ್ ಮೋಡ್ ಆಯ್ಕೆಯನ್ನು ಈ ಪ್ರದರ್ಶಕ ಹೊಂದಿದೆ.

ದೀಪಾವಳಿಗೆ ಜಿಯೋ ನೆಕ್ಸ್ಟ್ ಸ್ಮಾರ್ಟ್‌ಫೋನ್ ಲಾಂಚ್ ಪಕ್ಕಾ

4 ಜಿಬಿ ರ್ಯಾಮ್‌ನೊಂದಿಗೆ ಈ ಟ್ಯಾಬ್ ಮೀಡಿಯಾಟೆಕ್ ಹೆಲಿಯೋ ಜಿ80 ಪ್ರೊಸೆಸರ್‌ ಒಳಗೊಂಡಿದೆ. ಜೊತೆಗೆ 64 ಜಿಬಿ ಸ್ಟೋರೇಜ್ ಕೂಡ  ಸಿಗಲಿದೆ. ಈ ಟ್ಯಾಬ್‌ನಲ್ಲಿ ಕಂಪನಿಯು ಫ್ರಂಟ್‌ನಲ್ಲಿ 8 ಮೆಗಾ ಪಿಕ್ಸೆಲ್ ಮತ್ತು ಕ್ಯಾಮೆರಾ ನೀಡಿದೆ.

ರಿಯಲ್‌ಮಿ ಪ್ಯಾಡ್ ಡೈನಾಮಿಕ್ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದು ಡಾಲ್ಬಿ ಅಟ್ಮೋಸ್ ಮತ್ತು ಹೈ ರೆಸ್ ಆಡಿಯೋ ತಂತ್ರಜ್ಞಾನದ ಬೆಂಬಲವನ್ನು ಪಡೆದುಕೊಂಡಿದೆ. ವಿಡಿಯೋ ಕಾಲ್ಸ್ ಮತ್ತು ಆನ್‌ಲೈನ್ ಸಮಾವೇಶಗಳನ್ನು ಅಟೆಂಡ್ ಮಾಡುವಾಗ ನಾಯಿಸ್ ಕ್ಯಾನ್ಸಲೇಷನ್‌ಗಾಗಿ ಎರಡು ಮೈಕ್ರೋಫೋನ್‌ಗಳನ್ನೂ ನೀಡಲಾಗಿದೆ.

ರಿಯಲ್‌ಮಿ ತನ್ನ ಸ್ಮಾರ್ಟ್ ಕನೆಕ್ಟ್ ಫೀಚರ್ ಅನ್ನು ರಿಯಲ್‌ಮಿ ಪ್ಯಾಡ್‌ನಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಿದೆ, ಇದು ಟ್ಯಾಬ್ಲೆಟ್‌ ಅನ್ನು ಅನ್‌ಲಾಕ್ ಮಾಡಲು ಗ್ರಾಹಕರು ತಮ್ಮ ರಿಯಲ್‌ಮಿ ಬ್ಯಾಂಡ್ ಅಥವಾ ರಿಯಲ್‌ಮಿ ವಾಚ್ ಅನ್ನು ಬಳಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ತಮ್ಮ ರಿಯಲ್‌ಮಿ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ನಡುವೆ ಫೈಲ್‌ಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳಲು ಹತ್ತಿರದ ಶೇರ್ ವೈಶಿಷ್ಟ್ಯವಿದೆ. ರಿಯಲ್‌ಮಿ ಪ್ಯಾಡ್ ಓಪನ್-ಅಪ್ ಆಟೋ ಕನೆಕ್ಷನ್ ಫೀಚರ್ ಅನ್ನು ಹೊಂದಿದ್ದು, ಬಳಕೆದಾರರು ತಮ್ಮ ಇಯರ್‌ಬಡ್‌ಗಳನ್ನು ಟ್ಯಾಬ್ಲೆಟ್‌ನೊಂದಿಗೆ ಸಮೀಪದಲ್ಲಿ ಇರುವಾಗ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

App ಮೂಲಕ ಜಿಮೇಲ್ ಬಳಕೆದಾರರು ವಾಯ್ಸ್, ವಿಡಿಯೋ ಕಾಲ್ ಮಾಡಬಹುದು!

ರಿಯಲ್‌ಮಿ ಪ್ಯಾಡ್‌ನಲ್ಲಿ ಕಂಪನಿಯು 7,100 ಎಂಎಎಚ್  ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದೆ. ಇದು 18 ವ್ಯಾಟ್ ಕ್ವಿಕ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ವಿಶೇಷ ಎಂದರೆ, ಒಟಿಜಿ ಕೇಬಲ್ ಮೂಲಕ ರಿವರ್ಸ್ ಚಾರ್ಜಿಂಗ್‌ಗೂ ಇದು ಸಪೋರ್ಟ್ ಮಾಡುತ್ತದೆ. ಬ್ಯಾಟರಿ ದೃಷ್ಟಿಯಿಂದ ನೋಡಿದಾಗ ರಿಯಲ್‌ಮಿ ಪ್ಯಾಡ್ ಜಬರ್ದಸ್ತ್ ಆಗಿದೆ ಎಂದು ಹೇಳಬಹುದು.

Follow Us:
Download App:
  • android
  • ios