Asianet Suvarna News Asianet Suvarna News

Fact Check: ಭಾರತದಿಂದ ಆಕ್ಸಿಜನ್ ರಫ್ತು ಪ್ರಮಾಣ ಶೇ. 700 ರಷ್ಟು ಏರಿಕೆ ವರದಿ ಸುಳ್ಳು!

ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ಭಾರತದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜಿನ್ ಸಿಗದೆ ಸೋಂಕಿತರು ನರಳಾಡುತ್ತಿದ್ದಾರೆ. ಇದರ ನಡುವೆ ಭಾರತ ಶೇಕಡಾ 700 ರಷ್ಟು ಆಕ್ಸಿಜನ್ ವಿದೇಶಕ್ಕೆ ರಫ್ತು ಮಾಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಇದು ಭಾರಿ ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತೆಯನ್ನು ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೋ(PIB) ಬಯಲು ಮಾಡಿದೆ.

Fact Check India exporting medical oxygen during pandemic year is absolutely fake news ckm
Author
Bengaluru, First Published Apr 21, 2021, 3:24 PM IST

ನವದೆಹಲಿ(ಏ.21): ಕೊರೋನಾ ವೈರಸ್ ಭೀತಿ, ಆಸ್ಪತ್ರೆಯಲ್ಲಿ ಬೆಡ್ ಸಮಸ್ಯೆ , ಚಿಕಿತ್ಸೆ, ಖರ್ಚು ವೆಚ್ಚ ಸೇರಿದಂತೆ ದೇಶದ ಜನತೆ ಹಲವು ಆತಂಕ ಎದುರಿಸುತ್ತಿದ್ದಾರೆ. ಇದರ ನಡುವೆ ಕೆಲ ಸುಳ್ಳು ಸುದ್ದಿಗಳು ಜನರನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡುತ್ತಿದೆ. ಭಾರತವೇ ಕೊರೋನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜಿನ್ ಕೊರತೆ ಎದುರಿಸುತ್ತಿದೆ. ಇದರ ನಡುವೆ ವಿದೇಶಕ್ಕೆ ಶೇಕಡಾ 700ರಷ್ಟು ಆಕ್ಸಿನ್ ಭಾರತ ರಫ್ತು ಮಾಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಆದರೆ ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು  PIB ಸ್ಪಷ್ಟಪಡಿಸಿದೆ.

Fact Check: ಭಾರತದಲ್ಲಿ ಲಾಕ್‌ಡೌನ್ ಜಾರಿ ಸುದ್ದಿ ಸುಳ್ಳು

2020-21 ಅವಧಿಯಲ್ಲಿ ಭಾರತ ಕೊರೋನಾ ವೈರಸ್ ಸಂಕಷ್ಟ ಎದುರಿಸುತ್ತಿದೆ.  ಈ ಅವಧಿಯಲ್ಲಿ ಭಾರತದ ಆಮ್ಲಜನಕವನ್ನು ರಫ್ತು ಮಾಡಿಲ್ಲ. ಈ ಕರಿತು ಹರಿದಾಡುತ್ತಿರುವ ಸುದ್ದಿ ದುರುದ್ದೇಶಪೂರಿತವಾಗಿದ್ದು, ಅಪಪ್ರಚಾರ ಮಾಡಲಾಗುತ್ತಿದೆ. ಕೈಗಾರಿಕಾ ಆಮ್ಲಜನಕವನ್ನು ವೈದ್ಯಕೀಯ ಆಮ್ಲಜನಕ ಎಂದು ತಪ್ಪಾಗಿ ಗ್ರಹಿಸಿ ಈ ರೀತಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಪಿಐಬಿ ಹೇಳಿದೆ.

 

ಆಮ್ಲಜನರ ರಫ್ತುಗಳಲ್ಲಿ ಎರಡು ವಿಧಗಳಿವೆ, ಒಂದು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಾಗೂ ಇನ್ನೊಂದು ಕೈಗಾರಿಕಾ ಆಕ್ಸಿಜನ್. 2020-21ರ ಅವದಿಯಲ್ಲಿ ಭಾರತ  9884 ಮೆಟ್ರಿಕ್ ಟನ್ ಕೈಗಾರಿಕಾ ಆಮ್ಲಜನಕವನ್ನು ರಫ್ತು ಮಾಡಿದರೆ, ಕೇವಲ 12 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ರಫ್ತು ಮಾಡಿದೆ.  ಇನ್ನು ವಾರ್ಷಿಕ ರಫ್ತು ಭಾರತದ ಒಟ್ಟು ವಾರ್ಷಿಕ ಉತ್ಪಾದನಾ ಸಾಮರ್ಥ್ಯದ 0.4% ಕ್ಕಿಂತ ಕಡಿಮೆಯಿದೆ  ಎಂದು PIB ಸ್ಪಷ್ಪಡಿಸಿದೆ.

ಕೊರೋನಾ ವಿರುದ್ಧ ಹೋರಾಟಕ್ಕೆ ಟಾಟಾ ನೆರವು; ಚಿಕಿತ್ಸೆಗೆ 300 ಟನ್ ಆಕ್ಸಿಜನ್ ಪೂರೈಕೆ!

Follow Us:
Download App:
  • android
  • ios