Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಕರ್ನಾಟಕದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ...

ಲೋಕಸಭಾ ಚುನಾವಣೆ 2024 ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ... ಈವರೆಗೆ ಜೆಡಿಎಸ್‌ ತನ್ನ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ..

Lok Sabha Elections 2024 Karnataka BJP Congress and JDS Candidates list details Here sat
Author
First Published Mar 29, 2024, 2:23 PM IST

ಬೆಂಗಳೂರು ಮಾ(29): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವೇರಿದ್ದು, ಈಗಾಗಲೇ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸ್ಪರ್ಧೆ ಮಾಡುವ 25 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್‌ ಈವರೆಗೆ 24 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 4 ಕ್ಷೇತ್ರಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ 3 ಕ್ಷೇತ್ರಗಳನ್ನು ಪಡೆದುಕೊಂಡಿದ್ದು, ಈವರೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ದೇಶದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ- ಕಾಂಗ್ರೆಸ್‌ ದೇಶದ ಲೋಕಸಭೆಯಲ್ಲಿ ಅಧಿಕಾರ ಹಿಡಿಯಲು ಭಾರಿ ಕಸರತ್ತು ನಡೆಸುತ್ತಿವೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕಾರ ಕಿತ್ತುಕೊಳ್ಳಲು ಕಾಂಗ್ರೆಸ್‌ 'ಇಂಡಿಯಾ ಮೈತ್ರಿಕೂಟ' ಕಟ್ಟಿಕೊಂಡು ಕಾಳಗಕ್ಕಿಳಿದಿದೆ. ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಬಹುತೇಕ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿವೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ...

India Gate: ಸದಾ ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಯಾಕೆ?: ಪ್ರಶಾಂತ್‌ ನಾತು

ಕರ್ನಾಟಕ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:

  1. ಬಿಜಾಪುರ- ರಮೇಶ್ ಜಿಗಜಿಣಗಿ
  2. ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆ
  3. ಬಾಗಲಕೋಟೆ- ಪಿ.ಸಿ. ಗದ್ದಿಗೌಡರ
  4. ಕಲಬುರಗಿ- ಉಮೇಶ್ ಜಾಧವ್
  5. ಬೀದರ್- ಭಗವಂತ ಖೂಬಾ
  6. ಕೊಪ್ಪಳ- ಡಾ. ಬಸವರಾಜ ಕ್ಯಾವತೋರ್
  7. ಬಳ್ಳಾರಿ- ಶ್ರೀರಾಮುಲು
  8. ಹಾವೇರಿ- ಬಸವರಾಜ ಬೊಮ್ಮಾಯಿ
  9. ಧಾರವಾಡ- ಪ್ರಹ್ಲಾದ್ ಜೋಶಿ
  10. ದಾವಣಗೆರೆ- ಗಾಯತ್ರಿ ಸಿದ್ದೇಶ್ವರ
  11. ಶಿವಮೊಗ್ಗ- ಬಿ.ವೈ. ರಾಘವೇಂದ್ರ
  12. ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
  13. ದಕ್ಷಿಣ ಕನ್ನಡ - ಕ್ಯಾ.ಬ್ರಿಜೇಶ್ ಚೌಟಾ
  14. ತುಮಕೂರು - ವಿ. ಸೋಮಣ್ಣ
  15. ಮೈಸೂರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
  16. ಚಾಮರಾಜನಗರ- ಎಸ್. ಬಸವರಾಜು
  17. ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್. ಮಂಜುನಾಥ್
  18. ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
  19. ಬೆಂಗಳೂರು ಕೇಂದ್ರ - ಪಿ.ಸಿ. ಮೋಹನ್
  20. ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
  21. ಬೆಳಗಾವಿ- ಜಗದೀಶ್ ಶೆಟ್ಟರ್ 
  22. ಚಿಕ್ಕಬಳ್ಳಾಪುರ- ಡಾ. ಸುಧಾಕರ್‌
  23. ರಾಯಚೂರು - ರಾಜಾ ಅಮರೇ ನಾಯಕ್
  24. ಉತ್ತರ ಕನ್ನಡ - ವಿಶ್ವಶ್ವರ ಹೆಗೆಡೆ ಕಾಗೇರಿ
  25. ಚಿತ್ರದುರ್ಗ - ಗೋವಿಂದ ಕಾರಜೋಳ

ಬಿಜೆಪಿ ಮೈತ್ರಿ ಪಕ್ಷ ಜೆಡಿಎಸ್ (ಸಂಭಾವ್ಯ) ಅಭ್ಯರ್ಥಿಗಳು

  • 26. ಹಾಸನ - ಪ್ರಜ್ವಲ್ ರೇವಣ್ಣ
  • 27. ಮಂಡ್ಯ - ಹೆಚ್.ಡಿ. ಕುಮಾರಸ್ವಾಮಿ
  • 28. ಕೋಲಾರ - ಮಲ್ಲೇಶ್ ಬಾಬು

ದೆಹಲಿ ಹೈಕೋರ್ಟ್‌ ಅರ್ಜಿ ತಿರಸ್ಕರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ಗೆ 1700 ಕೋಟಿ ರೂಪಾಯಿ ಐಟಿ ನೋಟಿಸ್‌!

ಕಾಂಗ್ರೆಸ್ ಈವರೆಗೆ ಘೋಷಣೆ ಮಾಡಿರುವ ರಾಜ್ಯದ 24 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು:

1. ಬಿಜಾಪುರ-ರಾಜು ಅಲಗೋರ್‌
2. ಹಾವೇರಿ- ಅನಂದ್‌ಸ್ವಾಮಿ ಗಡ್ಡೇವರ ಮಠ
3. ತುಮಕೂರು-  ಎಸ್‌.ಪಿ. ಮುದ್ದಹನುಮೇಗೌಡ
4. ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್‌ ಚಂದ್ರು)
5. ಬೆಂಗಳೂರು ಗ್ರಾಮಾಂತರ- ಡಿ.ಕೆ. ಸುರೇಶ್‌
6. ಶಿವಮೊಗ್ಗ- ಗೀತಾ ಶಿವರಾಜ್‌ಕುಮಾರ್‌
7. ಹಾಸನ - ಶ್ರೇಯಸ್‌ ಪಟೇಲ್‌
8. ಬೆಳಗಾವಿ - ಮೃಣಾಲ್ ಹೆಬ್ಬಾಳಕರ್
9. ಬಾಗಲಕೋಟೆ- ಸಂಯುಕ್ತ ಪಾಟೀಲ್
10. ಕಲಬುರಗಿ - ಡಾ. ರಾಧಾಕೃಷ್ಣ ದೊಡ್ಡಮನಿ
11. ರಾಯಚೂರು- ಕುಮಾರ್ ನಾಯ್ಕ್
12. ಬೀದರ್ - ಸಾಗರ್ ಖಂಡ್ರೆ
13. ಕೊಪ್ಪಳ - ರಾಜಶೇಖರ್ ಹಿಟ್ನಾಳ್
14. ಧಾರವಾಡ - ವಿನೋದ್ ಅಸೂಟಿ
15. ದಾವಣಗೆರೆ - ಪ್ರಭಾವತಿ ಮಲ್ಲಿಕಾರ್ಜುನ್
16. ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ
17. ದಕ್ಷಿಣ ಕನ್ನಡ - ಪದ್ಮರಾಜ್
18. ಮೈಸೂರು-ಕೊಡಗು - ಎಂ. ಲಕ್ಷ್ಮಣ್
19. ಬೆಂಗಳೂರು ಉತ್ತರ - ಪ್ರೊ.‌ರಾಜೀವ್ ಗೌಡ
20. ಬೆಂಗಳೂರು ಕೇಂದ್ರ - ಮನ್ಸೂರ್ ಖಾನ್
21. ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ
22. ಉತ್ತರ ಕನ್ನಡ -  ಅಂಜಲಿ‌ ನಿಂಬಾಳ್ಕರ್
23. ಚಿತ್ರದುರ್ಗ - ಬಿಎನ್ ಚಂದ್ರಪ್ಪ
24. ಚಿಕ್ಕೋಡಿ- ಪ್ರಿಯಾಂಕ ಜಾರಕಿಹೊಳಿ

ಬಾಕಿ ಇರುವ ಕ್ಷೇತ್ರಗಳು
25. ಚಿಕ್ಕಬಳ್ಳಾಪುರ-
26. ಕೋಲಾರ-
27. ಚಾಮರಾಜನಗರ-
28. ಬಳ್ಳಾರಿ-

Follow Us:
Download App:
  • android
  • ios