Asianet Suvarna News Asianet Suvarna News

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ..!

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ 36 ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ ಹಾಗೂ ಯುಕೆಜಿಯ ತರಗತಿಗಳು ಹಾಗೂ 31 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು ಪ್ರಕಾರ ಆರಂಭಗೊಳ್ಳುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿದರೆ ಗುಣಮಟ್ಟ ಶಿಕ್ಷಣ ದೊರೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.

LKG UKG Start in Government Schools at Kushtagi in Koppal grg
Author
First Published May 19, 2024, 5:00 AM IST

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ(ಮೇ.19): ಸರ್ಕಾರವು ಈ ವರ್ಷ ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿಯ ಹಾಗೂ ದ್ವಿಭಾಷಾ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ತರಗತಿಗಳನ್ನು ನಡೆಸಲು ಮುಂದಾಗಿದ್ದು, ಈ ನಿಲುವು ಪಾಲಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನ 36 ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ ಹಾಗೂ ಯುಕೆಜಿಯ ತರಗತಿಗಳು ಹಾಗೂ 31 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು ಪ್ರಕಾರ ಆರಂಭಗೊಳ್ಳುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿದರೆ ಗುಣಮಟ್ಟ ಶಿಕ್ಷಣ ದೊರೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.

'ನಿಮ್ಮ ಮೋದಿಗೆ ಕನ್ನಡ ಬರುತ್ತಾ ಮೊದಲು ತಿಳ್ಕೊಳ್ಳಿ..' ಟ್ರೋಲ್ ಮಾಡಿದವರಿಗೆ ಮಧು ಬಂಗಾರಪ್ಪ ತಿರುಗೇಟು

ಶುಲ್ಕರಹಿತ ಶಿಕ್ಷಣ:

ಈ ಯೋಜನೆಯಡಿಯಲ್ಲಿ ಆರಂಭ ಮಾಡಲಾಗುತ್ತಿರುವ ತರಗತಿಗಳಲ್ಲಿ ಖಾಸಗಿ ಶಾಲೆಗಿಂತಲೂ ವಿಭಿನ್ನವಾಗಿ ಶಿಕ್ಷಣ ದೊರೆಯುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಇಲ್ಲಿ ದಾಖಲು ಮಾಡುವುದರಿಂದ ಸಾವಿರಾರು ರುಪಾಯಿಗಳ ಶುಲ್ಕವನ್ನು ಉಳಿಸಬಹುದು ಹಾಗೂ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ. ಇಲ್ಲಿ ಶುಲ್ಕರಹಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುತ್ತದೆ.

ಮೇ 29ರೊಳಗೆ ಸಿದ್ಧತೆ

ಅರ್ಹ ಶಾಲೆಗಳಲ್ಲಿ ಹೊಸ ತರಗತಿಗಳನ್ನು ಪ್ರಾರಂಭಿಸಲು 2024-25ನೇ ಶೈಕ್ಷಣಿಕ ಸಾಲಿನ ಆರಂಭಿಕ ದಿನಾಂಕವಾದ ಮೇ 29ರ ಒಳಗಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ತಾಲೂಕಿನ 36 ಪ್ರಾಥಮಿಕ ಶಾಲೆಗಳಲ್ಲಿ (ಇಸಿಸಿಇ) ದ್ವಿಭಾಷಾ ಹಾಗೂ ಎನ್ಎಸ್‌ಕ್ಯೂಎಫ್‌ ತರಗತಿಗಳನ್ನು ಪ್ರಾರಂಭಿಸಲು ಅರ್ಹತೆ ಹೊಂದಿರುತ್ತವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ರಿಸಲ್ಟ್‌ ಇಲ್ಲದೆ 5, 8, 9ನೇ ಕ್ಲಾಸ್‌ ಮಕ್ಕಳು ಅತಂತ್ರ..!

ಈ ತರಗತಿಗಳನ್ನು ಆರಂಭಿಸುವ ಶಾಲೆಗಳಿಗೆ ಅತಿಥಿ ಶಿಕ್ಷಕರು, ಒಬ್ಬ ಸಹಾಯಕಿ (ಆಯಾ) ಇರುತ್ತಾರೆ. (ಇಸಿಸಿಇ) ತರಗತಿಗಳನ್ನು ಪ್ರಾರಂಭಿಸಲು ನೇಮಕಗೊಂಡ ಅತಿಥಿ ಶಿಕ್ಷಕರಿಗೆ ಅಜೀಂ ಪ್ರೇಮಜಿ ಫೌಂಡೇಶನ್ ಹಾಗೂ ರಾಕೆಟ್ ಲರ್ನಿಂಗ್ ಫೌಂಡೇಶನ್ ಸಹಯೋಗದೊಂದಿಗೆ ಡಯಟ್ ಪ್ರಾಂಶುಪಾಲರ ಮೇಲುಸ್ತುವಾರಿಯಲ್ಲಿ ತರಬೇತಿ ನಡೆಯಲಿದೆ.

ಸೌಲಭ್ಯಗಳು:

ಎಲ್‌ಕೆಜಿ, ಯುಕೆಜಿಯ ತರಗತಿ ಪ್ರಾರಂಭಿಸಲು ಕೊಠಡಿ ವ್ಯವಸ್ಥೆ ಸಮೇತ ಬಾಲ ವೈಶಿಷ್ಟ್ಯಗಳು, ತರಗತಿ ಕೊಠಡಿ ಗೋಡೆ ಬರಹ -ಮಕ್ಕಳಿಗೆ ಆಕರ್ಷಣೀಯ ಕಾರ್ಟೂನ್ ಪಾತ್ರಗಳು, ಬಣ್ಣಗಳು, ಪ್ರಾಣಿಗಳು, ತರಕಾರಿ-ಹಣ್ಣುಗಳು ಇತ್ಯಾದಿ. ಮಗು ಸ್ನೇಹಿ ಪೀಠೋಪಕರಣಗಳು, ಆಟ ಮತ್ತು ಕಲಿಯುವ ಮೂಲೆಗಳು (ಪೂರ್ವ ಸಾಕ್ಷರತಾ ಆಟಿಕೆಗಳು), ಪೂರ್ವ ಸಂಖ್ಯಾಜ್ಞಾನ ಆಟಿಕೆಗಳು, ಬಿಲ್ಡಿಂಗ್ ಬ್ಲಾಕ್ಸ್, ಪಜಲ್ಸ್, ಪುಸ್ತಕಗಳು, ಕಾರ್ಡುಗಳು, ಹೊರಾಂಗಣ ಆಟದ ಪರಿಕರಗಳು, ಮರಳುಗುಂಡಿ ಇನ್ನಿತರ ಅಗತ್ಯ ಸೌಕರ್ಯಗಳು ಒಳಗೊಂಡಿರುತ್ತವೆ.

ಆಯ್ಕೆಯಾದ ಶಾಲೆಗಳು:

ಕುಷ್ಟಗಿ ತಾಲೂಕಿನಲ್ಲಿ ಸುಮಾರು 36 ಶಾಲೆಗಳು ತರಗತಿಗಳನ್ನು ನಡೆಸಲು ಆಯ್ಕೆಯಾಗಿದ್ದು, ಅದರಲ್ಲಿ ಸರ್ಕಾರಿ ಶಾಲೆಗಳಾದ ಚಳಗೇರಾ, ದೋಟಿಹಾಳ, ಗರ್ಜನಾಳ, ಗೋತಗಿ, ಹಾಬಲಕಟ್ಟಿ, ಕುರುಬಗೇರಾ, ಹನುಮಸಾಗರ, ಹಿರೇಗೊಣ್ಣಾಗರ, ಹಿರೇಮನ್ನಾಪುರ, ಹಿರೇನಂದಿಹಾಳ, ಹುಲಿಯಾಪುರ, ಜಾಗೀರಗುಡೂರು, ಕಬ್ಬರಗಿ, ಕಲಾಬಂಡಿ, ಕೊರಡಕೇರಿ, ಕುಂಬಳಾವತಿ, ಬಾಲಕಿಯರ ಶಾಲೆ ಕುಷ್ಟಗಿ, ಲಿಂಗದಳ್ಳಿ, ಮಾಲಗಿತ್ತಿ, ಮನ್ನೇರಾಳ, ನಿಡಶೇಸಿ, ನಿಲೋಗಲ್, ಶಾಖಾಪುರ ತುಗ್ಗಲಡೋಣಿ, ವಣಗೇರಿ, ಯಲಬುಣಚಿ, ಆರ್‌ಎಂಎಸ್‌ಎ ಅಡವಿಭಾವಿ, ಬೆನಕನಾಳ, ಬಿಜಕಲ್, ಹಿರೇಬನ್ನಿಗೋಳ, ಕಂದಕೂರ, ಕಾಟಾಪುರ, ಕಡೇಕೊಪ್ಪ ಮೇಣೆಧಾಳ, ಮಿಟ್ಟಲಕೋಡ, ಆರ್.ಎಂ.ಎಸ್.ಎ. ಶಾಲೆ ಮೂಗನೂರು, ಯರಗೇರಾ ಸೇರಿದಂತೆ ವಿವಿಧ ಒಟ್ಟು 36 ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಗೊಳ್ಳಲಿವೆ.

ಈ ಶೈಕ್ಷಣಿಕ ವರ್ಷದಿಂದ ತಾಲೂಕಿನ 36 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಗೊಳ್ಳಲಿದೆ ಹಾಗೂ 31 ಶಾಲೆಗಳಲ್ಲಿ ತರಗತಿಗಳು ದ್ವಿಭಾಷಕ ಆರಂಭಗೊಳ್ಳಲಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಕುಷ್ಟಗಿ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios