Asianet Suvarna News Asianet Suvarna News

Mahindra Truck ಗರಿಷ್ಠ ಮೈಲೇಜ್, ಸಿಗದಿದ್ದರೆ ಟ್ರಕ್ ಮರಳಿಸಿ, ವಿಶೇಷ ಕೊಡುಗೆ ಘೋಷಿಸಿದ ಮಹೀಂದ್ರ!

  • ಗ್ರಾಹಕರ ವಿಶ್ವಾಸವೇ ನಮಗೆ ಮುಖ್ಯ, ಯಾವುದೇ ಬಣ್ಣದ ಮಾತುಗಳಿಲ್ಲ
  • ನಿಗದಿಪಡಿಸಿದ ಮೈಲೇಜ್ ಸಿಗದಿದ್ದರೆ ಟ್ರಕ್ ಮರಳಿಸಲು ಅವಕಾಶ
  • ಭರ್ಜರಿ ಆಫರ್ ಘೋಷಿಸಿದ ಮಹೀಂದ್ರ ಟ್ರಕ್ ಹಾಗೂ ಬಸ್ ವಿಭಾಗ
Mahindra announces Guarantee mileage range offers Get Highest Mileage or Give Truck Back ckm
Author
Bengaluru, First Published Jan 17, 2022, 8:37 PM IST

ಮುಂಬೈ(ಜ.17):  ಮಹೀಂದ್ರ ಟ್ರಕ್ ಹಾಗೂ ಬಸ್ ವಿಭಾಗ (MTB) ಇದೀಗ ಹೊಸ ಆಫರ್ ಘೋಷಿಸಿದೆ. ಈ ಆಫರ್(Offer) ಮೂಲಕ ಟ್ರಕ್ ಖರೀದಿಸಿದರೆ ನಿಗದಿಪಡಿಸಿದ ಮೈಲೇಜ್(Mileage) ಸಿಗಿದಿದ್ದರೆ ಟ್ರಕ್ ಮರಳಿಸುವ ಅವಕಾಶವನ್ನ ನೀಡಿದೆ. ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಮಹೀಂದ್ರಾದ(Mahindra) ಟ್ರಕ್ ಮತ್ತು ಬಸ್ ವಿಭಾಗ (ಎಂಟಿಬಿ) ತನ್ನೆಲ್ಲBS6 ಶ್ರೇಣಿಯ ಬ್ಲೇಜೊ ಎಕ್ಸ್ ಹೆವಿ (BLAZO X Heavy), ಫುರಿಯೊ ಇಂಟರ್‌ಮೀಡಿಯೇಟ್ (FURIO Intermediate) ಮತ್ತು ಫುರಿಯೊ 07 (FURIO7) ಹಾಗೂ ಜಯೊ (JAYO) ಒಳಗೊಂಡಂತೆ ಲಘು ವಾಣಿಜ್ಯ ಟ್ರಕ್‌ಗಳಿಗಾಗಿ ‘ಹೆಚ್ಚು ಮೈಲೇಜ್ ಪಡೆಯಿರಿ ಅಥವಾ ಟ್ರಕ್ ಹಿಂತಿರುಗಿಸಿ’ ವಿಶಿಷ್ಟ ಕೊಡುಗೆ ಪ್ರಕಟಿಸಿದೆ.

7.2 ಎಲ್ ಎಂಪವರ್ ಎಂಜಿನ್ (HCV), MDI ಟೆಕ್ ಎಂಜಿನ್ (ILCV) ಜೊತೆಗೆ ಫ್ಯುಯೆಲ್‌ಸ್ಮಾರ್ಟ್ ಟೆಕ್ನಾಲಜಿ, ಮೈಲ್ಡ್ EGR ಜೊತೆಗೆ, ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಬಾಷ್ ಆಫ್ಟರ್ ಟ್ರೀಟ್‌ಮೆಂಟ್ ಸಿಸ್ಟಮ್‌ ಹೊಂದಿದೆ.   ಇವುಗಳ ಜೊತೆಗೆ ಸೇರಿಕೊಂಡಿರುವ ಅತ್ಯಾಧುನಿಕ ಐಮ್ಯಾಕ್ಸ್ (iMAXX) ಟೆಲಿಮ್ಯಾಟಿಕ್ಸ್ ಸೌಲಭ್ಯವು ಹೆಚ್ಚುವರಿ ಮೈಲೇಜ್‌ನ ಖಾತರಿ ನೀಡುತ್ತವೆ. ಸರಕು ಸಾಗಣೆ ನಿರ್ವಹಣಾ ವೆಚ್ಚದಲ್ಲಿ ಇಂಧನ ವೆಚ್ಚದ ಪಾಲು (ಶೇ 60ಕ್ಕಿಂತ ಹೆಚ್ಚು) ಹೆಚ್ಚಿಗೆ ಇರುವುದರಿಂದ ಮಹೀಂದ್ರಾದ BS6 ಟ್ರಕ್ ಶ್ರೇಣಿಯು ಈ ಸ್ಪರ್ಧಾತ್ಮಕ ಅನುಕೂಲತೆಯೊಂದಿಗೆ ಹೆಚ್ಚುವರಿ ಪ್ರಯೋಜನ ಒದಗಿಸುವುದರ ಜೊತೆಗೆ, ಸಂಪೂರ್ಣ ಮನಃಶಾಂತಿ ಒದಗಿಸುತ್ತದೆ. ಸರಕು ಸಾಗಣೆ ವಹಿವಾಟು ಹೆಚ್ಚಿಸಲು ನೆರವಾಗಿ ಗರಿಷ್ಠ ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

Nairobi Police Car ಕೀನ್ಯಾ ಪೊಲೀಸರ ಸೇವೆಗೆ ಮಹೀಂದ್ರ ಸ್ಕಾರ್ಪಿಯೋ, ಸಂತಸ ಹಂಚಿಕೊಂಡ ಆನಂದ್ ಮಹೀಂದ್ರ!

ವಿವಿಧ ಶ್ರೇಣಿಯ ಟ್ರಕ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚು ಮೈಲೇಜ್ ಪಡೆಯಿರಿ ಅಥವಾ ಟ್ರಕ್ ಹಿಂತಿರುಗಿಸಿ' ಖಾತರಿಯು ಲಘು, ಮಧ್ಯಂತರ ಮತ್ತು ಭಾರಿ ಸರಕು ಸಾಗಣೆ ವಾಹನಗಳ ಉದ್ದಿಮೆಯಲ್ಲಿಯೇ ಐತಿಹಾಸಿಕ ಉಪಕ್ರಮವಾಗಿದೆ. ಇಂಧನ ಬೆಲೆಗಳು ಏರುಗತಿಯಲ್ಲಿಯೇ ಇರುವ ಸದ್ಯದ ಸಂದರ್ಭದಲ್ಲಿ, ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಒದಗಿಸುವ ಈ ಸೌಲಭ್ಯ  ಪರಿಚಯಿಸುವುದಕ್ಕೆ ಇದಕ್ಕಿಂತ ಉತ್ತಮ ಸಮಯ ಇರಲಿಲ್ಲ. ತಾಂತ್ರಿಕವಾಗಿ ಸುಧಾರಿತ, ಈ ವಿಭಾಗದಲ್ಲಿಯೇ ಮುಂಚೂಣಿಯಲ್ಲಿ ಇರುವ ಉತ್ಪನ್ನಗಳು ಮತ್ತು ಭಾರತದ ವಾಣಿಜ್ಯ ವಾಹನಗಳ ಉದ್ದಿಮೆಯಲ್ಲಿ ಗರಿಷ್ಠ ಮಟ್ಟದ ಮಾನದಂಡಗಳನ್ನು ನಿಗದಿಪಡಿಸುವ ಮಹೀಂದ್ರಾದ ಸಾಮರ್ಥ್ಯದ ಬಗ್ಗೆ ಗ್ರಾಹಕರು ಹೊಂದಿರುವ ನಂಬಿಕೆಯನ್ನು ಪುನರುಚ್ಚರಿಸುತ್ತದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ ಎಂದು  ಮಹೀಂದ್ರಾ ಲಿಮಿಟೆಡ್‌ನ ಆಟೊಮೋಟಿವ್ ವಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ನಕ್ರಾ  ಹೇಳಿದ್ದಾರೆ.

Mahindra Electric Vehicles ಹೊಸ ವರ್ಷಕ್ಕೆ ಮಹೀಂದ್ರ ಬಂಪರ್ ಗಿಫ್ಟ್, 6 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ತಯಾರಿ!

 ಮೈಲೇಜ್ ಖಾತರಿ, 'ಹೆಚ್ಚು ಮೈಲೇಜ್ ಪಡೆಯಿರಿ ಅಥವಾ ಟ್ರಕ್ ಹಿಂತಿರುಗಿಸಿ' ಸೌಲಭ್ಯವನ್ನು ನಾವು  ಮೊದಲು ನಮ್ಮ ಎಚ್‌ಸಿವಿ ಟ್ರಕ್ ಬ್ಲಾಜೊನಲ್ಲಿ (HCV truck BLAZO  ) 2016 ರಲ್ಲಿ ಪರಿಚಯಿಸಿದ್ದೆವು. ಒಂದೇ ಒಂದು ಟ್ರಕ್ ಮರಳಿ ಬಂದಿಲ್ಲ. ಅಲ್ಲಿಂದಾಚೆಗೆ ನಾವು ಪರಿಚಯಿಸಿದ ಎಲ್ಲ ಹೊಸ ವಾಹನಗಳಾದ ಬ್ಲಾಜೊ ಎಕ್ಸ್ (BLAZO X) ಫುರಿಯೊ ಐಸಿವಿ (FURIO ICV ) ಶ್ರೇಣಿ ಮತ್ತು ಫುರಿಯೊ ೭ (FURIO 7) ಹೆಚ್ಚಿನ ಇಂಧನ ದಕ್ಷತೆ ನೀಡುತ್ತಿವೆ. ಇದು ಭಾರತದ ಗ್ರಾಹಕರನ್ನು ಆಳವಾಗಿ ತಿಳಿದುಕೊಂಡಿರುವುದರ ಮಹೀಂದ್ರಾದ ಉನ್ನತ ತಾಂತ್ರಿಕ ಪರಿಣತಿಯ ಫಲವಾಗಿದೆ. ವಾಹನವು ಹೆದ್ದಾರಿಯಲ್ಲಿರಲಿ ಅಥವಾ ಡೀಲರ್‌ಶಿಪ್ ಕಾರ್ಯಾಗಾರದಲ್ಲಿ ಇರಲಿ, ‘ಎಂಟಿಬಿ’ಯು ನಮ್ಮ ಗ್ರಾಹಕರಿಗೆ ಸರ್ವಿಸ್ ಖಾತರಿ ನೀಡುತ್ತದೆ. ಅತ್ಯಾಧುನಿಕ ಐಮ್ಯಾಕ್ಸ್ (iMAXX) ಟೆಲಿಮ್ಯಾಟಿಕ್ಸ್ ತಂತ್ರಜ್ಞಾನದ ನೆರವಿನಿಂದ ಮಾಲೀಕರು ತಮ್ಮ ಟ್ರಕ್‌ಗಳ ಮೇಲೆ ದೂರದಿಂದಲೇ ನಿಗಾ ಇರಿಸುವುದರ ಮೂಲಕ ನಿರ್ವಹಣಾ ವೆಚ್ಚ ಕಡಿಮೆ ಮಾಡಲು ನೆರವಾಗುತ್ತದೆ. ಈ ಎಲ್ಲ ಸೌಲಭ್ಯಗಳು ಮತ್ತು ಖಾತರಿಪಡಿಸಿದ ಹೆಚ್ಚಿನ ಮೈಲೇಜ್ ಅಂತಿಮವಾಗಿ ನಮ್ಮ ಗ್ರಾಹಕರಿಗೆ ಹೆಚ್ಚಿನ ಸಮೃದ್ಧಿ ತಂದುಕೊಡುತ್ತವೆ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್‌ನ ವಾಣಿಜ್ಯ ವಾಹನ ವ್ಯವಹಾರ ವಿಭಾಗದ ಮುಖ್ಯಸ್ಥ ಜಲಜ್ ಗುಪ್ತಾ ಹೇಳಿದ್ದಾರೆ.

ಗ್ರಾಹಕರಿಗೆ ಬಹುಬಗೆಯಲ್ಲಿ ಲಾಭದಾಯಕವಾಗಿರುವ ಈ ಉಪಕ್ರಮವು, ಕಂಪನಿಗೆ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಪ್ರಮುಖ ಸ್ಥಾನ ಒದಗಿಸಿಕೊಡಲಿದೆ ಎನ್ನುವುದು ಕಂಪನಿಯ ನಂಬಿಕೆಯಾಗಿದೆ. ಈ ಮೈಲೇಜ್ ಖಾತರಿಯು ಕೆಲ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. 
 

Follow Us:
Download App:
  • android
  • ios