Asianet Suvarna News Asianet Suvarna News

ಕುಳಿತು ನಿಂತು ಬೋರಾಗ್ತಿದ್ಯಾ: ಹಾಗಿದ್ರೆ ಈ ಮಂಚದ ಮೇಲೆ ಮಲ್ಕೊಂಡೇ ಊರು ಸುತ್ತಿ

ಮನುಷ್ಯನಿಗೆ ಸವಲತ್ತು ಎಷ್ಟು ಇದ್ದರೂ ಸಾಲದು. ತಂತ್ರಜ್ಞಾನಗಳು ಮನುಷ್ಯನ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡಿವೆ. ಚಾಪೆ ಮೇಲೆ ಮಲಗುತ್ತಿದ್ದವರು ಇಂದು ಐಷಾರಾಮಿ ಬೆಡ್‌ಗಳ ಮೊರೆ ಹೋಗಿದ್ದಾರೆ.

A man from Yunnan in China has built a battery operated bed with wheels akb
Author
China, First Published Jun 27, 2022, 3:13 PM IST

ಯುನಾನ್‌: ಮನುಷ್ಯನಿಗೆ ಸವಲತ್ತು ಎಷ್ಟು ಇದ್ದರೂ ಸಾಲದು. ತಂತ್ರಜ್ಞಾನಗಳು ಮನುಷ್ಯನ ಕೆಲಸವನ್ನು ಅರ್ಧದಷ್ಟು ಕಡಿಮೆ ಮಾಡಿವೆ. ಚಾಪೆ ಮೇಲೆ ಮಲಗುತ್ತಿದ್ದವರು ಇಂದು ಐಷಾರಾಮಿ ಬೆಡ್‌ಗಳ ಮೊರೆ ಹೋಗಿದ್ದಾರೆ. ಅದಾಗ್ಯೂ ಎಲ್ಲದರಲ್ಲೂ ಇನ್ನಷ್ಟು ಸುಖ ಹುಡುಕುವ ಬಯಕೆ ಮನುಷ್ಯನಿಗೆ. ಅಗತ್ಯಗಳು ಆವಿಷ್ಕಾರಕ್ಕೆ ಕಾರಣವಾಗುತ್ತವೆ ಎಂಬಂತೆ ಈಗ ಚೀನಾದ ಯುವಕನೋರ್ವ ಚಕ್ರಗಳಿರುವ ಬ್ಯಾಟರಿಯಿಂದ ಕಾರ್ಯ ನಿರ್ವಹಿಸಬಲ್ಲ ಬೆಡ್ಡೊಂದನ್ನು ನಿರ್ಮಿಸಿದ್ದು, ಇದು ನಿಮ್ಮನ್ನು ಮಲಗಿರುವಾಗಲೇ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಲ್ಲದು. ಮಲಗಿಕೊಂಡೆ  ನೀವು ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. 

ನಿದ್ದೆಯ ನಂತರವೂ ಎಳಲು ಮನಸ್ಸಾಗದೇ ಮಲಗಿಕೊಂಡೆ ಇರಬೇಕು. ಮಲಗಿದಲ್ಲಿಗೆ ಎಲ್ಲವೂ ಬರಬೇಕು ಎಂದು ಅನೇಕರು ಬಯಸುತ್ತಾರೆ. ಅಂತಹವರಿಗೆ ಒಂದು ಗುಡ್‌ನ್ಯೂಸ್ ಈ ಬೆಡ್‌. ಚೀನಾದ ಯುನ್ನಾನ್‌ನ ವ್ಯಕ್ತಿಯೊಬ್ಬರು ಬ್ಯಾಟರಿ ಚಾಲಿತ ಹಾಸಿಗೆಯನ್ನು ನಿರ್ಮಿಸಿದ್ದಾರೆ. ಬೆಡ್‌ನಲ್ಲಿ ಇರುವಾಗಲೇ ನಿಮಗೇನಾದರು ಬೇಕು ಅನಿಸಿದರೆ ನೀವು ಎದ್ದು ಹೋಗಬೇಕಾದ ಅಗತ್ಯವಿಲ್ಲ. ಸ್ವತಃ ಬೆಡ್‌ ಅನ್ನು ಚಲಾಯಿಸಿದರೆ ಸಾಕು. ನಿಮಗೆ ಬೇಕಾದ ವಸ್ತುವಿನತ್ತ ನಿಮ್ಮ ಬೆಡ್‌ ಹೋಗುವುದು. ಈ ಬೆಡ್‌ನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Relationship Tips: ಮದುವೆ ನಂತ್ರ ಬೆಡ್ ರೂಮ್ ವಿಷ್ಯ ಅಮ್ಮಂಗೆ ಹೇಳಕ್ಕೋಗಬೇಡಿ!
 

ಝು ಜಿಯಾನ್ಕಿಯಾಂಗ್ (Zhu Jianqiang) ಎಂಬ ವ್ಯಕ್ತಿ, ಚೈನೀಸ್ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಡೌಯಿನ್‌ನಲ್ಲಿ ಚಕ್ರಗಳಿರುವ ತನ್ನ ಹಾಸಿಗೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಶೀಘ್ರದಲ್ಲೇ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ನೌ ದಿಸ್ ನ್ಯೂಸ್ ಹಂಚಿಕೊಂಡ ವಿಡಿಯೋದಲ್ಲಿ ವ್ಯಕ್ತಿ ತನ್ನ ಸಾಕು ನಾಯಿಗಳೊಂದಿಗೆ ಹಾಸಿಗೆಯ ಮೇಲೆ ಮಲಗಿಕೊಂಡೆ ಬೇರೆಡೆ ಸಾಗುವುದನ್ನು ನೋಡಬಹುದು. ಆತ ಒಂದು ಹಳ್ಳಿಯ ಓಣಿಗಳಲ್ಲಿ ತನ್ನ ಬೆಡ್‌ನಲ್ಲಿ ಮಲಗಿಕೊಂಡೆ ಹೋಗುವುದನ್ನು ಕಾಣಬಹುದು. ಅಲ್ಲದೇ ಆತ ಹಾಸಿಗೆಯ ಮೇಲೆ ಕುಳಿತೇ ಮೀನು ಹಿಡಿಯುತ್ತಾನೆ.

 

ನೌ ದಿಸ್ ನ್ಯೂಸ್ ಪ್ರಕಾರ,ಈ ಬ್ಯಾಟರಿ ಚಾಲಿತ ಬೆಡ್ ತಯಾರಿಸಿದ ಝು (Zhu) ಈ ಬಗ್ಗೆ ಮಾತನಾಡಿದ್ದು, ಬಾಲ್ಯದಲ್ಲಿ ತನಗೆ ಹಾಸಿಗೆಯಿಂದ ಎದ್ದೇಳಲು ಕಷ್ಟವಾಗುತ್ತಿತ್ತು. ಹೀಗಾಗಿ ನಾನು ತಡವಾಗಿ ಶಾಲೆಗೆ ತಲುಪುತ್ತಿದ್ದೆ. ಆ ಕ್ಷಣದಲ್ಲಿ ನಾನು ಮಲಗಿಕೊಂಡೆ (ಶಾಲೆಗೆ ಹೋಗಲು) ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನಾನು ಭಾವಿಸಿದೆ. ಇದರ ಪರಿಣಾಮವೇ ಈ ಬೆಡ್‌ ಎಂದು ಝು ಅವರು  ಹೇಳಿದ್ದು, ಈ ಮೂಲಕ ಅವರು ತಮ್ಮ ಬಾಲ್ಯದ ಕನಸನ್ನು ನನಸಾಗಿಸಿದ್ದಾರೆ.

ಯುವಕನ ಖತರ್ನಾಕ್ ಐಡಿಯಾಕ್ಕೆ ಫಿದಾ ಆದ ಆನಂದ್ ಮಹೀಂದ್ರಾ: ವಿಡಿಯೋ ವೈರಲ್‌
 

ಝು ಅವರ ಈ ಹೊಸ ಸಂಶೋಧನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು, ಇದು ಸೋಮಾರಿತನವನ್ನು ಪ್ರೋತ್ಸಾಹಿಸುತ್ತಿದೆ.ಆದರೆ ಹಾಸಿಗೆ ಹಿಡಿದವರಿಗೆ ಹಾಗೂ ದಿವ್ಯಾಂಗರಿಗೆ ಈ ಬೆಡ್‌ ಸಹಕಾರಿಯಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.  

ನಿಮ್ಮ ಕಾಲುಗಳ ಮೌಲ್ಯವನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಹಾಸಿಗೆ ಹಿಡಿದಿರುವ ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಕೇಳಿ. ಅವರು ತಮ್ಮ ಕಾಲುಗಳ ಮೇಲೆ ಇರಲು ಮತ್ತು ಓಡಲು ಬಯಸುತ್ತಾರೆ. ಆದ್ದರಿಂದ ನಮ್ಮ ಸೃಷ್ಠಿಕರ್ತನಿಗೆ ಸದಾ ಕೃತಜ್ಞರಾಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಸೋಮಾರಿತನವನ್ನು ವೈಭವೀಕರಿಸಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ. ಅಂದಹಾಗೆ ಈ ಹಾಸಿಗೆಯಲ್ಲಿ ಬ್ರೇಕ್‌ಗಳಿವೆ, ಅದನ್ನು ಜಾಯ್‌ಸ್ಟಿಕ್‌ನಿಂದ ನಿಯಂತ್ರಿಸಬಹುದು ಮತ್ತು ಹಾಸಿಗೆಯ ವೇಗವು ಸರಾಸರಿ ಮನುಷ್ಯನ ವಾಕಿಂಗ್ ವೇಗವನ್ನು ಹೋಲುತ್ತದೆ. ಒಂದು ಬಾರಿಯ ಚಾರ್ಜ್‌ನಲ್ಲಿ ಹಾಸಿಗೆಯು 30 ಮೈಲುಗಳವರೆಗೆ ಚಲಿಸಬಹುದು.

Follow Us:
Download App:
  • android
  • ios