Asianet Suvarna News Asianet Suvarna News

1.46 ಸೆಕೆಂಡ್‌ನಲ್ಲಿ 100kmph ವೇಗ : ಗಿನ್ನೆಸ್ ಪುಟ ಸೇರಿದ ಇಲೆಕ್ಟ್ರಿಕ್ ಕಾರು

ಜರ್ಮನಿಯ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ನಿರ್ಮಿಸಿದ ಎಲೆಕ್ಟ್ರಿಕ್ ಕಾರೊಂದು ತನ್ನ ವೇಗದ ಕಾರಣಕ್ಕೆ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. ಇದು ಅತ್ಯಂತ ವೇಗವಾಗಿ ವೇಗ ಹೆಚ್ಚಿಸಿಕೊಳ್ಳುವ ಕಾರು ಎಂದು ವಿಶ್ವ ದಾಖಲೆ ನಿರ್ಮಿಸಿಕೊಂಡಿದೆ.

0 to 100kmph in 1.46 Seconds A Electric Car designed by students from the University in Germany set the world record akb
Author
First Published Oct 16, 2022, 6:29 PM IST

ಬರ್ಲಿನ್: ಜರ್ಮನಿಯ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ನಿರ್ಮಿಸಿದ ಎಲೆಕ್ಟ್ರಿಕ್ ಕಾರೊಂದು ತನ್ನ ವೇಗದ ಕಾರಣಕ್ಕೆ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. ಇದು ಅತ್ಯಂತ ವೇಗವಾಗಿ ವೇಗ ಹೆಚ್ಚಿಸಿಕೊಳ್ಳುವ ಕಾರು ಎಂದು ವಿಶ್ವ ದಾಖಲೆ ನಿರ್ಮಿಸಿಕೊಂಡಿದೆ. ಜರ್ಮಿನಿಯ ಸ್ಟಟ್ಗಾರ್ಟ್‌ನಲ್ಲಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಇಲೆಕ್ಟ್ರಿಕ್ ಕಾರನ್ನು ನಿರ್ಮಿಸಿದ್ದಾರೆ. ವಿದ್ಯಾರಥಿಗಳು ತಯಾರಿಸಿದ ಈ ಕಾರು ಎಕ್ಸಿಲೇಟರ್ ಮೇಲೆ ಕಾಲಿಟ್ಟಂತೆ 1.461 ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 100 ಕಿಲೋ ಮೀಟರ್ ವೇಗ ಪಡೆದುಕೊಂಡಿದೆ ಎಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಸೆಪ್ಟೆಂಬರ್ 23 ರಂದು ರಾಬರ್ಟ್ ಬಾಷ್ ಕ್ಯಾಂಪಸ್‌ನಲ್ಲಿ ಈ ವಿದ್ಯಾರ್ಥಿಗಳ ವಿಶ್ವ ದಾಖಲೆಯನ್ನು ಪರಿಶೀಲಿಸಲಾಯಿತು. ಸ್ಟಟ್ಗಾರ್ಟ್‌  ವಿಶ್ವವಿದ್ಯಾನಿಲಯವು ಈ ಸಾಧನೆಯನ್ನು ಮೂರನೇ ಬಾರಿಗೆ ಮಾಡಿದೆ ಎಂದು ಗಿನ್ನೆಸ್ ವಿಶ್ವ ದಾಖಲೆ ವೆಬ್‌ಸೈಟ್ ಹೇಳಿಕೊಂಡಿದೆ.

 

ಈ ವಿಶ್ವವಿದ್ಯಾನಿಲಯದ ಗ್ರೀನ್ ಟೀಮ್ ಮೊದಲಿಗೆ 2012ರಲ್ಲಿ 2.681 ಸೆಕೆಂಡ್‌ನಲ್ಲಿ ಶೂನ್ಯದಿಂದ ಗಂಟೆಗೆ 100 ಕಿಲೋಮೀಟರ್ ವೇಗ ಪಡೆಯುವ ಕಾರನ್ನು ನಿರ್ಮಿಸಿದ್ದರು. ಆದರೆ ನೆದರ್ಲ್ಯಾಂಡ್ ಹಾಗೂ ಸ್ವಿಜರ್ಲ್ಯಾಂಡ್‌ನ ತಂಡಗಳು ಈ ಸಾಧನೆಯನ್ನು ಬ್ರೇಕ್ ಮಾಡಿದ್ದವು. ಇದಾದ ಬಳಿಕ ಸ್ಟಟ್ಗಾರ್ಟ್‌  ವಿಶ್ವವಿದ್ಯಾನಿಲಯವು 2015ರಲ್ಲಿ ಈ ರೆಕಾರ್ಡ್ ಅನ್ನು ಪುನಃ ತಮ್ಮ ಹೆಸರಲ್ಲೇ ಮರು ಸ್ಥಾಪಿಸಲು ಯಶಸ್ವಿಯಾದವು. ಆ ಸಮಯಲ್ಲಿದ 1.799 ಸೆಕೆಂಡ್‌ನಲ್ಲಿ ಗಂಟೆಗೆ 100 ಕಿಲೋಮೀಟರ್ ವೇಗ ಪಡೆಯುವ ಕಾರನ್ನು ಅವರು ಸಂಶೋಧಿಸಿದರು. ಆದರೆ ಸ್ವಿಜರ್ಲ್ಯಾಂಡ್ ತಂಡ 2016ರಲ್ಲಿ ಮತ್ತೆ ಇದೇ ಸಾಧನೆ ಮಾಡಿ ಜರ್ಮನಿಯ ಹಳೆ ಸಾಧನೆಯನ್ನು ಮತ್ತೆ ಬ್ರೇಕ್ ಮಾಡಿತ್ತು. ಈಗ ಜರ್ಮನಿ 1.461 ಸೆಕೆಂಡ್‌ನಲ್ಲಿ ಈ ಸಾಧನೆ ಮಾಡಿದೆ. 

ಕಪ್ಪು ಬಣ್ಣದ ಕಾರುಗಳಿಂದ ಹೆಚ್ಚು ಅಪಘಾತ: ‘ಕುಚ್ ಭೀ’ ಎಂದ ಆನಂದ್ ಮಹೀಂದ್ರಾ

ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾಲಯದ ಪ್ರೊಫೆಸರ್ ವೋಲ್ಫ್ರಾಮ್ ರೆಸ್ಸೆಲ್ (Wolfram Ressel), ಇ-ವಾಹನಗಳ ವೇಗವರ್ಧನೆಗೆ ಗ್ರೀನ್ ಟೀಮ್ ಹೊಸ ದಾಖಲೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಸ್ಟಟ್‌ಗಾರ್ಟ್ ವಿಶ್ವವಿದ್ಯಾಲಯವು ಹೆಮ್ಮೆಪಡುತ್ತದೆ. ನಮ್ಮ ವಿದ್ಯಾರ್ಥಿಗಳು ಏನು ಸಾಧಿಸಿದ್ದಾರೆ ಎಂಬುದರ ಬಗ್ಗೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವುದು ಎಂದರೆ ಸೈದ್ಧಾಂತಿಕ ಜ್ಞಾನವನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಅದನ್ನು ಆಚರಣೆಯಲ್ಲಿ ಅನ್ವಯಿಸಲು ಸಾಧ್ಯವಾಗುತ್ತದೆ. ಜ್ಞಾನ ವರ್ಗಾವಣೆಯು ಹೇಗೆ ಯಶಸ್ವಿಯಾಗಬಹುದು ಎಂಬುದಕ್ಕೆ ಗ್ರೀನ್‌ಟೀಮ್‌ನ ಈ ಕಾರ್ಯ ಬದ್ಧತೆಯು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

5 ಸ್ಟಾರ್ ರೇಟಿಂಗ್ ಇದ್ರೂ ಶೂನ್ಯ ಮಾರಾಟ: ಎಸ್-ಕ್ರಾಸ್ ವಿವರ ತೆಗೆದು ಹಾಕಿದ ಮಾರುತಿ

ಗ್ರೀನ್‌ಟೀಮ್‌ನ (GreenTeam) ಮೊದಲ ಅಧ್ಯಕ್ಷ ಪಾವೆಲ್ ಪೊವೊಲ್ನಿ (Pavel Povolni) ಅವರು ವಿಶ್ವ ದಾಖಲೆಯನ್ನು ಜರ್ಮನಿಗೆ ಮರಳಿ ತರುವ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದರು. ಇ-ಕಾರ್‌ನ ಚಾಲಕ ಡಿಯೊಗೊ ಸಿಲ್ವಾ (Diogo Silva) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಈ ಸಾಧನೆ ಬಹಳ ಶ್ರಮ ಬೇಡಿತ್ತು. ಆದರೆ ಇದೊಂದು ಅನನ್ಯ ಅನುಭವ ನೀಡಿದೆ. ಇದು ಖಂಡಿತವಾಗಿಯೂ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ ಎಂದು ಹೇಳಿದರು.
 

Follow Us:
Download App:
  • android
  • ios