Asianet Suvarna News Asianet Suvarna News

ಯಾದಗಿರಿ: ಪ್ರಚೋದನಕಾರಿ ರೀಲ್ಸ್‌, ಯುವಕರಿಬ್ಬರ ಬಂಧನ

'ಪೈಗಂಬರ್‌ ಬಗ್ಗೆ ಯಾರಾದರೂ ಅವಹೇಳನ ಮಾಡಿದರೆ ರುಂಡವನ್ನು ಮುಂಡದಿಂದ ಕತ್ತರಿಸಿ ಹಾಕಿ, ಮುಸ್ಲಿಂ ಯುವತಿಯರನ್ನು ಸೆಳೆಯುವವರು ಗಂಡಸರೇ ಆಗಿದ್ದರೆ ಬನ್ನಿ, ಹದಿನೈದು ನಿಮಿಷಗಳಲ್ಲಿ ನಾವು ಏನು ಅನ್ನೋದನ್ನು ತೋರಿಸುತ್ತೇವೆ, ಕಾಫಿರರನ್ನು ನರಕಕ್ಕೆ ಕಳುಹಿಸುತ್ತೇವೆ..’’ ಎಂಬುದಾಗಿ ರೀಲ್ಸ್‌ ಮಾಡಿ ಹಂಚಿಕೊಂಡಿದ್ದ ಬಂದಿತ ಆರೋಪಿಗಳು. 

Two Youth Arrested for Provocative Reels in Social Media at Yadgir grg
Author
First Published Aug 10, 2023, 9:45 PM IST

ಯಾದಗಿರಿ(ಆ.10):  ಇಸ್ಲಾಂ ಧರ್ಮಗುರು ಪೈಗಂಪರ್‌ ವಿರುದ್ಧ ಮಾತನಾಡಿದರೆ ಅಂತಹವರ ರುಂಡವನ್ನು ಮುಂಡದಿಂದ ಕತ್ತರಿಸಿ ಬೇರ್ಪಡಿಸುವಂತೆ ಹಾಗೂ ಕಾಫಿರರನ್ನ ನರಕಕ್ಕೆ ಕಳುಹಿಸುವಂತೆ ದ್ವೇಷಪೂರಿತ ಹೇಳಿಕೆಗಳನ್ನು ಇನ್ಸ್ಟಾಗ್ರಾಂ ರೀಲ್ಸ್‌ನಲ್ಲಿ ಹರಿಬಿಟ್ಟಿದ್ದ ಯಾದಗಿರಿಯ ಯುವಕರಿಬ್ಬರನ್ನು ಐಪಿಸಿ ಕಲಂ 153 ಹಾಗೂ ಐಪಿಸಿ 505/2 ರಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಯಾದಗಿರಿ ಸಮೀಪದ ಆಶನಾಳ್‌ ಗ್ರಾಮದ ಅಕ್ಬರ್‌ ಸೈಯ್ಯದ್‌ ಬಹದ್ದೂರ್‌ ಅಲಿ (23) ಹಾಗೂ ಹತ್ತಿಕುಣಿ ಕ್ರಾಸ್‌ ನಿವಾಸಿ ಮೊಹ್ಮದ್‌ ಅಯಾಜ್‌ (21)ರನ್ನು ನಗರದ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

‘ಪೈಗಂಬರ್‌ ಬಗ್ಗೆ ಯಾರಾದರೂ ಅವಹೇಳನ ಮಾಡಿದರೆ ರುಂಡವನ್ನು ಮುಂಡದಿಂದ ಕತ್ತರಿಸಿ ಹಾಕಿ, ಮುಸ್ಲಿಂ ಯುವತಿಯರನ್ನು ಸೆಳೆಯುವವರು ಗಂಡಸರೇ ಆಗಿದ್ದರೆ ಬನ್ನಿ, ಹದಿನೈದು ನಿಮಿಷಗಳಲ್ಲಿ ನಾವು ಏನು ಅನ್ನೋದನ್ನು ತೋರಿಸುತ್ತೇವೆ, ಕಾಫಿರರನ್ನು ನರಕಕ್ಕೆ ಕಳುಹಿಸುತ್ತೇವೆ..’’ ಎಂಬುದಾಗಿ ರೀಲ್ಸ್‌ ಮಾಡಿ ಹಂಚಿಕೊಂಡಿದ್ದರು. ಅಕ್ಬರ್‌ ಖಾಸಗಿ ಕಂಪನಿ ಉದ್ಯೋಗಿ, ಮೊಹ್ಮದ್‌ ಅಯಾಜ್‌ ಚಿಕನ್‌ ವ್ಯಾಪಾರಿ.

ಚಿಕ್ಕಬಳ್ಳಾಪುರ: ಬಂಧಿತರ ಬಳಿ ಇದ್ದ ಹಣ ದೋಚಿದ ಪೊಲೀಸರು

ಕೋಮುಭಾವನೆ ಕೆರಳಿಸುವ ‘ರೀಲ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಇವರಿಬ್ಬರು, ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಟ್ಟುಕೊಳ್ಳುವವರನ್ನು ನರಕಕ್ಕೆ ಕಳುಹಿಸುವುದಾಗಿ ಹೇಳಿಕೆ ನೀಡಿದ್ದಾರೆ. ಇವರು ಮಾಡಿದ್ದ ‘ರೀಲ್ಸ್‌’ ಅನ್ನು ಖಂಡಿಸಿ ನೀರಜ ಅತ್ರಿ ಎನ್ನುವವರು ಟ್ವೀಟ್‌ ಮುಖಾಂತರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ಟ್ವೀಟ್‌ ಪ್ರಧಾನಿ ಮೋದಿ ಅವರ ಖಾತೆಗೆ ಟ್ಯಾಗ್‌ ಮಾಡಲಾಗಿತ್ತು. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಥಳೀಯ ಪೊಲೀಸ್‌ ಇಲಾಖೆ ಗಮನಕ್ಕೆ ತಂದಿ​ದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಆರೋ​ಪಿ​ಗ​ಳನ್ನು ಬಂಧಿ​ಸ​ಲಾ​ಗಿ​ದೆ.

Follow Us:
Download App:
  • android
  • ios