ಮದುವೆಯಾದ ಮಗಳನ್ನು ಕಿಡ್ನಾಪ್ ಮಾಡಿದ ಲವರ್, ಹುಡುಗನ ಮೂಗು ಕತ್ತರಿಸಿ ಶಿಕ್ಷೆ ನೀಡಿದ ಡೆಡ್ಲಿ ಫ್ಯಾಮಿಲಿ!

Synopsis
ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿರುವ ಬರುವ ನಾಗೌರ್ ಪ್ರದೇಶದಲ್ಲಿ ಯುವಕನೊಬ್ಬನ ಮೂಗನ್ನು ಕತ್ತರಿಸಲಾಗಿದೆ. ವರದಿಗಳ ಪ್ರಕಾರ, ಹುಡುಗಿಯನ್ನು ಕಿಡ್ನಾಪ್ ಮಾಡಿದ ಕಾರಣಕ್ಕೆ, ಹುಡುಗಿಯ ಸಂಬಂಧಿಕರು ಈ ಕೃತ್ಯವನ್ನು ಎಸಗಿದ್ದಾರೆ. ಈ ಕುರಿತಾಗಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೈಪುರ (ಮಾ.20): ರಾಜಸ್ಥಾನದ ನಾಗೌರ್‌ನಲ್ಲಿ ಯುವಕನೊಬ್ಬನ ಮೂಗನ್ನು ಕತ್ತರಿಸಿದ್ದಾರೆ. ಯುವಕನ ಮೂಗನ್ನು ಕ್ರೂರವಾಗಿ ಕತ್ತರಿಸಿರುವ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಯುವಕ ಹಮೀದ್, ಅಜ್ಮೀರ್‌ನ ಗೆಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅನ್ಸಾಲ್ ನಿವಾದಿ ಎಂದು ಹೇಳಲಾಗಿದೆ. ಈತನ ಮೂಗು ಕತ್ತರಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ. ನಾಗೌರ್‌ನ ಮರೋತ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಾಲಕಿಯನ್ನು ಅಪಹರಣ ಮಾಡಿದ್ದಕ್ಕಾಗಿ ಯುವಕನಿಗೆ ಈ ಘೋರ ಶಿಕ್ಷೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಹುಡುಗಿಯನ್ನು ಅಪಹರಿಸಿ ದುಷ್ಕೃತ್ಯ ಎಸಗಿರುವ ಯುವಕನ ಮೂಗು ಕತ್ತರಿಸಿದ ಆರೋಪದಲ್ಲಿ ಹುಡುಗಿಯ ಕುಟುಂಬಸ್ಥರನ್ನು ಪೊಲೀಸರು ಬಂದಿದ್ದಾರೆ. ಪ್ರಕರಣದ ಕುರಿತು ಮಾಹಿತಿ ಪಡೆದ ಬೆನ್ನಲ್ಲಿಯೇ ಪೊಲೀಸರು ಆರು ಮಂದಿಯ ವಿರುದ್ಧ ಕೇಸ್ ದಾಖಲು ಮಾಡಿ ಬಂಧಿಸಿದ್ದಾರೆ. ವೀಡಿಯೊ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದು, ಹುಡುಗಿಯ 4 ಸಹೋದರರು ಸೇರಿದಂತೆ 5 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇನ್ನು ಮೂಗು ಕಳೆದುಕೊಂಡ ಹುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಎಸ್‌ಪಿ ರಾಮಮೂರ್ತಿ ಜೋಶಿ, ಕೆಲವು ದಿನಗಳ ಹಿಂದೆ ಮರೋತ್‌ನ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಮಾರೋತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಾಪತ್ತೆಯಾಗಿರುವ ವರದಿಯಲ್ಲಿ ಪರ್ಬತ್‌ಸರ್ ಪ್ರದೇಶದ ಯುವಕ ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಮೂಲಗಳ ಪ್ರಕಾರ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಆದರೆ, ಇದು ಹುಡುಗಿಯ ಮನೆಯವರಿಗೆ ತಿಳಿದ ಕಾರಣ ಆಕೆಯನ್ನು ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಿದ್ದರು ಎನ್ನಲಾಗದೆ. ಇನ್ನು ಅಪಹರಣಕ್ಕೆ ಒಳಗಾದ ಬಳಿಕ ಆ ಹುಡುಗಿ ಯುವಕನೊಂದಿಗೆ ಅಜ್ಮೀರ್ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ವಾಸಿಸಲು ಪ್ರಾರಂಭ ಮಾಡಿದ್ದಳು.
ಕೂಲಿ ಕೆಲಸ ಜತೆಗೆ ಪಾರ್ಟ್ ಟೈಂ ಜಾಬ್ ಕಳ್ಳತನ, ಶೋಕಿಗಾಗಿ ಕದ್ದ ಬೈಕ್ ಗಿರವಿಯಿಟ್ಟು ಮೋಜು!
ಯುಕನೊಂದಿಗೆ ತನ್ನ ಸಹೋದರಿ ಹೊಸ ಬದುಕನ್ನು ಆರಂಭ ಮಾಡಿದ್ದಾಳೆ ಎನ್ನುವುದು ಹುಡುಗಿಯ ಸಹೋದರರಿಗೆ ಗೊತ್ತಾಗಿ ಸಿಟ್ಟಾಗಿದ್ದರು. ಇಡೀ ಅಜ್ಮೀರ್‌ನಲ್ಲಿ ಇವರಿಬ್ಬರನ್ನು ಹುಡುಕಿ ನಗೌರ್‌ಗೆ ಕರೆತಂದಿದ್ದರು. ಇದಾದ ಬಳಿಕ ಆರೋಪಿಗಳು ಮೊದಲು ಬಾಲಕಿಯನ್ನು ಮನೆಗೆ ಬಿಟ್ಟು, ಬಳಿಕ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿ ಹರಿತವಾದ ಆಯುಧದಿಂದ ಮೂಗನ್ನು ಕೊಯ್ದಿದ್ದಾರೆ. ಇನ್ನೊಂದೆಡೆ ಎಎಸ್‌ಪಿ ಗಣೇಶ್ ರಾಮ್ ಈ ಕುರಿತಾಗಿ ಮಾಹಿ ನೀಡಿದ್ದು, ಮಾರ್ಚ್ 18 ರಂದು ನೀಡಲಾದ ದೂರಿನ ಬಗ್ಗೆ ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಇಂದು ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಆತನ ಮೂಗಿಗೆ ಹೊಡೆದಿದ್ದಾರೆ. ಇದರಲ್ಲಿ ಭಾಗಿಯಾದವರನ್ನು ಬಂಧಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ನೈಟ್ ಶಿಫ್ಟ್ ಮಾಡುತ್ತಿದ್ದ ಪೊಲೀಸ್‌ಗೆ ಗುದ್ದಿದ ಅಪರಿಚಿತ ವಾಹನ: ಸ್ಥಳದಲ್ಲಿಯೇ ಪೇದೆ ಸಾವು
ಯುವಕನ ಮೂಗು ಕತ್ತರಿಸಿದ ನಂತರ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ರಾಮಮೂರ್ತಿ ಮಾಹಿತಿ ನೀಡಿದ್ದಾರೆ. ನಾಗೌರ್ ಪೊಲೀಸರು ನಾಲ್ವರು ಸಹೋದರರು ಮತ್ತು ಹುಡುಗಿಯ ತಂದೆಯನ್ನು ಬಂಧಿಸಿದ್ದಾರೆ. ಘಟನೆಯ ಸ್ಥಳ ಅಜ್ಮೀರ್ ಆಗಿರುವುದರಿಂದ ಐವರು ಆರೋಪಿಗಳನ್ನು ಅಜ್ಮೀರ್ ಪೊಲೀಸರಿಗೆ ಒಪ್ಪಿಸಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.