Asianet Suvarna News Asianet Suvarna News

ಜೀವಕ್ಕೆ ಜೀವ ಕೊಡ್ತೀನೆಂದು ಪ್ರೀತಿಸಿ ಮದ್ವೆಯಾಗಿ, ಹೆಂಡ್ತಿ ಜೀವವನ್ನೇ ತೆಗೆದುಬಿಟ್ಟ ಕುಡುಕ ಪತಿ

ಜೀವಕ್ಕೆ ಜೀವ ಕೊಟ್ಟು ನಿನ್ನನ್ನು ಕಾಪಾಡಿಕೊಳ್ತೀನಿ, ಚೆನ್ನಾಗಿ ನೋಡಿಕೊಳ್ತೀನಿ ಎಂದು ಪೋಷಕರ ವಿರೋಧ ಕಟ್ಟಿಕೊಂಡು ಮದುವೆ ಮಾಡಿಕೊಂಡ ಗಂಡ, 12 ವರ್ಷ ಸಂಸಾರ ಮಾಡಿ ಈಗ ಜೀವವನ್ನೇ ತೆಗೆದಿದ್ದಾನೆ.

An alcoholic husband killed terribly his loving wife in Kolar sat
Author
First Published Jul 20, 2023, 6:47 PM IST

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಜು.20): ಅವರಿಬ್ಬರು ಒಬ್ಬರನ್ನೊಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದರು. ನನಗೆ ನೀನು ನಿನಗೆ ನಾನು ಅಂತ ದೂರದ ಊರಿಗೆ ಬಂದು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು. ಆದರೆ, ದಿನ ಕಳೆದಂತೆ ಪತಿಯ ಕುಡಿತದ ಚಟ ಇಡೀ ಸಂಸಾರವನ್ನೇ ಹಾಳು ಮಾಡಿ, 12 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯವಾಗುವಂತೆ ಮಾಡಿದೆ.

ಮಗಳ ಹೆಣದ ಮುಂದೆ ತಂದೆಯ ಗೋಳಾಟ. ಅವನನ್ನು ಸುಮ್ನೆ ಬಿಡ್ಬೇಡಿ ಎಂದು ಮೃತಳ ತಮ್ಮನ ಆಕ್ರಂದನ. ಮನೆಯಲ್ಲೇ ಶವವಾಗಿ ಬಿದ್ದಿರುವ ಮಹಿಳೆ. ಹೀಗೆ ಹೆಣದ ಮುಂದೆ ಗೋಳಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸರ್ಕಾರಿಯ ಶವಗಾರದ ಮುಂಭಾಗ. ಹೀಗೆ ಪತಿಯಿಂದಲೇ ಕೊಲೆಯಾಗಿ ಹೆಣವಾಗಿ ಬಿದ್ದಿರುವ 30 ವರ್ಷ ವಯಸ್ಸಿನ ಗೃಹಿಣಿ ಶಹನಾಜ್. ಕೊಲೆ ಮಾಡಿದ ಆರೋಪಿ ರಫೀಕ್‌ (40) ಎಂಬಾತನಾಗಿದ್ದಾನೆ. 

ಮೂಲತಃ ಹಾವೇರಿ ಜಿಲ್ಲೆಯವನು ಆಗಿರುವ ರಫಿಕ್ ಒಳ್ಳೆಯ ಜೆಸಿಬಿ ಆಪರೇಟರ್ ಅಂತ ಹೆಸರುಗಳಿಸಿದ್ದರೂ ಸಹ ಸರಿಯಾಗಿ ಕೆಲಸಕ್ಕೆ ಹೋಗದೆ ಬೆಳಿಗ್ಗೆಯಿಂದ ರಾತ್ರಿವರೆಗೂ ಕುಡಿಯೋದನ್ನೇ ಕಾಯಕ ಮಾಡಿಕೊಂಡಿದ್ದನು. ಯಾರು ಏನೇ ಬುದ್ಧಿವಾದ ಹೇಳಿದರೂ ಸಹ, ಮಾತು ಕೇಳದೇ ಕಳೆದ ಒಂದು ವರ್ಷದಿಂದ ಕುಡಿದು ಬಂದು ಹೆಂಡತಿ ಶಹನಾಜ್ ನ ಮನಬಂದಂತೆ ಥಳಿಸೋದು ರೂಢಿ ಮಾಡಿಕೊಂಡಿದ್ದ. ವರ್ಷದ ಹಿಂದೆಯೂ ಹೆಂಡತಿಯ ಕಾಲಿಗೆ ಕೊಡಲಿಯಿಂದ ಹಲ್ಲೆ ಮಾಡಿ ಆಫ್ ಮರ್ಡರ್ ಕೇಸ್ ನಲ್ಲಿ ಸೆರೆವಾಸನು ಅನುಭವಿಸಿ ಸಹ ಬಂದಿದ್ದಾನೆ. ನಾನು ಸರಿ ಆಗಿದ್ದೇನೆ ಇನ್ಮುಂದೆ ತಪ್ಪು ಮಾಡಲ್ಲ ಕ್ಷಮಿಸು ಎಂದು ಹೆಂಡತಿಯ ಬಳಿ ರಾಜಿ ಮಾಡಿಕೊಂಡು ಬಂದಿದ್ದ ರಫಿಕ್ ಮತ್ತೆ ಅದೇ ಚಾಳಿ ಮುಂದುವರೆಸಿದ್ದನು.

Bengaluru: 19 ವರ್ಷಕ್ಕೆ ದೊಡ್ಡಪ್ಪನ ಮಗಳ ಪ್ರೀತಿಸಿದ ಶಶಾಂಕ: ಪೋಷಕರಿಂದಲೇ ಬೆಂಕಿ ಹಚ್ಚಿಸಿಕೊಂಡು ತ್ಯಜಿಸಿದ ಇಹಲೋಕ

ಆದರೆ, ತಡರಾತ್ರಿ ಅದೇನಾಯ್ತೋ ಗೊತ್ತಿಲ್ಲ ಕೆಲಸ ಮುಗಿಸಿಕೊಂಡು ಟೈಟಾಗಿ ಬಂದು ತಾವು ವಾಸವಿರುವ ಮಾಲೂರು ತಾಲೂಕಿನ ರಾಜೀವ್ ನಗರದಲ್ಲಿ ಮನೆಯಲ್ಲಿ ಹೆಂಡತಿಯ ಮೇಲೆ ವಿಪರೀತ ಕೂಗಾಡೋದಕ್ಕೆ ಆರಂಭ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಸಹ ಬೆಳೆದಿದೆ. ಕೊನೆಗೆ ರಫಿಕ್ ನ ಕೋಪ ವಿಕೋಪಕ್ಕೆ ತಿರುಗಿ ಹೆಂಡತಿ ಶಹನಾಜ್ ತಲೆ ಹಾಗೂ ಮುಖಕ್ಕೆ ರಾಡ್ ನಿಂದ ಹಲ್ಲೆ ಮಾಡಿ ಕೊಂದಿದ್ದಾನೆ. ಯಾರಿಗೂ ಅನುಮಾನ ಬರದ ರೀತಿ ಮನೆಯ ಬಾಗಿಲನ್ನು ಮುಚ್ಚಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಮಧ್ಯಾಹ್ನವಾದರೂ ಯಾರು ಹೊರಗೆ ಬಂದಿಲ್ಲದ ಕಾರಣ ಅಕ್ಕ-ಪಕ್ಕದ ಮನೆಯವರು ಬಂದು ನೋಡಿದಾದ ಹಾಸಿಗೆಯಲ್ಲಿ ಶಹನಾಜ್ ಮೃತ ದೇಹವನ್ನು ಕಂಡು ಮಾಲೂರು ಪೊಲೀಸರು ಹಾಗೂ ಆಕೆಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಇನ್ನು ಶಹನಾಜ್  ಮೂಲತಃ ಹಾವೇರಿ ಜಿಲ್ಲೆಯವಳು, ರಫಿಕ್ ಶಿವಮೊಗ್ಗ ಜಿಲ್ಲೆಯವನು. ಕಳೆದ 12 ವರ್ಷಗಳ ಹಿಂದೆ ಶಹನಾಜಳ ಊರಿನಲ್ಲಿ ಜೆಸಿಬಿ ಆಪರೇಟರ್ ಕೆಲಸಕ್ಕೆಂದು ಬಂದಾಗ ಇಬ್ಬರ ನಡುವೆ ಪ್ರೀತಿ ಆರಂಭವಾಗುತ್ತದೆ. ಕೂಲಿ ಕೆಲಸ ಮಾಡುವ ಶಹನಾಜ್ ಪೋಷಕರು ಇವನ ಸಹವಾಸ ಬೇಡ ಒಳ್ಳೆಯ ಕಡೆಯಲ್ಲಿ ಮದುವೆ ಮಾಡ್ತೀವಿ ಅಂತ ಗೋಗರೆದರು ಅವನೇ ಬೇಕು ಅಂತ ಹಠ ಹಿಡಿದ ಪರಿಣಾಮ ಎರಡು ಮನೆಯವರು ಸೇರಿ ಮದುವೆ ಮಾಡ್ತಾರೆ. ಜೆಸಿಬಿ ಆಪರೇಟರ್ ಆಗಿರುವ ರಫಿಕ್ ಆರಂಭದ ಎರಡು ವರ್ಷ ಪತಿಯನ್ನು ಚೆನ್ನಾಗಿ ನೋಡಿಕೊಳ್ತಿದ್ದನು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿಗೆ ಬಂದು ಜೆಸಿಬಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿ ರಾಜೀವ ನಗರದಲ್ಲಿ ಮನೆ ಮಾಡಿ ಇಬ್ಬರು ಜೀವನ ಸಾಗಿಸುತ್ತಿದ್ದರು.

ಆದರೆ, ಸ್ನೇಹಿತರ ಸಹವಾಸಕ್ಕೆ ಬಿದ್ದು ಕುಡಿತ ಆರಂಭ ಮಾಡಿದ ಬಳಿಕ ಸಂಸಾರದಲ್ಲಿ ಬಿರುಕು ಆರಂಭವಾಯ್ತು. ಇದರ ನಡುವೆ ಮದುವೆಯಾಗಿ 12 ವರ್ಷ ಆದ್ರೂ ಸಹ ಇಬ್ಬರಿಗೂ ಮಕ್ಕಳಾಗಿಲ್ಲ ಅನ್ನೋ ಕೊರಗು ಬೇರೆ ಇತ್ತು. ಈ ವಿಚಾರವಾಗಿ ತಲೆಕೆಡಿಸಿಕೊಂಡಿದ್ದರು. ಇದಕ್ಕಿಂತ ಮಿಗಿಲಾಗಿ ಬೆಳಿಗ್ಗೆ 6 ಗಂಟೆಗೆ ಕುಡಿಯೋದಕ್ಕೆ ಆರಂಭಿಸಿದ ರಫಿಕ್ ಬಳಿ ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗ್ತಿದ್ದಂತೆ ಜೆಸಿಬಿ ಮಾಲೀಕರು ಸೇರಿದಂತೆ ಊರೆಲ್ಲ ಸಾಲ ಮಾಡೋದು ಶುರು ಮಾಡಿದ್ದನು. ಸ್ತ್ರೀ ಸಂಘದಲ್ಲಿ ಪತ್ನಿ ಶಹನಾಜ್ ಮೂಲಕ ಹಣ ಪಡೆದು ಮರುಪಾವತಿ ಮಾಡದೆ ತಿರುಗಾಡುತ್ತಿದ್ದನು. ಈ ವಿಚಾರವಾಗಿ ತಡ ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೋಪ ವಿಕೋಪಕ್ಕೆ ತಿರುಗಿ ಕುಡಿದ ಮತ್ತಿನಲ್ಲಿ ಪತ್ನಿ ಶಹನಾಜ್ ನ ಕೊಂದು ಎಸ್ಕೇಪ್ ಆಗಿದ್ದಾನೆ. 

Bengaluru : ಜನ್ಮವಿತ್ತ ತಂದೆ-ತಾಯಿಯನ್ನೇ ಕೊಲೆಗೈದು ಪರಾರಿಯಾದ ಸೈಕೋ ಪುತ್ರ

ಇನ್ನು ಮಗಳ ಕಷ್ಟ ಅರಿತು ಹಲವಾರು ಬಾರಿ ಪೋಷಕರು ಮನೆಗೆ ಬಂದುಬಿಡು ಅಂತ ಕರೆದರು ಪತಿಯನ್ನು ಒಬ್ಬನ್ನೇ ಬಿಟ್ಟು ಬರೋದಿಲ್ಲ. ನಾನು ಸತ್ತರೂ ಇವನ ಜೊತೆನೆ ಅಂತ ಹೇಳುತ್ತಿದ್ದಳಂತೆ. ಇದರ ನಡುವೆ ಅಕ್ರಮ ಸಂಬಂಧ ಸಹ ರಫಿಕ್ ಹೊಂದಿದ್ದ ಅಂತ ಹೇಳಲಾಗ್ತಿದ್ದು, ತಲೆಮರಿಸಿಕೊಂಡು ತಿರುಗಾಡ್ತಿರುವ ಆರೋಪಿ ರಫಿಕ್ ಗಾಗಿ ಮಾಲೂರು ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಪೋಷಕರು ಬುದ್ದಿವಾದ ಹೇಳಿದ್ರು ಕೇಳದ ಮಗಳು ಇವತ್ತು ಸಾವಿನ ಮನೆ ಸೇರಿದ್ದಾಳೆ. ಪ್ರೀತಿಸಿ ಮದುವೆಯಾದ ಪತಿಯಿಂದಲೇ ಭೀಕರವಾಗಿ ಕೊಲೆ ಆಗಿದ್ದಾಳೆ. ಮಗಳನ್ನು ಕೊಂದ ರಫಿಕ್ ಗೆ ತಕ್ಕ ಶಿಕ್ಷೆ ನೀಡಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತ ಇಳಿ ವಯಸ್ಸಿನಲ್ಲಿ ತಂದೆ ಗೋಗರಿಯುತ್ತಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios